Bengaluru Rural district is the first for the state in Podi Abhiyan

ಪೋಡಿ ಅಭಿಯಾನದಲ್ಲಿ ರಾಜ್ಯಕ್ಕೆ ಬೆಂ.ಗ್ರಾ ಜಿಲ್ಲೆ ಪ್ರಥಮ: ಸಚಿವ ಕೃಷ್ಣ ಭೈರೇಗೌಡ

ಬೆಂ.ಗ್ರಾ.ಜಿಲ್ಲೆ; ಕಳೆದ ಡಿಸೆಂಬರ್ ನಲ್ಲಿ ದರಖಾಸ್ತು ಪೋಡಿ ಅಭಿಯಾನ ಆರಂಭವಾಗಿ ರಾಜ್ಯದ್ಯಾಂತ ಇದುವರೆಗೂ ಅಂದಾಜು 5000 ಪೋಡಿ ದುರಸ್ತಿ ಆಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ 1236 ಪೋಡಿ ದುರಸ್ತಿ ಆಗಿದ್ದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (krishna byregowda) ಅವರು ಹೇಳಿದರು.

ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಸಮೀಪ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಯಡಿ ಸರಳೀಕರಣವಾದ ದರಖಾಸ್ತು ಪೋಡಿ ಅಭಿಯಾನದ ವಿದ್ಯುಕ್ತ ಚಾಲನೆ ಮತ್ತು ಪೋಡಿ ದುರಸ್ತಿ/ ಹೊಸ ದಾಖಲೆ ವಿತರಣಾ ಸಮಾರಂಭವನ್ನು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಉದ್ಘಾಟಿಸಿ ಮಾತನಾಡಿದರು.

ಪೋಡಿ ದುರಸ್ತಿ ರೈತರ ಬಹುದೊಡ್ಡ ಸಮಸ್ಯೆ ಆಗಿತ್ತು. ಸರಳೀಕರಣ ಪೋಡಿ ಅಭಿಯಾನ ಕೈಗೊಳ್ಳಲು ಒಂದು ವರ್ಷಗಳ ಪೂರ್ವ ಸಿದ್ಧತೆ ನಡೆಸಿ ಕಳೆದ ಡಿಸೆಂಬರ್ ನಲ್ಲಿ ಚಾಲನೆ ನೀಡಲಾಯಿತು. ಕಳೆದ 50-60 ವರ್ಷಗಳ ಹಿಂದೆ ಮಂಜೂರಾದ ಜಮೀನುಗಳಿಗೆ ಈಗ ಪೋಡಿ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಅಂದಾಜು 50000 ರೈತರಿಗೆ ಜಮೀನು ಮಂಜೂರು ಆಗಿದ್ದು, 18000 ರೈತರ ಬಳಿ ಪೋಡಿ ದುರಸ್ತಿಗೆ ಪೂರಕ ದಾಖಲೆಗಳಿವೆ. ಜಿಲ್ಲೆಯಲ್ಲಿ ಈಗ ನಡೆಯುತ್ತಿರುವ ಪೋಡಿ ಅಭಿಯಾನದ ವೇಗ ನೋಡಿದರೆ ಕನಿಷ್ಟ 6 ತಿಂಗಳಲ್ಲಿ 18000 ರೈತರಿಗೆ ಪ್ರತ್ಯೇಕ ಪೋಡಿ ದುರಸ್ತಿ ಮಾಡಿಸಬಹುದು. ಪೂರಕ ದಾಖಲೆಗಳು ಇಲ್ಲದಿರುವ ಜಮೀನುಗಳಿಗೆ ಮಿಸ್ಸಿಂಗ್ ಕಮಿಟಿ ಮುಂದೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಭೂ ದಾಖಲೆಗಳ ಡಿಜಟಲೀಕರಣ

