ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಂಚಮಿ ಜನವರಿ.19.2025 ಭಾನುವಾರ: ಈ ದಿನ ವಿಶೇಷವಾಗಿ ಮಧ್ಯಾಹ್ನ 12 ಗಂಟೆಯ ಒಳಗೆ ಆದಿತ್ಯ ಹೃದಯವನ್ನು ಯಾರು ಕೇಳುವುದು, ಸೂರ್ಯ ನಮಸ್ಕಾರ ಮಾಡುವುದು ಮಾಡುತ್ತಾರೆ ಅವರಿಗೆ ಅಭ್ಯುದಯ ಪ್ರಾಪ್ತಿಯಾಗುತ್ತದೆ.| Astrology
ಮೇಷ ರಾಶಿ: ಅತ್ಯಂತ ಆನಂದವಾದ ದಿನ.. ಮನಸ್ಸು ನೆಮ್ಮದಿಯ ಗೂಡಾಗಿದೆ, ಬಂಧು ಮಿತ್ರರ ಜೊತೆ ಅಥವಾ ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುವ ಕ್ಷಣ. ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳಬೇಡಿ. ನಿಧಾನವಾಗಿ ಪ್ರತಿಕ್ಷಣವನ್ನು ಆನಂದದಿಂದ ಅನುಭವಿಸಿ
(ಪರಿಹಾರಕ್ಕಾಗಿ ಶಿವನ ಆರಾಧನೆ ಮಾಡಿ)
ವೃಷಭ ರಾಶಿ: ಒಳ್ಳೆಯ ವಿಶ್ವಾಸವನ್ನು ಹೊಂದಿದ್ದು ಕೆಲಸಗಳನ್ನು ಮಾಡುತ್ತಿದ್ದೀರಾ, ಅತ್ಯಂತ ಶುಭದಿನ ಒಳ್ಳೆಯದಾಗುತ್ತದೆ/ ವಿದ್ಯೆಯಲ್ಲಿ ಸ್ವಲ್ಪ ಏಕಾಗ್ರತೆ ಕಮ್ಮಿ, ಧನ ಆಗಮದಲ್ಲಿ ಸ್ವಲ್ಪ ನಿಧಾನ ರೀತಿಯ ಆರಂಭ ಆಗುತ್ತದೆ. (ಪರಿಹಾರಕ್ಕಾಗಿ ನಾರಾಯಣದ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)
ಮಿಥುನ ರಾಶಿ: ಶುಭದಿನ ಆದರೆ ಸ್ವಲ್ಪ ಮನಸ್ಸಿನಲ್ಲಿ ಆಳವಾದ ಚಿಂತನೆ. ವಿದ್ಯಾರ್ಥಿಗಳಿಗೆ ಅಲ್ಪ ಲಾಭ, ಕೃಷಿಕರಿಗೆ ಸಮೃದ್ಧಿ ಬೆಳೆ ತುಂಬಾ ಚೆನ್ನಾಗಿ ಪರಿಸುತ್ತದೆ. ಕಾರ್ಯಗಳು ತುಂಬಾ ಚೆನ್ನಾಗಿ ಆಗುತ್ತವೆ. ಎಲ್ಲರಿಗೂ ಶುಭದಿನ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆಯನ್ನು ಮಾಡಿ)
ಕಟಕ ರಾಶಿ: ಎಲ್ಲ ಕಾರ್ಯದಲ್ಲೂ ನಿಧಾನ ಗತಿಯ ಜಯ.. ಸ್ವಲ್ಪ ವಿಳಂಬ ರೀತಿಯ ಕಾರ್ಯ, ಪ್ರೋತ್ಸಾಹವು ಸ್ವಲ್ಪ ನಿಧಾನ, ಎಲ್ಲ ರೀತಿಯಲ್ಲೂ ನಿಧಾನ ಗತಿಯಲ್ಲಿ ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ಆಂಜನೇಯ ಸ್ವಾಮಿಯ ಪೂಜೆ ಮಾಡಿ)
