Site icon ಹರಿತಲೇಖನಿ

Suicide: ಪೆಟ್ರೋಲ್ ಸುರಿದುಕೊಂಡು ಹೆಂಡತಿ ಮನೆಯಲ್ಲೇ ಪತಿ ಆತ್ಮಹತ್ಯೆ

Friend commits suicide due to the mistake of lending to a friend..!

Friend commits suicide due to the mistake of lending to a friend..!

ಬೆಂಗಳೂರು: ಪತ್ನಿ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ನಾಗರಬಾವಿಯ ಎನ್‌ಜಿಎಫ್ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ಮಂಜುನಾಥ್ (39 ವರ್ಷ) ಆತ್ಮಹತ್ಯೆ ಮಾಡಿಕೊಂಡ ಪತಿ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿದ್ದರು. ಕ್ಯಾಬ್ ಚಾಲಕನಾಗಿದ್ದ ಮಂಜುನಾಥ್ 2013ರಲ್ಲಿ ನಯನ ಮದುವೆಯಾಗಿದ್ದ.

ದಂಪತಿಗೆ 9 ವರ್ಷದ ಮಗ ಕೂಡ ಇದ್ದಾನೆ. ಆದರೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆ ದಂಪತಿ ವಿಚ್ಛೇದನಕ್ಕೆ ಮೊರೆ ಹೋಗಿದ್ದರು. 2022 ರಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ಮಧ್ಯೆ ಹೆಂಡತಿಯ ಬಳಿ ವಿಚ್ಛೇದನ ಬೇಡ ಎಂದಿದ್ದ ಮಂಜು ನಾಥ್, ಮತ್ತೆ ಒಂದಾಗಿ ಬಾಳೋಣ ಅಂತಾ ಕೇಳಲು ಎನ್‌ಜಿಎಫ್ ಲೇಔಟ್‌ನಲ್ಲಿರುವ ಹೆಂಡತಿ ಮನೆಗೆ ಬಂದಿದ್ದರು.

ಹೆಂಡತಿ ವಾಸವಿದ್ದ ಮನೆ ಬಳಿ 8 ಗಂಟೆಗೆ ಮಂಜುನಾಥ್ ತೆರಳಿದ್ದು, ನೀನೆಷ್ಟು ಹಿಂಸೆ ಕೊಟ್ಟಿದ್ದೀಯಾ, ಹೊಡೆದಿದ್ದೀಯಾ ನಾನು ಬರಲ್ಲವೆಂದು ನಯನ ಹೇಳಿದ್ದಾರೆ.

ಈ ವೇಳೆ ನಡೆದ ಜಗಳದಿಂದ ಬೇಸತ್ತು ಪೆಟ್ರೋಲ್ ತಂದು ಮಂಜುನಾಥ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿದ್ದಾರೆ.

Exit mobile version