ನವದೆಹಲಿ: ಮಣಿಪುರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕ್ಷಣಕ್ಕೊಂದು ರೂಪ ತಾಳುತ್ತಿದೆ. ಮಣಿಪುರದಲ್ಲಿ ಬಿಜೆಪಿ (BJP ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದಲ್ಲ, ಮುಂದುವರಿಸಿದ್ದೇವೆ ಎಂದು ನಿತೀಶ್ ಕುಮಾರ್ ನೇತೃತ್ವದ ಜನತಾ ದಳ ಯುನೈಟೆಡ್ (JDU) ವಕ್ತಾರ ರಂಜನ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದೆಗೆದುಕೊಂಡಿದೆ ಎಂಬುದರ ಕುರಿತು ಜೆಡಿಯು ರಾಜ್ಯ ಘಟಕವು ರಾಜ್ಯಪಾಲರಿಗೆ ಕಳುಹಿಸಿರುವ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಕೆಲವೇ ಗಂಟೆಗಳ ಬಳಿಕ ಕೇಂದ್ರ ನಾಯಕತ್ವವನ್ನು ಸಂಪರ್ಕಿಸದೆ ಬೆಂಬಲವನ್ನು ಹಿಂಪಡೆದಿರುವ ಆರೋಪವನ್ನು ಪುನರುಚ್ಚರಿಸುವ ಪತ್ರವನ್ನು ಬರೆದಿದ್ದಕ್ಕಾಗಿ ಪಕ್ಷವು ಮಣಿಪುರ ಘಟಕದ ಅಧ್ಯಕ್ಷ ಕ್ಷೇತ್ರಿಮಯುಮ್ ಬಿರೇನ್ ಸಿಂಗ್ ಅವರನ್ನು ವಜಾಗೊಳಿಸಿದೆ.
ಜೊತೆಗೆ ಪಕ್ಷವು ಅವರನ್ನು ಪದಚ್ಯುತಗೊಳಿಸಲು ಅಶಿಸ್ತು ಕಾರಣ ಎಂದು ಉಲ್ಲೇಖಿಸಿದೆ.
ಈ ಕುರಿತು ಜೆಡಿಯು ವಕ್ತಾರ ರಾಜೀವ್ ರಂಜನ್ ಪ್ರಸಾದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಣಿಪುರದಲ್ಲಿ ಜೆಡಿಯು ಎನ್‌ಡಿಎ ಭಾಗವಾಗಿದೆ ಮತ್ತು ಸರ್ಕಾರಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟನೆ ನೀಡಿದರು.
ಇದಲ್ಲದೇ ಬಿಹಾರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಪಕ್ಷ ಎನ್‌ಡಿಎ ಜೊತೆಗಿದೆ ಎಂದು ತಿಳಿಸಿದರು.
ಪಕ್ಷವು ಇದನ್ನು ಅರಿತುಕೊಂಡಿದೆ ಮತ್ತು ಪಕ್ಷದ ಮಣಿಪುರ ಘಟಕದ ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಲಾಗಿದೆ. ನಾವು ಎನ್‌ಡಿಎಗೆ ಬೆಂಬಲ ನೀಡಿದ್ದೇವೆ ಮತ್ತು ಮಣಿಪುರದಲ್ಲಿ ಎನ್‌ಡಿಎ ಸರ್ಕಾರಕ್ಕೆ ನಮ್ಮ ಬೆಂಬಲವು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ.
ಮಣಿಪುರ ಘಟಕವು ಯಾವುದನ್ನೂ ಹೊಂದಿಲ್ಲ. ಕೇಂದ್ರ ನಾಯಕತ್ವದೊಂದಿಗೆ ಸಂವಹನ ನಡೆಸಿದಾಗ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ. ಅವರಷ್ಟಕ್ಕೆ ಪತ್ರ ಬರೆದು ಶೇರ್ ಮಾಡಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.