Site icon ಹರಿತಲೇಖನಿ

Doddaballapura Accident: ಭೀಕರ ಅಪಘಾತ.. ಅಂಗನವಾಡಿ ಕಾರ್ಯಕರ್ತೆ ಸ್ಥಳದಲ್ಲೇ ಸಾವು..!

Doddaballapura Accident: Anganwadi worker died on the spot after being run over by an unknown vehicle..!

Doddaballapura Accident: Anganwadi worker died on the spot after being run over by an unknown vehicle..!

ದೊಡ್ಡಬಳ್ಳಾಪುರ: ಅಪರಿಚಿತ ವಾಹನ ಮೇಲರಿದ ಪರಿಣಾಮ (Accident) ಮನೆಗೆ ತೆರಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಸಾವನಪ್ಪಿರುವ ಘಟನೆ ತಾಲೂಕಿನ ಗುಂಡಮಗೆರೆ ಹೊಸಹಳ್ಳಿ ನಡುವಿನ ಕೆಇಬಿ (ಗುಂಡಮಗೆರೆ ವಿದ್ಯುತ್ ಪೂರೈಕೆ ಘಟಕ) ಬಳಿ ಸಂಭವಿಸಿದೆ‌.

ಮೃತ ಅಂಗನವಾಡಿ ಕಾರ್ಯಕರ್ತೆಯನ್ನು ಶಾಮಲಾ ದೇವಿ (30 ವರ್ಷ) ಎಂದು ಗುರುತಿಸಲಾಗಿದೆ.

ಹೊಸಹಳ್ಳಿ ಸಮೀಪದ ಉಜ್ಜನಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಸುತ್ತಿದ್ದ ಶ್ಯಾಮಲ ದೇವಿ ಅವರು ಕಂಟನಕುಂಟೆಯಲ್ಲಿ ವಾಸವಿದ್ದಾರೆ ಎನ್ನಲಾಗಿದೆ.

ಶನಿವಾರವಾದ ಕಾರಣ ಇಂದು ಅಂಗನವಾಡಿ ಕರ್ತವ್ಯ ಮುಗಿಸಿ, ಕಂಟನಕುಂಟೆಯ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ, ಗುಂಡಮಗೆರೆ ಹೊಸಹಳ್ಳಿ ನಡುವಿನ ಕೆಇಬಿ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಈ ವೇಳೆ ನೆಲಕ್ಕೆ ಬಿದ್ದ ಶಾಮಲ ಅವರ ಮೇಲೆ ವಾಹನ ಮೇಲೆ ಹರಿದು ಪರಾರಿಯಾಗಿದೆ‌.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಶಾಮಲ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Exit mobile version