Site icon Harithalekhani

Kho kho world cup ಫೈನಲ್‌ನಲ್ಲಿ ಗೆದ್ದು ಬೀಗಿದ ಭಾರತ

India won the Kho Kho world cup final

India won the Kho Kho world cup final

ನವದೆಹಲಿ: ಖೋ-ಖೋ ವಿಶ್ವಕಪ್ (Kho kho world cup) ಮೊದಲ ಆವೃತ್ತಿಯಲ್ಲಿ ಭಾರತ ಮಹಿಳಾ ತಂಡ ಇಂದು ದೆಹಲಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಮಣಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ.

ಈ ಬಾರಿಯ ಟೂರ್ನಿ ಆರಂಭವಾದ ಮೊದಲ ದಿನದಿಂದಲೂ ಭಾರತ ಮಹಿಳಾ ತಂಡ ಚಾಂಪಿಯನ್ ಆಗಲಿದೆ ಎಂಬ ದೊಡ್ಡ ನಿರೀಕ್ಷೆಯಿತ್ತು. ಸರಣಿಯುದ್ದಕ್ಕೂ ಭಾರತ ಎಲ್ಲಾ ತಂಡಗಳ ಮೇಲೂ ದೊಡ್ಡ ಅಂತರದ ಗೆಲುವು ಸಾಧಿಸಿ ಮುನ್ನುಗ್ಗಿದೆ.

ಇಂದಿನ ಫೈನಲ್ ಪಂದ್ಯದಲ್ಲಿ ಭಾರತ ನೇಪಾಳವನ್ನು 78-40 ಅಂಕಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮೊದಲಿಗೆ ಟರ್ನ್-1ರಲ್ಲಿ ದಾಳಿಯಿಟ್ಟ ಭಾರತ 34-0 ಅಂತರದ ದೊಡ್ಡ ಮುನ್ನಡೆ ಪಡೆದಿತ್ತು.

ಇನ್ನು ಎರಡನೇ ಟರ್ನ್‌ನಲ್ಲಿ ನೇಪಾಳ ಕೂಡ ಪ್ರಬಲ ಪೈಪೋಟಿ ನೀಡಿತ್ತಾದರೂ, ಇತ್ತ ನಮ್ಮ ಭಾರತದ ಡಿಫೆಂಡಗರ್‌ಗಳು ಸುಲಭವಾಗಿ ಅಂಕ ಗಳಿಸಲು ಅವಕಾಶ ನೀಡಲಿಲ್ಲ. ಹೀಗಾಗಿ ಎರಡನೇ ಟರ್ನ್ ನಂತರ ಸ್ಕೋರ್ 35-24 ಆಗಿತ್ತು. ಹೀಗಾಗಿ ಅಂತಿಮವಾಗಿ 78-40 ಅಂಕಗಳ ಅಂತರದಿಂದ ಭಾರತ ಚಾಂಪಿಯನ್ ಪಟ್ಟಕ್ಕೆ ಮುಟ್ಟಿತಿದೆ.

Exit mobile version