ಬೆಂಗಳೂರು: ಕಾಂಗ್ರೆಸ್ ಹರಿಪ್ರಸಾದ್ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ವಿಜಯೇಂದ್ರ ನಕಲಿ ಸಹಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಅಲ್ವಾ.. ಮತ್ತೆ ಸಿದ್ದರಾಮಯ್ಯಗೆ, ಡಿಕೆ ಶಿವಕುಮಾರ್ಗೆ ತಾಕತ್ ಇದ್ದರೆ ತನಿಖೆ ಮಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Yatnal) ಸವಾಲ್ ಎಸೆದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ವಿಜಯೇಂದ್ರ ವಿರುದ್ದ ವಾಗ್ದಾಳಿ ಮುಂದುವರಿಸಿದ್ದು, ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ಗೆ ತಾಕತ್ ಇದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಸಹಿಗಳನ್ನು ಫಾರೆನ್ಸಿಕ್ ರಿಪೋರ್ಟ್ ತನಿಖೆ ಮಾಡ್ಸಿ. ಇಲ್ಲಾ ಯಡಿಯೂರಪ್ಪನೇ ಮಾಡಿರೋದ್ ಖಚಿತವಾದರೆ ವಿಜಯೇಂದ್ರನ ರಮೇಶ್ ಜಾರಕಿಹೊಳಿ ನಾಲಾಯಕ್ ಅಂದಿರೋದ್ನ ವಾಪಸ್ ತಗೊಳ್ತಿವಿ. ಅದು ನಿಜ ಅಂತಾದ್ರೆ ವಿಜಯೇಂದ್ರ ನಾಲಾಯಕ್ ಅನ್ನೋದ್ ಪ್ರೂ ಆದಂತೆ.
ನಮ್ಮ ಟಿಂ ಸ್ಪರ್ಧೆ ಖಚಿತ
ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ನಮ್ಮ ಅಭ್ಯರ್ಥಿ ಹಾಕ್ತಿವಿ. ನಮ್ಮದೊಂದು ಕೋರ್ ಕಮಿಟಿ ಇದೆ ಅಲ್ಲಿ ಅಭ್ಯರ್ಥಿ ಯಾರಾಗಬೇಕು ಅಂತ ಚರ್ಚಿಸಿ ತೀರ್ಮಾನ ಮಾಡ್ತೀವಿ. ನಾವ್ ಸಿದ್ದ ಇದ್ದೀವಿ.
ಇಂತ ಕಳ್ಳರನ್ನ ರಾಜ್ಯದ ಜನತೆ ಒಪ್ಪಿಕೋಬೇಕಾ..?
ವಿಜಯೇಂದ್ರ ಮುಂದುವರೆಯುವ ಆಸೆಯಿದೆ. ಕರ್ನಾಟಕದಲ್ಲಿ ಅಳಿದುಳಿದಿರುವುದರ ಲೂಟಿ ಮಾಡುವ ಆಸೆ ಇದ್ದರೆ ನಾವೇನ್ ಮಾಡೋಕ್ ಆಗಲ್ಲ. ಮತ್ತೆ ಡೂಪ್ಲಿಕೇಟ್ ಸಹಿ ಮಾಡಿ, ಇಡೀ ರಾಜ್ಯವನ್ನೇ ಖರೀದಿ ಮಾಡುವ ಆಸೆಯಿದೆ ಅಂದ್ರೆ ಇಂತ ಕಳ್ಳರನ್ನ ರಾಜ್ಯದ ಜನತೆ ಒಪ್ಪಿಕೋಬೇಕಾ..? ಎಂದು ಪ್ರಶ್ನಿಸಿದರು.
ನಾ ನಿನ್ನೆ ಹೇಳಿದೆ ಡೂಪ್ಲಿಕೇಟ್ ಸಹಿ ಮಾಡಿದ್ದಾನೆ ಅಂತ. ದೇವರು ಒಳ್ಳೇದು ಮಾಡ್ಲಿ ಅಂತಾನೆ.. ಬದನೆಕಾಯಿ ದೇವರು ನನಗೇನುಕ್ ಒಳ್ಳೇದ್ ಮಾಡಬೇಕು..? ನಿನ್ನ ಜೈಲಿಗೆ ಕಳುಸಬೇಕು.
