ದೊಡ್ಡಬಳ್ಳಾಪುರ: ತಾಲೂಕಿನ ಹಣಬೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (VSSN) ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 10, ಜೆಡಿಎಸ್ ಓರ್ವ ನಿರ್ದೇಶಕರು ವಿಜೇತರಾಗಿದ್ದಾರೆ.
ಚುನಾವಣೆ ಅಧಿಕಾರಿ ನಾಗಮಣಿ ಕೆ.ಎನ್ ಅವರ ನೇತೃತ್ವದಲ್ಲಿ ಹಣಬೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 11 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿದೆ.
ಈ ಚುನಾವಣೆ 10 ಮಂದಿ ಕಾಂಗ್ರೆಸ್ ಬೆಂಬಲಿತ ಹಾಗೂ 01 ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರು: ಕೆಎಸ್ ರವಿ, ಜಯಣ್ಣ, ಜಿಸಿ ಮೂರ್ತಿ, ಹೆಚ್ಎನ್ ಅಶೋಕ್, ಬೈರೇಗೌಡ, ಹೆಚ್ಎಸ್ ಕೆಂಪೇಗೌಡ, ಹೆಚ್.ಬಿ.ಕೀರ್ತಿ, ಸುಬ್ಬಣ್ಣ, ರಾಜಣ್ಣ ಚೈತ್ರ, ಗೌರಮ್ಮ.
ಮೈತ್ರಿ ಗೊಂದಲದ ಕುರಿತು ಸ್ಪಷ್ಟನೆ ನೀಡಿರುವ ನ್ಯಾಯವಾದಿ ಅಂಜನೇಗೌಡ ಮೈತ್ರಿ ಮಾಡಿಕೊಳ್ಳದೆ ಜೆಡಿಎಸ್ ಪಕ್ಷದಿಂದ ಓರ್ವ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಾಗಿದೆ. ಅವಿರೋಧ ಆಯ್ಕೆಗೆ ಒಲವು ತೋರಲಾಗಿತ್ತಾದರು, ಕಾಂಗ್ರೆಸ್, ಬಿಜೆಪಿ ಒಪ್ಪಲಿಲ್ಲ ಎಂದರು.