ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣನವಮಿ ಜನವರಿ.23.2025: ಈ ದಿನ ವಿಶೇಷವಾಗಿ ಮಹಾಲಕ್ಷ್ಮಿಯ ಆರಾಧನೆಯನ್ನು ಮಾಡಿ ದಿನವನ್ನು ಶುರು ಮಾಡಿದರೆ ಅತ್ಯಂತ ಶುಭ. Astrology
ಮೇಷ ರಾಶಿ: ಆಕಸ್ಮಿಕ ಘಟನೆಯಿಂದ ಲಾಭ, ಅತ್ಯುನ್ನತ ಅಧಿಕಾರದ ಹುದ್ದೆ . ತಂದೆ-ತಾಯಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿರ್ಣಾಯಕ ಕೆಲಸ ಕಾರ್ಯಗಳಲ್ಲಿ ಯಶಸ್ಸು. (ಪರಿಹಾರಕ್ಕೆ ಆಂಜನೇಯ ಮಂತ್ರವನ್ನು ಜಪಿಸಿ)
ವೃಷಭ ರಾಶಿ: ಆತ್ಮವಿಶ್ವಾಸದಲ್ಲಿ ವೃದ್ಧಿ, ಶಿಕ್ಷಣ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಮುನ್ನಡೆ.. ವಿವಾಹ, ಸಂತತಿ, ತೀರ್ಥಯಾತ್ರೆ ವಿದೇಶ ಪ್ರವಾಸಕ್ಕೆ ಅನುಕೂಲ ಉತ್ತರಾರ್ಧದಲ್ಲಿ ಸುಲಭರೂಪದಲ್ಲಿ ಅವಕಾಶ ಕೂಡಿ ಬರಲಿದೆ. (ಪರಿಹಾರಕ್ಕೆ ದುರ್ಗಾದೇವಿಯನ್ನು ಆರಾಧನೆ ಮಾಡಿ)
ಮಿಥುನ ರಾಶಿ: ಮನಸ್ಸು ಕೆಟ್ಟದ್ದನ್ನು ಆಲೋಚಿಸುತ್ತಿದೆ. ಸ್ವಲ್ಪ ಅವಕಾಶಗಳನ್ನು ನೋಡಿಕೊಳ್ಳಿ, ಬಂಧು ಮಿತ್ರರೊಂದಿಗೆ ಕೆಟ್ಟದಾಗಿ ಚಿಂತಿಸಬೇಡಿ, ಯೋಚಿಸಬೇಡಿ, ಅನುಕೂಲವಾಗುತ್ತದೆ/ ಆದರೆ ಕೆಲವು ಕೆಟ್ಟ ಸ್ವಭಾವಗಳನ್ನು ಬಿಡಬೇಕು. (ಪರಿಹಾರಕ್ಕಾಗಿ ಚಂದ್ರಶೇಖರ ಅಷ್ಟಕವನ್ನು ಕೇಳಿ)
ಕಟಕ ರಾಶಿ: ಒಳ್ಳೆಯ ವಿಚಾರಗಳಿಗೆ ಆತ್ಮೀಯವಾಗಿ ಯೋಚಿಸುತ್ತೀರಿ. ಆದರೆ ಧರ್ಮ ಬುದ್ಧಿಯ ಚಿಂತನೆ ಕಮ್ಮಿಯಾಗಿದೆ. ಸ್ವಲ್ಪ ಬುದ್ಧಿವಂತರಾಗಿ, ಧರ್ಮದ ಕಡೆ ಒಲವು ಇರಲಿ, ಅನಾವಶ್ಯಕ ಚಿಂತೆ ಬೇಡ ಶುಭವಾಗುತ್ತದೆ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿಸಿ)
ಸಿಂಹ ರಾಶಿ: ಶುಭದಿನ ಉತ್ತಮವಾದ ವಾತಾವರಣ. ಮನೆಯಲ್ಲಿ ನೆಮ್ಮದಿ, ಸತ್ಯ ಜ್ಞಾನದಿಂದ ಜೀವನ ಮಾಡಬೇಕೆಂಬ ಆಸೆ. ಮನಸ್ಸಿಗೆ ತೃಪ್ತಿಯಿದೆ, ಎಲ್ಲಾ ರೀತಿಯಲ್ಲೂ ಶುಭ. (ಪರಿಹಾರಕ್ಕಾಗಿ ಸರ್ವಮಂಗಳೆ ಅಮ್ಮನವರ ಪೂಜೆ ಮಾಡಿ)
ಕನ್ಯಾ ರಾಶಿ: ಆರೋಗ್ಯ, ವಿದ್ಯಾರ್ಥಿಗಳಿಗೆ ಶುಭ, ಕೆಲಸಗಳು ತಿರುಗಾಟವಿಲ್ಲದೆ ಕೆಲವು ಕೆಲಸಗಳು ಆಗುತ್ತವೆ ಅಧಿಕವಾದ ಲಾಭ, ಯಶಸ್ಸು ಅನುಕೂಲವಾಗುತ್ತದೆ (ಪರಿಹಾರಕ್ಕಾಗಿ ಶಿವನ ಪ್ರಾರ್ಥನೆ ಮಾಡಿ)
