ದೊಡ್ಡಬಳ್ಳಾಪುರ (Doddaballapura): ತಾಲ್ಲೂಕು ವೀರಶೈವ ಲಿಂಗಾಯಿತ ಸಮಾಜ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ನಗರದ ತಾಲ್ಲೂಕು ಕಚೇರಿ ಸಮೀಪದ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ತುಮಕೂರಿನ ಸಿದ್ದಗಂಗಾಮಠದ ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಾಸೋಹ ದಿನ ಆಚರಣೆ ಹಾಗೂ ದಾಸೋಹ ಮಂಗಳವಾರ ನಡೆಯಿತು.
ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವಕುಮಾರಮಹಾಸ್ವಾಮೀಜಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು.
ತುಮಕೂರಿನ ಸಿದ್ದಗಂಗಾಮಠದಲ್ಲಿ ಶಿವಕುಮಾರಸ್ವಾಮೀಜಿ ಅವರು ನಡೆಸಿದ ಅಕ್ಷರ ಕ್ರಾಂತಿ ಸೇರಿದಂತೆ ತ್ರೀವಿಧ ದಾಸೋಹದಿಂದ ಸಾವಿರಾರು ಜನ ವಿದ್ಯಾವಂತರಾಗಿ ಬದುಕು ರೂಪಿಸಿಕೊಂಡಿರುವುದನ್ನು ಸ್ಮರಿಸಲಾಯಿತು.
ಸ್ವಾಮೀಜಿ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಇಂದಿಗೂ ಸಹ ಮಠದಲ್ಲಿ ಮುಂದುವರೆದಿರುವ ತ್ರಿವಿಧ ದಾಸೋಹ ನಾಡಿನ ಸಾವಿರಾರು ಜನರಿಗೆ ಆಸರೆಯಾಗಿ ನಿಂತಿರುವುದನ್ನು ಮುಖಂಡರು ಸ್ಮರಿಸಿದರು.