ಹರಿತಲೇಖನಿ

Doddaballapura ನವದೆಹಲಿಯ ಗಣರಾಜ್ಯೋತ್ಸವ ಪೆರೇಡ್ ವೀಕ್ಷಣೆಗೆ ದೊಡ್ಡಬಳ್ಳಾಪುರ ತಾಲೂಕಿನ ಪದ್ಮಾವತಿ ನಿಯೋಜನೆ

Padmavati deployment of Doddaballapur taluk to watch the Republic Day parade

ಬೆಂಗಳೂರು ಗ್ರಾಮಾಂತರ ಜಿಲ್ಲೆ (Doddaballapura); ನವದೆಹಲಿಯ ಗಣರಾಜ್ಯೋತ್ಸವ ಪೆರೇಡ್ ವೀಕ್ಷಣೆ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಿಗಳೊಡನೆ ಪರಸ್ಪರ ಚರ್ಚೆಯಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯದಿಂದ ಸ್ವಸಹಾಯ ಗುಂಪುಗಳ 12 ಸದಸ್ಯರು ನಿಯೋಜನೆ ಮಾಡಲಾಗಿದೆ.

ಇದರ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಶಿರಾವರ ಗ್ರಾಮದ ಕೃಷಿ ಸಖಿ ಹಾಗೂ ಸ್ವಸಹಾಯ ಗುಂಪಿನ ಸದಸ್ಯರಾದ ಪದ್ಮಾವತಿ ಅವರನ್ನು ನಿಯೋಜನೆ ಮಾಡಲಾಗಿದೆ ಎಂದು ಜಿ.ಪಂ ಸಿ.ಇ.ಒ ಡಾ.ಕೆ.ಎನ್ ಅನುರಾಧ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Doddaballapura: ಹೊಳೆ ಮುತ್ತುರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆ ನೆರವು..!

Doddaballapura: Dr. D. Virendra Heggade's help for the restoration of Hole Muthurayaswamy temple..!
Doddaballapura: Dr. D. Virendra Heggade’s help for the restoration of Hole Muthurayaswamy temple..!

ದೊಡ್ಡಬಳ್ಳಾಪುರ: ತಾಲೂಕಿನ ಹಾಲಪ್ಪನಹಳ್ಳಿ ಗ್ರಾಮದ ಹೊಳೆ ಮುತ್ತುರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಆರ್ಥಿಕ ನೆರವನ್ನು ನೀಡಿದ್ದಾರೆ.

ಇಂದು ಅವರ ಪರವಾಗಿ ಐವತ್ತು ಸಾವಿರ ರೂ. ಡಿಡಿ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಸುಧಾ ಬಾಸ್ಕರ್ ಅವರು ದೇವಾಲಯದ ಸಮಿತಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿಯವರು ವಲಯದ ಮೇಲ್ವಿಚಾರಕ ಸುಪ್ರೀತ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ಸೇವಾ ಪ್ರತಿನಿಧಿ ರಾಧಮ್ಮ ಸೇರಿದಂತೆ ಊರಿನ ಗ್ರಾಮಸ್ಥರು ಇದ್ದರು.

Exit mobile version