ಮೂಡಾ ಹಗರಣದಲ್ಲಿ ಯಾರೂ ಸಾಚಾಗಳಲ್ಲ
ಸಿಎಂ ಸಿದ್ದರಾಮಯ್ಯ ಮೂಡಾ ಹಗರಣದಲ್ಲಿ ರಾಜೀನಾಮೆ ನೀಡದೆ ಬಂಡತನ ತೋರುತ್ತಿದ್ದಾರೆ ಇದಕ್ಕೇನ್ ಹೇಳ್ತಿರಿ ಎಂದು ಖಾಸಗಿ ಸುದ್ದಿವಾಹಿನಿ ವರದಿಗಾರನ ಪ್ರಶ್ನೆಗೆ ಉತ್ತರಿಸಿದ ಅವರು, ಮೂಡಾ ಹಗರಣದಲ್ಲಿ ಯಾರು ಸಾಚಾಗಳಲ್ಲ ಎಂದಿದ್ದಾರೆ.
ಕೇವಲ ಸಿದ್ದರಾಮಯ್ಯ ಹೆಸರು ಮಾತ್ರ ಬಂದಿದೆ. ವಿಜಯೇಂದ್ರ, ಜಿಟಿ ದೇವೇಗೌಡ ಸೇರಿದಂತೆ ಅದರಲ್ಲಿ ಮಹಾನ್ ಮಹಾನ್ ನಾಯರು ಇದ್ದಾರೆ.
ಕಾಂಗ್ರೆಸ್ ಜೊತೆ ವಿಜಯೇಂದ್ರಗೆ ಅಡ್ಜಸ್ಟ್‌ಮೆಂಟ್
ಹಿಂದೂ ಪರ ಮಾತನಾಡುವ ಸಿಟಿ ರವಿ, ನನ್ನಂತವರ ಮೇಲೆ ಈ ಸರ್ಕಾರ ಕೇಸ್ ಹಾಕಿ, ಟಾರ್ಗೆಟ್ ಮಾಡುತ್ತೆ.. ಅದೇ ವಿಜಯೇಂದ್ರ ವಿರುದ್ಧ ಒಂದೂ ಕೇಸ್ ಹಾಕೋದಿಲ್ಲ.. ನೋಡಿ ಎಷ್ಟು ಒಳ್ಳೆ ಅಡ್ಜಸ್ಟ್‌ಮೆಂಟ್ ಇದೆ.
ಕಠಿಣ ಕ್ರಮ ಅಂದಿದ್ ಬಿಟ್ರೆ ಸುಡುಗಾಡು ಮಾಡ್ಲಿಲ್ಲ..
ಹಿಂದೂಗಳು ಅವಹೇಳನ ಮಾಡಲು ಸಿಎಂ ಆದಿಯಾಗಿ ಮಾಡ್ತಾ ಇದ್ದಾರೆ. ಪದೇ ಪದೇ ಹಿಂದೂಗಳ ಭಾವನೆಗಳ ತಕ್ಕೆ ತರುವುದೂ, ಸ್ವಾಭಿಮಾನ ಕೆಣಕುವುದು, ಮತ್ತೊಮ್ಮೆ ಗಲಭೆ ಎಬ್ಬಿಸುವುದಾಗಿದೆ. ಅವರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಪೋರ್ಟ್ ಇದೆ ಅಂತ ಧೈರ್ಯ. ನಮ್ಮ ಬೊಮ್ಮಾಯಿನೂ ಸರಿಯಾಗಿ ಮಾಡ್ಲಿಲ್ಲ. ಆರಗ ಜ್ಞಾನೇಂದ್ರ ಕಠಿಣ ಕ್ರಮ, ಕಠಿಣ ಕ್ರಮ ಅಂದಿದ್ ಬಿಟ್ರೆ ಸುಡುಗಾಡು ಮಾಡ್ಲಿಲ್ಲ.
