ರಾಮನಗರ: ರಾಮನಗರದ ದಾಸೇಗೌಡನದೊಡ್ಡಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮ ಹಾಗೂ ನೂತನ ನಾಗ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಭಾಗಿಯಾಗಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಮನಗರದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರಕ್ಕೆ ಮಾತನಾಡಿದ ಅವರು ; ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅಂತ ನೋಡಿದ್ದೀರಿ. ಜನ ಈ ಜಿಲ್ಲೆ ಮಾತ್ರವಲ್ಲ, ಎಲ್ಲಾ ಜಿಲ್ಲೆಯಲ್ಲೂ ಇಂತಹ ಹಾವಳಿ ಹೆಚ್ಚಾಗಿದೆ.
ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಜನರ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.
ರಾಮನಗರ ಶಾಸಕರ ವಿರುದ್ಧ ಭೂಕಬಳಿಕೆ ಆರೋಪ
ಉಳುವವನೇ ಭೂಮಿಯ ಒಡೆಯ ಅನ್ನೋ ಕಾನೂನು ಉಲ್ಲಂಘನೆ ಆಗಿದೆ. ರಾಮನಗರ ಶಾಸಕರು 67 ಎಕರೆ ಜಮೀನು ಲಪಟಾಯಿಸಿದ್ದಾರೆ ಅನ್ನೊದು ಬೆಳಕಿಗೆ ಬಂದಿದೆ.
ಅಲ್ಲಿನ ರೈತರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ರೈತರಿಗೆ ದ್ರೋಹ ಮಾಡ್ತಿದ್ದಾರೆ. ಇದಕ್ಕೆ ಜನರೇ ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಾರೆ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.