ತುಲಾ ರಾಶಿ: ಜ್ಞಾನಾರ್ಜನೆಗೆ ಉತ್ತಮವಾದ ಅತ್ಯಂತ ಶುಭವಾದ ದಿನ. ಧನಾಗಮ ನಿಧಾನವಾದರೂ ಚೆನ್ನಾಗಿರುತ್ತದೆ.. ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಎಲ್ಲಾ ಕಾರ್ಯದಲ್ಲೂ ಶುಭ. (ಪರಿಹಾರಕ್ಕಾಗಿ ಶಿವ ಸ್ಮರಣೆ ಮಾಡಿ)
ವೃಶ್ಚಿಕ ರಾಶಿ: ಶುಭ ಸಮಯ. ಆದರೆ ವಿನಾಕಾರಣ ಚಿಂತೆ, ಯೋಚಿಸತಕ್ಕದಲ್ಲದ ವಿಷಯದಲ್ಲೆಲ್ಲ ತಲೆಕೆಡಿಸಿಕೊಳ್ಳುತ್ತೀರಿ, ಇದರಿಂದ ಹೊರಬರಬೇಕು ನಿಧಾನವಾಗಿ ಧ್ಯಾನವನ್ನು ಅಭ್ಯಾಸ ಮಾಡಿ, ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ಶ್ರೀ ಕೃಷ್ಣನನ್ನು ಪೂಜೆ ಮಾಡಿ)
ಧನಸ್ಸು ರಾಶಿ: ಕಾರ್ಯಗಳಲ್ಲಿ ಆಸಕ್ತಿ ಉಂಟಾಗುತ್ತದೆ. ಧನವನ್ನು ಯಾವ ಕಾರ್ಯಕ್ಕೆ ಮಾಡಲು ನಿರ್ಣಯಿಸಿರುವಿರೋ ಅದಕ್ಕೆ ಮಾತ್ರ ಖರ್ಚು ಮಾಡಿ. ವಿಪರೀತವಾದ ದುಂದು ಬೆಚ್ಚ ಬೇಡ, ಎಚ್ಚರಿಕೆಯಿಂದ ಕಾರ್ಯವನ್ನು ನಿರ್ವಹಿಸಿ. (ಪರಿಹಾರಕ್ಕಾಗಿ ದುರ್ಗಾದೇವಿಯ ಸ್ತೋತ್ರವನ್ನು ಕೇಳಿ)
ಮಕರ ರಾಶಿ: ಅನಾವಶ್ಯಕ ಮಾತುಗಳು, ಅದೈರ್ಯದಿಂದ ಕೆಟ್ಟ ನಿರ್ಧಾರಗಳು, ಧೈರ್ಯ ಸಾಲದು, ಶುಭ ಕಾರ್ಯಕ್ಕಾಗಿ ಮುನ್ನುಗ್ಗಬೇಕು. (ಪರಿಹಾರಕ್ಕಾಗಿ ಸೂರ್ಯನಮಸ್ಕಾರವನ್ನು ಮಾಡಿ)
ಕುಂಭ ರಾಶಿ: ದೀರ್ಘವಾದ ಚಿಂತನೆ, ಆಲೋಚನೆ, ಮನಸ್ಸಿಗೆ ಕಿರಿಕಿರಿ.. ಒಳ್ಳೆಯ ಭಾವನೆ, ಇದ್ದರೂ ಭಗವಂತನಲ್ಲಿ ಪ್ರಾರ್ಥನೆ ಇರಬೇಕು. ನಿರಂತರವಾಗಿ ಒಳ್ಳೆಯವರ ಸಂಪರ್ಕದಲ್ಲಿ ಇರಿ. ಆರೋಗ್ಯವಂತರಾಗಿರುತ್ತೀರಿ, ದೃಢವಾದ ಕಾರ್ಯದಲ್ಲಿ ನಿಶ್ಚಯತೆಯನ್ನು ಇಟ್ಟುಕೊಳ್ಳಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆ ಮಾಡಿ)
ಮೀನ ರಾಶಿ: ಒಳ್ಳೆಯ ದಿನಗಳು ಬಂದಿವೆ, ಮಾಡಬೇಕಾದ ಕೆಲಸವೂ ಸಾಕಷ್ಟಿದೆ. ನಿಧಾನವಾಗಿ ಎಲ್ಲಾ ಕಾರ್ಯಗಳನ್ನು ತೂಗಿಸಿ, ಅನುಕೂಲವಾಗುತ್ತದೆ ಅತಿಯಾದ ಆಲೋಚನೆ ಬೇಡ ಉತ್ಸಾಹಿಗಳಾಗಿರಿ. (ಪರಿಹಾರಕ್ಕಾಗಿ ಶನೇಶ್ಚರ ಮಂತ್ರವನ್ನು ಜಪ ಮಾಡಿ)
ರಾಹುಕಾಲ: 1-30PM ರಿಂದ 3-00PM
ಗುಳಿಕಕಾಲ: 9-00AM ರಿಂದ 10-30 AM
ಯಮಗಂಡಕಾಲ: 6-00AMರಿಂದ 7-30AM
ಹೆಚ್ಚಿನ ಮಾಹಿತಿಗಾಗಿ; ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572