ಮೈಸೂರು: ಪಕ್ಷವನ್ನು ಗಟ್ಟಿಗೊಳಿಸಿ, ಭಾರತೀಯ ಜನತಾ ಪಾರ್ಟಿಯನ್ನ (BJP) ಸ್ಪಷ್ಟ ಬಹುಮತದಲ್ಲಿ ಅಧಿಕಾರಕ್ಕೆ ತರುತ್ತೇನೆ ಎಂದು ರಾಜ್ಯದ ಅಧ್ಯಕ್ಷನಾಗಿ ಹೇಳ್ತಾ ಇದ್ದೇನೆ ಅಂದ್ರೆ ನಾನು ಅಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದು ಬಿವೈ ವಿಜಯೇಂದ್ರ ಹೇಳಿದರು.
ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಾಜ್ಯದ ಅಧ್ಯಕ್ಷನಾಗಿ ಒಂದು ವರ್ಷಗಳ ಕಾಲ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊರಾಟ ಮಾಡಿಕೊಂಡು ಬಂದಿದ್ದೆನೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಹಕಾರ ನೀಡಿದ್ದಾರೆ.
ಇದೇ ಬೆಂಗಳೂರಿನಿಂದ ಮೈಸೂರಿಗೆ ನಾವು ಮಾಡಿದ ಐತಿಹಾಸಿಕ ಪಾದಯಾತ್ರೆ… ಸಿದ್ದರಾಮಯ್ಯ ಅವರನ್ನು ಎಷ್ಟು ಆತಂಕ ಗೊಂಡಿದ್ದರುಬ ಎಂದು ನಿಮಗೂ ತಿಳಿದಿದೆ.
ನಮ್ಮ ಕಾರ್ಯಕರ್ತರು ನನ್ನ ಕಾರ್ಯವೈಖರಿ ಬಗ್ಗೆ ಖುಷಿಯಾಗಿ, ಸಂತೋಷವಾಗಿದ್ದಾರೆ. ನನ್ನ ಮುಂದೆ ದೊಡ್ಡ ಸವಾಲಿದೆ. ಬಿಜೆಪಿಯನ್ನು ರಾಜ್ಯದಲ್ಲಿ ಮತ್ತಷ್ಟು ಸದೃಢಗೊಳಿಸಿ ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದೇನೆ.
ಪಕ್ಷವನ್ನು ಗಟ್ಟಿಗೊಳಿಸಿ, ಭಾರತೀಯ ಜನತಾ ಪಾರ್ಟಿಯನ್ನ (BJP) ಸ್ಪಷ್ಟ ಬಹುಮತದಲ್ಲಿ ಅಧಿಕಾರಕ್ಕೆ ತರುತ್ತೇನೆ ಎಂದು ರಾಜ್ಯದ ಅಧ್ಯಕ್ಷನಾಗಿ ಹೇಳ್ತಾ ಇದ್ದೇನೆ ಅಂದ್ರೆ ನಾನು ಅಧ್ಯಕ್ಷನಾಗಿ ಮುಂದುವರಿಯುತ್ತೇನೆ. ಪಕ್ಷವನ್ನು ಬಲಪಡಿಸುತ್ತೇನೆ, ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಮುನ್ನಡೆಸುತ್ತೇನೆ.
ಕೊಪ್ಪಳದಲ್ಲಿ ಮೊನ್ನೆ ವಿಜಯೇಂದ್ರ ಅವರು ರಮೇಶ್ ಜಾರಕಿಹೊಳಿ ವಿಷಯದಲ್ಲಿ ಮಾತಾಡಿದ ಹಾಗೆ ತನ್ನ ಬಗ್ಗೆ ಮಾತಾಡಿದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಆ ಮಾತಿಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಬಹಳ ಸಂತೋಷ ದೇವರು ಅವರಿಗೆ ಒಳ್ಳೇದು ಮಾಡಲಿ ಎಂದು ಯತ್ನಾಳ್ ಬಗ್ಗೆ ಎಚ್ಚರಿಕೆ ನೀಡಲು ಹಿಂದೆಟು ಹಾಕಿದರು..