Site icon Harithalekhani

ಬೀದರ್‌, ಮಂಗಳೂರಿನಲ್ಲಿ ಬ್ಯಾಂಕ್‌ ದರೋಡೆ.. ಎಚ್ಚೆತ್ತು ಸೂಕ್ತ ಕ್ರಮಕ್ಕೆ ಮುಂದಾದ ದೊಡ್ಡಬಳ್ಳಾಪುರ ಪೊಲೀಸರು

Doddaballapur police took appropriate action

Doddaballapur police took appropriate action

ದೊಡ್ಡಬಳ್ಳಾಪುರ Police: ಕಳೆದ ವಾರ ಬೀದರ್‌ ಹಾಗೂ ಮಂಗಳೂರಿನಲ್ಲಿ ಸಿನಿಮಾ ರೀತಿಯಲ್ಲಿ ದರೋಡೆಕೋರರು ಬ್ಯಾಂಕ್‌ನಲಿದ್ದ ಹಣ, ಚಿನ್ನ ದೋಚಿ ಪರರಾರಿಯಾಗಿದ್ದಾರೆ.

ಇದರ ಬೆನ್ನಲ್ಲೆ ಎಚ್ಚೆತ್ತ ದೊಡ್ಡಬಳ್ಳಾಪುರ ಪೊಲೀಸ್ ಇನ್ಸ್ಪೆಕ್ಟರ್ ಅಮರೇಶ್ ಗೌಡ ನಗರದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಬೀದರ್‌, ಮಂಗಳೂರಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ ಬೆನ್ನಲ್ಲೇ ದೊಡ್ಡಬಳ್ಳಾಪುರ ಪೊಲೀಸರು ಅಲರ್ಟ್ ಆಗಿದ್ದಾರೆ.

ನಗರ ಪೊಲೀಸ್‌ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ನಗರ ಠಾಣೆ ಆವರಣದಲ್ಲಿನ ಸಭಾಂಗಣದಲ್ಲಿ ಬ್ಯಾಂಕ್ ಸಿಬ್ಬಂದಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಎರಡು ಜಿಲ್ಲೆಗಳಲ್ಲಿ ನಡೆದ ದರೋಡೆ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿವೆ. ದೊಡ್ಡಬಳ್ಳಾಪುರದಲ್ಲಿ ಅಂತಹ ಯಾವುದೇ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.

ಬ್ಯಾಂಕ್ ಮತ್ತು ಎಟಿಎಂಗಳ ಬಳಿ ಎಷ್ಟು ಜನ ಸೆಕ್ಯುರಿಟಿ ಇರುತ್ತಾರೆ, ರಾತ್ರಿ ಹಾಗೂ ಬೆಳಗಿನ ಪಾಳಿಯಲ್ಲಿ ಎಷ್ಟು ಮಂದಿ ಇರುತ್ತಾರೆ ಹಾಗೂ ಬ್ಯಾಂಕ್, ಎಟಿಎಂಗಳ ಬಳಿ ಸಿಸಿಟಿವಿ ಕ್ಯಾಮರಾ ಸರಿ ಇದೆಯಾ ಎನ್ನುವ ಎಂಬ ಬಗ್ಗೆ ಮಾಹಿತಿ ಅಮರೇಶ್ ಗೌಡ ಪಡೆದಿದ್ದಾರೆ ‌

ಅಲ್ಲದೆ, ಎಟಿಎಂಗಳಲ್ಲಿ ಸೆಕ್ಯೂರಿಟಿ ಇರುವ ಬಗ್ಗೆ ತಿಳಿದುಕೊಳ್ಳಲು ಸ್ಥಳಕ್ಕೆ ಭೇಟಿ ನೀಡಿ. ಹಣ ತುಂಬಲು ಹೋಗುವ ಏಜೆಸ್ಸಿ ವಾಹನಕ್ಕೆ ಭದ್ರತೆ ಹೆಚ್ಚಿಸಲು ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಭೆಯಲ್ಲಿ ಪಿಎಸ್ ಐ ಕೃಷ್ಣಪ್ಪ, ಸೇರಿದಂತೆ ನಗರ ವ್ಯಾಪ್ತಿಯ ಎಲ್ಲಾ ಬ್ಯಾಂಕುಗಳ ಮ್ಯಾನೇಜರ್ ‌ಗಳು, ಎಟಿಎಂ ಗಳಿಗೆ ಹಣ ತುಂಬುವ ಸಿಎಂಎಸ್ ತಂಡ.

Exit mobile version