ಸಿಂಹ ರಾಶಿ: ನಿಮ್ಮ ಧರ್ಮವನ್ನು ನೀವು ಆಚರಿಸಿದರು ನಿಮಗೆ ಪುಣ್ಯ ಬರುತ್ತದೆ.. ಜೊತೆಯಲ್ಲಿ ಮನೆಯಲ್ಲಿ ಬಿಟ್ಟು ಹೋಗಿರುವ ವ್ರತ ಪೂಜೆಯನ್ನು ಅನುಷ್ಠಾನ ಮಾಡಿ ಪುನಃ ಆರಂಭಿಸಿ, ಎಲ್ಲಾ ಕಾರ್ಯದಲ್ಲೂ ಬಂದು ಮಿತ್ರರಿಗೂ, ನಿಮಗೂ ಒಳ್ಳೆಯ ಸಾಮರಸ್ಯ.. ಜೊತೆಗೆ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಮಹಾ ಮೃತ್ಯುಂಜಯ ಪೂಜೆಯನ್ನು ಮಾಡಿ)
ಕನ್ಯಾ ರಾಶಿ: ಒಳ್ಳೆಯ ಅದೃಷ್ಟ.. ಅಜ್ಞಾನದಿಂದ ಹೊರಗಡೆ ಬರುತ್ತೀರಿ.. ಸತ್ಯ ತಿಳಿಯುತ್ತದೆ. ನಿರಂತರವಾಗಿ ಒಳ್ಳೆಯವರ ಸಂಪರ್ಕದಲ್ಲಿ ಇರಿ, ಆರೋಗ್ಯವಂತರಾಗಿರುತ್ತೀರಿ. ದೃಢವಾದ ಕಾರ್ಯದಲ್ಲಿ ನಿಶ್ಚಯತೆಯನ್ನು ಇಟ್ಟುಕೊಳ್ಳಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆ ಮಾಡಿ)
Astrology
ತುಲಾ ರಾಶಿ: ಯಾವುದೇ ವಿಚಾರಗಳನ್ನು ಇದ್ದಕ್ಕಿದ್ದ ಹಾಗೆ ಒಪ್ಪಿಕೊಳ್ಳಬೇಡಿ.. ನಿಧಾನವಾಗಿ ತಾರ್ಕಿಸಿ ನೋಡಿ ಒಪ್ಪಿಕೊಳ್ಳಿ, ಜೊತೆಯಲ್ಲಿ ಕನಸಿನಲ್ಲಿ ಕಂಡದ್ದನ್ನು ನಿಜವಾಗುತ್ತದೆ ಎಂದು ವಿಪರೀತ ಭ್ರಮೆ ಇಡಬೇಡಿ, ಕನಸು ಕೆಲವು ಬಾರಿ ಸತ್ಯವಾಗುವುದಿಲ್ಲ. (ಪರಿಹಾರಕ್ಕಾಗಿ ನರಸಿಂಹನ ಸ್ಮರಣ ಮಾಡಿ)
ವೃಶ್ಚಿಕ ರಾಶಿ: ಆಳವಾದ ನೋವಿನಿಂದ ದುಃಖದಿಂದ ಹೊರಬರಬೇಕು, ಅದಕ್ಕಾಗಿ ನಿತ್ಯವೂ ಸಹ ಸೂರ್ಯನನ್ನು ಸ್ಮರಣೆ ಮಾಡಬೇಕು. ಜೊತೆಗೆ ಆರಂಭಕಾಲದಲ್ಲಿ ಗಣಪತಿಯನ್ನು ಪ್ರಾರ್ಥನೆ ಮಾಡಿ, ಅನುಗ್ರಹದಿಂದ ಸುಲಭವಾಗಿ ಎಲ್ಲ ವಿದ್ಯೆಯನ್ನು ಪಡೆಯಬಹುದು, ವಿದ್ಯಾರ್ಥಿಗಳಿಗೆ ಶುಭದಿನ. (ಪರಿಹಾರಕ್ಕಾಗಿ ಮಹಾ ಸರಸ್ವತಿ ಪೂಜೆ ಮಾಡಿ )
