ಚೆನ್ನೈ: ‘ಜೈಲರ್’ ಸಿನಿಮಾದಲ್ಲಿ ಖ್ಯಾತ ನಟ ರಜನಿಕಾಂತ್ ಅವರ ಎದುರು ಅಬ್ಬರದ ನಟನೆ ಮೂಲಕ ಗಮನ ಸೆಳೆದಿದ್ದ ನಟ ವಿನಾಯಕನ್ (Vinayakan), ಇತ್ತೀಚೆಗೆ ಪದೇ ಪದೆ ಕಿರಿಕ್‌ಗಳಿಂದಲೇ ಸುದ್ದಿಯಾಗುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಿನಾಯಕನ್ ಅವರು ಮನೆಯ ಬಾಲ್ಕನಿಯಲ್ಲಿ ನಿಂತು ನೆರೆಮನೆಯವರಿಗೆ ಬೈಯ್ದಿದ್ದಾರೆ.
ಅವಾಚ್ಯ ಪದಗಳನ್ನು ಅವರು ಬಳಸಿದ್ದಾರೆ. ಲುಂಗಿ ಧರಿಸಿ ಜಗಳಕ್ಕೆ ಬಂದಿದ್ದ ಅವರಿಗೆ ಸರಿಯಾಗಿ ನಿಂತುಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ.
ಸೊಂಟದ ಮೇಲಿದ್ದ ಲುಂಗಿ ಉದುರಿ ಹೋದರೂ ಅರಿವಿಲ್ಲದ ಹಾಗೆ ಅವರು ಜಗಳ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿನಾಯಕನ್ ಅವರ ವಿಡಿಯೋ ವೈರಲ್ ಆಗುತ್ತಿದೆ. ‘ಇವನೇನು ನಟನೋ ಅಥವಾ ಕುಡುಕನೋ’ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಚಿತ್ರರಂಗದಿಂದ ವಿನಾಯಕನ್ ಅವರನ್ನು ಬ್ಯಾನ್ ಮಾಡಬೇಕು ಎಂದು ಕೂಡ ಜನರು ಕಮೆಂಟ್ ಮಾಡಿದ್ದಾರೆ.
ಈ ಕುರಿತು ವಿನಾಯಕನ್ ಅವರು ಪ್ರತಿಕ್ರಿಯೆ ನೀಡಿದ್ದು, ಒಬ್ಬ ವ್ಯಕ್ತಿಯಾಗಿ, ಸಿನಿಮಾ ನಟನಾಗಿ ನನಗೆ ಎಷ್ಟೋ ವಿಷಯಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ನನ್ನಿಂದ ನೆಗೆಟಿವ್ ಎನರ್ಜಿ ಉಂಟಾಗಿದ್ದಕ್ಕೆ ನನ್ನ ಕಡೆಯಿಂದ ಜನರ ಬಳಿ ಕ್ಷಮೆ ಕೇಳುತ್ತೇನೆ. ಚರ್ಚೆ ಮುಂದುವರಿಯಲಿ ಎಂದು ವಿನಾಯಕನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.