Harithalekhani

DK Shivakumar| ಕಪಿಲೇಶ್ವರ ದೇಗುಲದಲ್ಲಿ ಡಿಸಿಎಂ ವಿಶೇಷ ಪೂಜೆ

DK Shivakumar | Special Pooja of DCM at Kapileshwar Temple

ಬೆಳಗಾವಿ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ (DK Shivakumar) ಭಾನುವಾರ ನಗರದ ಕಪಿಲೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಗಾವಿಯ ಶಹಾಪುರದಲ್ಲಿರುವ ಐತಿಹಾಸಿಕ ಕಪಿಲೇಶ್ವರ ದೇವಸ್ಥಾನದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರುದ್ರಾಭಿಷೇಕ ಸೇರಿದಂತೆ ಪೂಜಾ ಕಾರ್ಯ ಕ್ರಮ ನೆರವೇರಿಸಿದರು.

ಶಿವಲಿಂಗಕ್ಕೆ 111 ಲೀಟರ್ ಹಾಲು ಸಮರ್ಪಿಸಿದ ಇವರು ಕೆಲಹೊತ್ತು ರುದ್ರಾಕ್ಷಿ ಧರಿಸಿ ಜಪ ಮಾಡಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಇವರು. ಪರಮೇಶ್ವರನ ಅವತಾರ ಕಪಿಲೇಶ್ವೇರ. ಈ ಸನ್ನಿಧಿಗೆ ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ್, ಸ್ವಾಮಿ ವಿವೇಕಾನಂದ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು, ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾಗಿ ಹೇಳಿದರು.

ಕಪಿಲೇಶ್ವರನಿಗೆ ರುದ್ರಾಭಿಷೇಕ ಸಲ್ಲಿಸಿದ ನಂತರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಅರ್ಚಕರು ಡಿ.ಕೆ ಶಿವಕುಮಾ‌ರ್ ಅವರಿಗೆ ಶಾಲು ಹೊದಿಸಿ ಶಿವನ ತ್ರಿಶೂಲ ನೀಡಿ ಆದಷ್ಟು ಬೇಗ ಸಿಎಂ ಆಗುವಂತೆ ಆಶೀರ್ವಾದ ಮಾಡಿದರು.

ಈ ಸಂದರ್ಭದಲ್ಲಿ ನಗು ಬೀರಿದ ಇವರು ರಕ್ಷಣೆಗಾಗಿ ನೀಡಿದ ತ್ರಿಶೂಲವನ್ನು ಪಡೆದುಕೊಂಡರು.

Exit mobile version