ಚಿಕ್ಕಬಳ್ಳಾಪುರ: ಅನ್ನದಾತ ರೈತರು ಹಗಲು ರಾತ್ರಿ ಕಷ್ಟ ಪಟ್ಟು ಹೈನೋದ್ಯಮದ ಮೂಲಕ ಹಾಲಿನ ಡೈರಿಗಳಿಗೆ ಪರಿಶುದ್ದ ಹಾಲು (Milk) ಸರಬರಾಜು ಮಾಡಿದ್ರೆ.. ಸ್ವತಃ ಡೈರಿಗಳ ಸಿಬ್ಬಂದಿಗಳೇ ಶುದ್ದ ಹಾಲಿಗೆ ನೀರು ಮಿಶ್ರಣ ಮಾಡಿ ಕಲಬೆರಕೆ ಮಾಡಿ ವಂಚನೆ ಮಾಡಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೆರೆ ಹಾಲಿನ ಡೇರಿ ಬಿಎಂಸಿ ಕೇಂದ್ರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಮಾಡಿಕೆರೆ ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು..
ಹಾಲಿನ ಡಂಪ್ ಟ್ಯಾಂಕ್ ಗೆ ನೀರು ಕಲಬೆರಕೆ ಮಾಡಿ… ಹಾಲಿನ (Milk) ಟ್ಯಾಂಕ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಮೆಗಾ ಡೈರಿಗೆ ಸರಬರಾಜು ಮಾಡಿ ಈಗ ಸಿಕ್ಕಿ ಬಿದ್ದಿದ್ದಾರೆ.
ಇದನ್ನೂ ಓದಿ; Doddaballapura; ಮಿತಿಮೀರಿದ ಕಾಡುಹಂದಿ ಹಾವಳಿ.. ಹುರುಳಿ ಗಿಡ ಸಂಪೂರ್ಣ ನಾಶ
ಸ್ವತಃ ಡೈರಿ ಸಿಬ್ಬಂದಿಗಳ ಕಳ್ಳಾಟವನ್ನು ಮತ್ತೊರ್ವ ಸಿಬ್ಬಂದಿ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ… ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಇನ್ನೂ ಮಾಡಿಕೆರೆ ಹಾಲಿನ (Milk) ಡೈರಿ ಬಿ.ಎಂ.ಸಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಹಾಲಿನ ಮಿಶ್ರಣ ಅಕ್ರಮ ವಿಚಾರ ಬಯಲಾಗ್ತಿದ್ದಂತೆ ಸ್ವತಃ ಚಿಮುಲ್ ಎಂಡಿ ಶ್ರೀನಿವಾಸಗೌಡ ಅಲರ್ಟ್ ಆಗಿದ್ದು,ಡೈರಿಯ ಸಹಾಯಕ ಚೇತನ್ ನನ್ನು ಕೆಲಸದಿಂದ ವಜಾ ಮಾಡಿದ್ದಾರೆ.
ಅಲ್ಲದೆ ಹಾಲಿನ ಟ್ಯಾಂಕರ್ ನ ಚಾಲಕನ ಮಾರ್ಗ ಬದಲಾವಣೆ ಮಾಡಿದ್ದಾರೆ.

ಮುಂದುವರಿದು ಹಾಲಿಗೆ ನೀರು ಮಿಶ್ರಣ ಕಳ್ಳಾಟ ತನಿಖೆಗೆ ಸಮಿತಿಯೊಂದನ್ನು ರಚಿಸಿದ್ದು ಅಕ್ರಮ ತಡೆಗಟ್ಟುವ ಭರವಸೆ ನೀಡಿದ್ದಾರೆ.