ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷ ಜೆಡಿಯು (JDU) ಈಶಾನ್ಯ ರಾಜ್ಯ ಮಣಿಪುರದಲ್ಲಿ ಬಿಜೆಪಿ (BJP) ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಜೆಡಿಯು ಹಿಂಪಡೆದು ಶಾಕ್ ನೀಡಿದೆ.
ಮಣಿಪುರದ ಪಕ್ಷದ ಘಟಕದ ಅಧ್ಯಕ್ಷ ಕ್ಷೇತ್ರಮಯಮ್ ಬಿರೇನ್ ಸಿಂಗ್ ಹೊರಡಿಸಿದ ಅಧಿಕೃತ ಪತ್ರದಲ್ಲಿ, ಜೆಡಿಯು ಇನ್ನು ಮುಂದೆ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿದೆ.
ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಪಕ್ಷಗಳ ಒತ್ತಡ ಎದುರಿಸುತ್ತಿರುವ ಮಣಿಪುರದಲ್ಲಿ ಕಳೆದೆರಡು ವರ್ಷಗಳಿಂದ ಗೊಂದಲದಲ್ಲಿರುವ ಬಿಜೆಪಿಗೆ ಇದರಿಂದ ಹಿನ್ನಡೆಯಾದಂತಾಗಿದೆ.
ಈ ನಡುವೆ ಮಣಿಪುರದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವೀರೇನ್ ಸಿಂಗ್ ಅವರನ್ನು ಸ್ಥಾನದಿಂದ ತೆಗೆದುಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.