ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲದ (Doddabalelavngala) ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 2002-2003 ನೇ ಸಾಲಿನ ವಿದ್ಯಾರ್ಥಿಗಳಿಂದ, ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ವಿದ್ಯೆಕಲಿಸಿದ ಶಿಕ್ಷಕರನ್ನು ಸಾರೋಟಿನಲ್ಲಿ ಅದ್ಧೂರಿ ಚಂಡೆ ವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಹಳೆಯ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಭರ್ಜರಿ ಸ್ಟೆಪ್ ಹಾಕಿದರು.
ನಂತರ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ವೇಳೆ ಶಿಕ್ಷಕರಾದ G ನಾರಾಯಣಪ್ಪ (Gn), ಮುಖ್ಯ ಶಿಕ್ಷಕರು kv ಶಿವರಾಮೇಗೌಡ (kvs), ಬಿರೆದಾರ್ ಸಾಹೇಬ್ ಗೌಡ (bsg), R ಮಂಜುನಾಥ್ (rm), np ಸುರೇಂದ್ರ ಬಾಬು (nps), ಸವಿತಾ g ನಾಯ್ಕ್ (sgn), m ಮಂಜುನಾಥ್ (mm), hc ಲಿಂಗಯ್ಯ್ (hcl), m ರತ್ನಮ್ಮ (mrm), Gc ವೀರಕೇತಯ್ಯಾ(gcv), ಶ್ರೀಕಂಠಯ್ಯ, ಬಸವರಾಜ್ ಸೇರಿದಂತೆ 2002-2003 ನೇ ಸಾಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.