ಧನಸ್ಸು ರಾಶಿ: ಒಳ್ಳೆಯ ದಿನ. ಆದರೆ ಮನಸ್ಸಿನಲ್ಲಿ ಸ್ವಲ್ಪ ಚಿಂತೆ, ದುಗುಡ, ದುಃಖ, ದುಮ್ಮಾನ ಇದರಿಂದ ಹೊರಬರಬೇಕು. ನಿಧಾನವಾಗಿ ಯಾವುದರಲ್ಲಿ ಬೇಕು ಅದರಲ್ಲಿ ಹಣವನ್ನು ತೊಡಗಿಸಿ, ಅತಿಯಾಗಿ ಚಿಂತೆ ಬೇಡಿ. ಶುಭವಾಗುತ್ತದೆ ಚಿಂತಿಸಿದಷ್ಟು ಆರೋಗ್ಯ ಹಾನಿಯಾಗುತ್ತದೆ ಎಚ್ಚರಿಕೆ. (ಪರಿಹಾರಕ್ಕಾಗಿ ಈಶ್ವರನ ಪೂಜೆ ಮಾಡಿ)
ಮಕರ ರಾಶಿ: ಸುಳ್ಳನು ಹೇಳಲು ಅತಿಯಾಗಿ ಪ್ರಯತ್ನ ಮಾಡಬೇಡಿ, ಅನುಕೂಲವಾಗುತ್ತದೆ. ಸ್ವಲ್ಪ ಮಾನಹಾನಿಯಾಗುವ ಸಂಭವ ಎಚ್ಚರಿಕೆ, ಒಳ್ಳೆಯ ಭೋಜನ ಸುಭ್ಯವಸ್ಥೆ, ಈ ದಿನ ಸುಖವು ಪ್ರಾಪ್ತಿಯಾಗುತ್ತದೆ. (ಪರಿಹಾರಕ್ಕಾಗಿ ಅನ್ನಪೂರ್ಣೇಶ್ವರಿಯ ಧ್ಯಾನ ಮಾಡಿ)
ಕುಂಭ ರಾಶಿ: ನೀವು ನಿಮ್ಮ ಜನ್ಮದಲ್ಲಿ ಅತ್ಯಂತ ಪುಣ್ಯವನ್ನು ಮಾಡಿದ್ದೀರಾ.. ಹಾಗಾಗಿ ಒಳ್ಳೆಯ ಅವಕಾಶ ನಿಮಗೆ ಸಿಕ್ಕಿದೆ. ಈ ಅವಕಾಶದ ಹಿಂದೆ ನಿಧಾನವಾಗಿ ಹೋಗಿ, ನಿಧಾನವಾಗಿ ಸಾಧಿಸಿ, ಮನಸ್ಸಿನ ಆಲೋಚನೆ ಉತ್ತಮವಾಗಿದೆ. ನಿಧಾನವಾಗಿ ಎಲ್ಲವನ್ನು ಸಾಧಿಸಬಹುದು. ಎಚ್ಚರಿಕೆಯಿಂದ ಮುನ್ನುಗ್ಗಿ, ಧೃತಿಗೆಡಬೇಡಿ ಧೈರ್ಯವಾಗಿರಿ. (ಪರಿಹಾರಕ್ಕಾಗಿ ನರಸಿಂಹ ಪೂಜೆಯನ್ನು ಮಾಡಿ)
ಮೀನ ರಾಶಿ: ಈ ದಿನ ಮಿಶ್ರ ಫಲಗಳನ್ನು ಅನುಭವಿಸುತ್ತೀರಿ. ಸ್ವಲ್ಪ ಸಂತೋಷ, ಸ್ವಲ್ಪ ದುಃಖ, ಜೊತೆಗೆ ಸಾಮರಸ್ಯ.. ಒಳ್ಳೆಯ ಗೆಳೆತನ, ಅತ್ಯಂತ ಶ್ರೇಷ್ಠವಾದ ದಿನ ಎನಿಸುತ್ತದೆ. ಒಳ್ಳೆ ಊಟ, ಒಳ್ಳೆಯ ವ್ಯವಸ್ಥೆ ಎಲ್ಲರೊಂದಿಗೆ ಮಾತುಕತೆ, ಚುರುಕಾಗಿರುತ್ತದೆ. (ಪರಿಹಾರಕ್ಕಾಗಿ ಆಂಜನೇಯನ ಪೂಜೆ ಮಾಡಿ)
ರಾಹುಕಾಲ: 4-30PM ರಿಂದ 6-00PM
ಗುಳಿಕಕಾಲ: 3-00PM ರಿಂದ 4-30 PM
ಯಮಗಂಡಕಾಲ: 12-00PMರಿಂದ 1-30PM
ಹೆಚ್ಚಿನ ಮಾಹಿತಿಗೆ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572