ದೊಡ್ಡಬಳ್ಳಾಪುರ: ತಾಲೂಕಿನ ಗುಂಡಮಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ (MPCS) ನಿರ್ದೇಶಕರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಚುನಾವಣೆ ಅಧಿಕಾರಿ ಭಾಸ್ಕರ್ ಸಮ್ಮುಖದಲ್ಲಿ ಗುಂಡಮಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ 13 ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಈ ವೇಳೆ ಎಲ್ಲಾ 13 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರು.
ನೂತನ ನಿರ್ದೇಶಕರು; ಮುನಿರಾಜು, ವೆಂಕಟರಾಜು, ಈರನಾಗಪ್ಪ, ಗಂಗರಾಜು ಎನ್., ತಿಮ್ಮಯ್ಯ, ಶ್ರೀದೇವಮ್ಮ, ನಂಜಪ್ಪ, ಅಶ್ವಥಮ್ಮ, ಶಿವಕುಮಾರ್ ಎಸ್., ನರಸಪ್ಪ, ಶ್ರೀನಿವಾಸನ್ ಓಎಲ್., ಚಲುಮಕ್ಕ ಹಾಗೂ ಪುಷ್ಪ.
ನೂತನ ನಿರ್ದೇಶಕರನ್ನು ಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ್, ಸದಸ್ಯರಾದ ಶ್ರೀನಿವಾಸ್, ಸಹನ ಸುಬ್ರಹ್ಮಣ್ಯ, ರಮೇಶ್ ರೆಡ್ಡಿ, ಮಾಜಿ ಅಧ್ಯಕ್ಷ ನಾರಾಯಣರೆಡ್ಡಿ, ಮಾಜಿ ಸದಸ್ಯ ವೆಂಕಟರಾಮರೆಡ್ಡಿ, ಧನಪಾಲ ರೆಡ್ಡಿ, ಮುಖಂಡರಾದ ಸೆಂಟ್ರಿಂಗ್ ವೆಂಕಟರಮಣ, ಮೇಸ್ತ್ರಿ ವೆಂಕಟರಾಮು, ಅವಿನಾಶ್, ಪ್ರತಾಪ್, ಗುರುಪ್ರಸಾದ್, ಹೊಸಕೋಟೆ ಮುನಿಕುಮಾರ್, ರಾಜ್ ಕುಮಾರ್, ವೆಂಕಟರಾಮರೆಡ್ಡಿ ಶುಭಕೋರಿದರು.