ಚಿಕ್ಕಬಳ್ಳಾಪುರ: ತಾಲೂಕು ಮುದ್ದೇನಹಳ್ಳಿ ಬಳಿಯ ಸರ್ ಎಂ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಮುದ್ದೇನಹಳ್ಳಿ ಕ್ಯಾಂಪಸ್ ನಲ್ಲಿ ಎಂಬಿಎ ವಿದ್ಯಾರ್ಥಿಯೊರ್ವ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ.
ಕಾಲೇಜಿನ ವಸತಿ ನಿಲಯದ ಕೊಠಡಿಯಲ್ಲಿ 22 ವರ್ಷದ ಬಾಬು ಫ್ಯಾನಿಗೆ ಕೊರಳೊಡ್ಡಿ ಕೊನೆಯ ಉಸಿರು ಚೆಲ್ಲಿದ್ದಾನೆ.
ಅಂದಹಾಗೆ ಇಂದು ಬೆಳಿಗ್ಗೆ 10 ಗಂಟೆಯವರೆಗೂ ಚೆನ್ನಾಗಿಯೇ ಇದ್ದ ಬಾಬು ನಂತರ ಇದ್ದಕ್ಕಿದ್ದಂತೆ ಕೊಠಡಿಗೆ ಹೋಗಿ ಫ್ಯಾನಿಗೆ ಹಗ್ಗದ ಮೂಲಕ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಇನ್ನೂ ಸಾಯುವ ಮುನ್ನ ತನ್ನ ಅಣ್ಣನ ಮೊಬೈಲ್ ಗೆ ಸ್ನೇಹಿತರು ಕೊಡಬೇಕಾದ ಹಣದ ವಿವರ, ಬ್ಯಾಂಕ್ ನಲ್ಲಿರುವ ಹಣದ ಮಾಹಿತಿ ಹಾಗೂ ಎಟಿಎಂ ನ ಪಿನ್ ಮೆಸೇಜ್ ಮಾಡಿದ್ದಾನೆ.
ಇದ್ರಿಂದ ಕೂಡಲೇ ತಮ್ಮನಿಗೆ ಅಣ್ಣ ಕರೆ ಮಾಡಿದ್ರೂ ಕರೆ ಸ್ವೀಕರಿಸಿಲ್ಲ. ತದನಂತರ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ಕೊಠಡಿಗೆ ಹೋಗಿ ನೋಡಲಾಗಿ ಆತ್ಮಹತ್ಯೆ ಮಾಡಕೊಂಡಿರುವುದು ಬೆಳಕಿಗೆ ಬಂದಿದೆ.
ಇನ್ನೂ ಬಾಬು ಯಾಕೆ ಆತ್ಮಹತ್ಯೆ ಮಾಡಿಕೊಂಡು ಎಂಬುದರ ಬಗ್ಗೆ ನಿಖರ ಕಾರಣ ಯಾರ ಬಳಿಯೂ ಹೇಳಿಕೊಂಡಿಲ್ಲ. ಘಟನೆ ನಂತರ ನಂದಿಗಿರಿಧಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯೆ ಶವಾಗಾರಕ್ಕೆ ರವಾನಿಸಿದ್ದಾರೆ.
ಮೃತನ ಸಂಬಂಧಿಕರು ವಿಚಾರಣೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.