ನಾ ಕೇಳ್ದೆ ಆರಗ ಜ್ಞಾನೇಂದ್ರ ಅವರನ್ನ ಏನ್ ಮಾಡ್ತಾ ಇದ್ದೀರಿ ಅಂತ, ಏನ್ ಮಾಡ್ಲಿ ಯತ್ನಾಳ್‌ರೆ ಪೊಲೀಸರು ನನ್ ಮಾತ್ ಕೇಳ್ತಿಲ್ಲ ಅಂತಿದ್ದ. ನಮ್ಮವೇ ಸರಿ ಇಲ್ಲ.. ಬಿಜೆಪಿಗೆ ರಾಜ್ಯದಲ್ಲಿ ಸೋಲಾಗೋದಕ್ಕೆ ಹಿಂದೂಗಳ ರಕ್ಷಣೆ ಮಾಡ್ದೇ ಇರೋದೆ ಕಾರಣ. ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಿ, ಸರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದರೆ ನಾವು 140 ಪಡೆದು ಉತ್ತರ ಪ್ರದೇಶದ ರೀತಿ ಅಧಿಕಾರಕ್ಕೆ ಬರ್ತಾ ಇದ್ವಿ. ನಮ್ಮ ತಪ್ಪು ಜಾಸ್ತಿ ಇದೆ
ಯಡಿಯೂರಪ್ಪನೂ ಏನು ಮಾಡ್ಲಿಲ್ಲ… ಶಿವಮೊಗ್ಗದಲ್ಲಿ ಓಪನ್ ಆಗಿ ಹತಾರಿ ತಗೊಂಡ್ ಹೊರಗೆ ಬರ್ತಾರೆ, ಶಿವಮೊಗ್ಗದಲ್ಲೇ ನೀಗಿಸೋಕ್ ಆಗ್ದೆ ಇರೋನು, ಕರ್ನಾಟಕದಲ್ಲಿ ಏನ್ ಮಾಡ್ತಾನೆ.. ಇಟ್ಟ ಹೆಜ್ಜೆಯನ್ನು ಹಿಂದೆ ಸರಿಯೋದಿಲ್ಲ., ಸರಿದಿದ್ದರೆ ತಗ್ಗನಾಗೆ ಬೀಳಪ್ಪ ಬೇಡಾ ಅಂದ್ನಾ.. ದೊಡ್ಡ ಬಾಯಿ ಇದೆ ನಿಂದು.
ದುಡ್ ಇಸ್ಕೋಂಡ್ ಸರ್ವೆ ಮಾಡಬೇಡಿ
ಯತ್ನಾಳ್ ಬರ್ ಒನ್ ಲೀಡರ್ ಯಾವಾಗ್ ಆಗ್ತಾರೆ ಎಂಬ ಪ್ರಶ್ನೆಗೆ, ನೀವೆ ಸರ್ವೆ ಮಾಡ್ರಿ ಆದರೆ ದುಡ್ ಇಸ್ಕೋಂಡ್ ಸರ್ವೆ ಮಾಡಬೇಡಿ ಎಂದು ಅದ್ ಬಿಟ್ಟು ಸರಿಯಾಗಿ ಸರ್ವೆ ಮಾಡಿ.
ಸುಮ್ ಸುಮ್ನೆ ಬೋಗಸ್ ಸರ್ವೆ ಮಾಡಿ.. ನಂಬರ್ ಒನ್ ವಿಜಯೇಂದ್ರ, ನಂಬರ್ 3 ಯತ್ನಾಳ್.. ಯಾರು ಇಲ್ಲ ಅಂತ ನಂಬರ್ ಟೂ ಕೂರುಸ್ತೀರಲ್ವಾ.. ನಿಮ್ಮ ಸರ್ವೆಗಳಿಂದ ಏನೂ ಆಗಲ್ಲ. ನಮ್ಮ ಸರ್ವೆ ಇದೆ. ಕರ್ನಾಟಕದಲ್ಲಿ ನಂಬರ್ ಒನ್ ನಾವೇ ಇದ್ದೇವೆ, ಯಾರು ಇಲ್ಲ
ನೀವು ಸರ್ವೇ ಮಾಡಿ ಪಾರದರ್ಶಕವಾಗಿ ಗೊತ್ತಾಗುತ್ತೆ. ಮಾಧ್ಯಮದವರು ವಿಜಯೇಂದ್ರನ ಏನ್ ಹೊಗಳುತ್ತೀರಿ.. ರಾಜಾಹುಲಿ ಅಖಾಡಕ್ಕೆ…ಆಹಾಹಾಹಾ ವಾರೆವ್ಹಾ.. ಮಾಧ್ಯಮಗಳ ಗೊತ್ತಿದೆ ನಿಮ್ದು ಹಣೆ ಬರಹ ಎಂದು ಲೇವಡಿ ಮಾಡಿದರು.