ಭೂ ದಾಖಲೆಗಳ ನಾಪತ್ತೆ, ಅಕ್ರಮ ವರ್ಗಾವಣೆ, ಅಕ್ರಮ ತಿದ್ದುಪಡಿ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ಭೂ ಸುರಕ್ಷಾ ಯೋಜನೆಯಡಿ ರಾಜ್ಯದಲ್ಲಿರುವ ಎಲ್ಲಾ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ಲೈನ್ ಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮನೆಯಲ್ಲಿ ಕೂತು ನಿಮ್ಮ ಜಮೀನುಗಳ ದಾಖಲೆಗಳನ್ನು ನೋಡಬಹುದಾಗಿದೆ. ಇದರಿಂದ ಪೋಡಿ ದುರಸ್ತಿಗೂ ಸಹಾಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಪೋಡಿ ದುರಸ್ತಿ ಆಂದೋಲನಕ್ಕೆ ಹೆಚ್ಚು ಒತ್ತು ನೀಡಿ ರಾಜ್ಯದಲ್ಲಿ ಪ್ರಥಮ ಸ್ಥಾನ ಬರಲು ಕಾಣಿಭೂತರಾದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳ, ಸರ್ವೆ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಇದೇ ವೇಗ ಕಾಪಾಡಿಕೊಂಡು ಆದಷ್ಟು ಬೇಗ 18000 ಪೋಡಿ ಗಳನ್ನು ಶೀಘ್ರ ದುರಸ್ತಿಗೊಳಿಸಿ ಎಂದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಿ ಸಾಕಷ್ಟು ವರ್ಷಗಳು ಕಳೆದರೂ ಇದುವರೆಗೂ ಪೋಡಿ ಆಗಿರಲಿಲ್ಲ. ಈಗ ನಮ್ಮ ಸರ್ಕಾರ ಕೈಗೆತ್ತಿಕೊಂಡು ವಿಶೇಷ ಅಭಿಯಾನದ ಮೂಲಕ ದರಖಾಸ್ತು ಪೋಡಿ ದುರಸ್ತಿ ಮಾಡಲಾಗುತ್ತಿದೆ ಇದಕ್ಕಾಗಿ ಕಂದಾಯ ಸಚಿವರಿಗೆ ಧನ್ಯವಾದಗಳು.

ಬಯಲು ಸೀಮೆ ಪ್ರದೇಶಗಳಲ್ಲಿ ಸಾಕಷ್ಟು ಜೀವಂತ ಕೆರೆಗಳಿದಾವೆ ಕೆರೆಗಳಲ್ಲಿ ಮಣ್ಣು ಹೂಳೆತ್ತುವ ಕೆಲಸ ಆಗಬೇಕು. ಕೆರೆಗಳಲ್ಲಿ ಹೂಳೆತ್ತುವುದರಿಂದ ಬಾವಿ, ಕೊಳವೆ ಬಾವಿಗಳಲ್ಲಿ ನೀರು ಬಂದು ರೈತರ ಬದುಕು ಹಸನಾಗುತ್ತದೆ ಎಂದರು.

ರೈತರ ಜಮೀನುಗಳಿಗೆ, ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ

ರೈತರು ಕಚೇರಿಗೆ ಬರುವುದನ್ನು ತಪ್ಪಿಸಿ, ಸರ್ಕರ ರೈತರ ಮನೆ ಬಾಗಿಲಿಗೆ ತಲುಪಬೇಕು ಎಂಬುದು ನನ್ನ ಅಭಿಪ್ರಾಯ. ಜಿಲ್ಲಾಡಳಿತ ಬಹಳ ಉತ್ತಮ ಕೆಲಸ ಮಾಡುತ್ತಿದೆ. ಬಡವರಿಗೆ ಮನೆ, ನಿವೇಶನ ಕೊಡುವಂತಹ ಕೆಲಸ ಆಗಬೇಕು. ಸಾಕಷ್ಟು ರೈತರು ಜಮೀನುಗಳಿಗೆ ತೆರಳಲು ರಸ್ತೆ ಇಲ್ಲ, ಕನಿಷ್ಟ 10 ಗುಂಟೆ ಜಮೀನು ಇದ್ದರು ರಸ್ತೆ ಕಲ್ಪಿಸಬೇಕು. ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಒದಗಿಸಬೇಕು. ಇವೆಲ್ಲವನ್ನೂ ಈಡೇರಿಸಿದಾಗ ಮಾತ್ರ ಪೋಡಿ ಮುಕ್ತ ಗ್ರಾಮಗಳು ಸಾಧ್ಯ. ಈ ಸಮಸ್ಯೆಗಳನ್ನು ಸಹ ಆದ್ಯತೆ ಆಗಿ ತೆಗೆದುಕೊಂಡು ಪೋಡಿ ಅಭಿಯಾನದಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

