ದೇವನಹಳ್ಳಿ (Crime news:): ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ತಂದಿದ್ದ 23 ಕೋಟಿ ರೂ. ಮೌಲ್ಯದ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಕೊಂಡಿದ್ದಾರೆ.
ಬ್ಯಾಂಕಾಕ್‌ನಿಂದ ಅಕ್ರಮವಾಗಿ 23 ಕೆಜಿ ಗಾಂಜಾ ತಂದಿದ್ದ ಮೂವರನ್ನು ಬಂಧಿಸಲಾಗಿದೆ.
ಬಂಧಿತ ಮೂವರು ಬ್ಯಾಂಕಾಕ್‌ನಿಂದ ಅಕ್ರಮವಾಗಿ 23 ಕೆಜಿಯ ಹೈಡೋಪೋನಿಕ್ಸ್, ಮೈರವಾನ್ ಮತ್ತು ಹೂ ಸೇರಿ ವಿವಿಧ ಬಗೆಯ ಗಾಂಜಾವನ್ನು ಪ್ರತ್ಯೇಕ ಕವರ್‌ಗಳಲ್ಲಿ ಪ್ಯಾಕಿಂಗ್ ಮಾಡಿಕೊಂಡು ಲಗೇಜ್ ಬ್ಯಾಗ್‌ನಲ್ಲಿಟ್ಟುಕೊಂಡು ಕೆಐಎಬಿಗೆ ಬಂದಿದ್ದರು.
ಈ ವೇಳೆ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ವೇಳೆ ಮೂವರನ್ನು ಬಂಧಿಸಿದ್ದಾರೆ.