1236 ಪೋಡಿ ದುರಸ್ತಿ ಪೂರ್ಣ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಮಾತನಾಡಿ, ಪೋಡಿ ಮಾಡಿಸಿಕೊಳ್ಳದೇ ಹಲವು ರೈತರು ವ್ಯಾಪಾರ, ವ್ಯವಹಾರ, ಸೌಲಭ್ಯ ವಂಚಿತರಾಗುತ್ತಿದ್ದರು. ಸರ್ಕಾರವು ದರಖಾಸ್ತು ಪೋಡಿ ವಿಶೇಷ ಆಂದೋಲನ ಕೈಗೆತ್ತಿಕೊಂಡು ಹಲವು ವರ್ಷಗಳ ರೈತರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ.

ಹಿಂದೆ ಪೋಡಿ ಮಾಡಲಿಕ್ಕೆ ಹಲವಾರು ಸಮಸ್ಯೆ ಬರುತ್ತಿತ್ತು ಈಗ ಅದನ್ನು ಸುಲಭ ರೀತಿಯಲ್ಲಿ ಪೋಡಿ ಮಾಡಿಸಿಕೊಳ್ಳಬಹುದಾಗಿದೆ. ಕಳೆದ ಒಂದುವರೆ ತಿಂಗಳಲ್ಲಿ ನಮ್ಮ ಜಿಲ್ಲೆಯಲ್ಲಿ 1236 ಪೋಡಿಗಳನ್ನು ಮಾಡಲಾಗಿದೆ, ಜಿಲ್ಲೆಯ 70 ಗ್ರಾಮಗಳ 90 ಸರ್ವೆ ನಂಬರ್ ಗಳಲ್ಲಿ ಸರ್ವೆ ನಡೆಸಿ ದೊಡ್ಡಬಳ್ಳಾಪುರ 304,ಹೊಸಕೋಟೆ 301, ನೆಲಮಂಗಲ 302, ದೇವನಹಳ್ಳಿ 329 ಪೋಡಿ ದುರಸ್ತಿ ಮಾಡಲಾಗಿದೆ. ಸಮರೋಪಾದಿಯಲ್ಲಿ ಕೆಲಸ ಕಾರ್ಯ ನಿರ್ವಹಿಸಿದ್ದ ಎಲ್ಲಾ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷರು ಹಾಗೂ ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ತಿನ ಶಾಸಕರಾದ ರವಿ, ಶಾಸಕರಾದ ಶ್ರೀನಿವಾಸ, ಧೀರಜ್ ಮುನಿರಾಜು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಭೂ ಮಾಪನ ಇಲಾಖೆಯ ಆಯುಕ್ತರಾದ ಮಂಜುನಾಥ್, ಕಂದಾಯ ಇಲಾಖೆ ಆಯುಕ್ತರಾದ ಪೆಮ್ಮಲ ಸುನೀಲ್ ಕುಮಾರ್, ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ, ಬಯಪ ಅಧ್ಯಕ್ಷರಾದ ಶಾಂತಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳಿಯ ಮುಖಂಡರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!