ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ಕೆಪಿಎಸ್ಸಿ (KPSC) ಪರೀಕ್ಷೆಯಲ್ಲಿ ಆಗುತ್ತಿರುವ ತೊಂದರೆಗಳಿಂದ ವಿದ್ಯಾರ್ಥಿಗಳು ಪದೇ ಪದೇ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಅವರು ಇಂದು ಪ್ರೀಡಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ಓದುವುದನ್ನು ಬಿಟ್ಟು ಬೀದಿಗೆ ಇಳಿದು ಹೋರಾಟ ಮಾಡುವ ಹಾಗೆ ರಾಜ್ಯ ಸರ್ಕಾರ ಮಾಡ್ತಿದೆ. ಈ ಹೋರಾಟಕ್ಕೆ ನಾನು ರಾಜ್ಯಾಧ್ಯಕ್ಷನಾಗಿ, ಶಾಸಕನಾಗಿ ಬಂದಿಲ್ಲ ಬದಲಾಗಿ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ಹೋರಾಟಕ್ಕೆ ಧ್ವನಿ ಯಾಗಲು ಬಂದಿದ್ದೇನೆ ಅಂತ ಹೇಳಿದರು.
ಕೆಪಿಎಸ್ ರಾಜ್ಯದ ಯುವಕರ ಭವಿಷ್ಯ ರೂಪಿಸಬೇಕಿತ್ತು ಲಕ್ಷಾಂತರ ಯುವಕರು ಹಗಲು ರಾತ್ರಿ ಪರಿಶ್ರಮ ಹಾಕಿ ತಮ್ಮ ಜೀವನ ರೂಪಿಸಿಕೊಳ್ಳುಲು ಶ್ರಮ ಹಾಕುತ್ತಿದ್ದೀರ ನಿಮ್ಮ ತಪಸ್ಸಿಗೆ ಕೊಳ್ಳಿ ಇಡುವ ಕೆಲಸವನ್ನು ರಾಜ್ಯ ಸರ್ಕಾರ ಮತ್ತು ಕೆಪಿಎಸ್ ಸಿ ಮಾಡುತ್ತಿದೆ.
ಸರ್ಕಾರ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಡ ಆಡುತ್ತಿದೆ ಕೆಪಿಎಸ್ ಸಿ ಅವಾಂತರಗಳು ನೆನ್ನೆ ಮೊನ್ನೆಯದಲ್ಲ ನಮ್ಮ ಸರ್ಕಾರದ ಅವಧಿಯಲ್ಲೂ ಕೆಪಿಎಸ್ ಸಿ ಅಧಿಕಾರಿಗಳು ಹುಡುಗಾಟ ಆಡಿದ್ರು ಇದರಿಂದ ಪರೀಕ್ಷೆಗಳು ಪದೇ ಪದೇ ಮುಂದೂಡುತ್ತಿದೆ.
ಪರೀಕ್ಷೆ ಬರೆದ ಮೇಲೆ ರಿಸಲ್ಟ್ ಘೋಷಣೆ ಮಾಡೋಕೆ ಒಂದು ವರ್ಷ ತೆಗೆದುಕೊಳ್ಳುತ್ತಾರೆ. ವಯಸ್ಸಿನ ಮಿತಿ ಮೀರಿ ವಿದ್ಯಾರ್ಥಿಗಳು ಕಳವಳ ಆಗುವಂತೆ ಮಾಡುತ್ತಾರೆ.
ಹೋರಾಟ ಮಾದ್ಯಮಕ್ಕೆ ಸೀಮಿತವಾಗಬಾರದು
ಇವತ್ತಿನ ಹೋರಾಟ ಮಾಧ್ಯಮಗಳಲ್ಲಿ ಬರುತ್ತೆ ನಮಗೆ ಜಯ ಸಿಗುತ್ತೆ ಅನ್ನೋ ನಂಬಿಕೆ ಬದಿಗಿಟ್ಟು ಹೋರಾಟ ಮಾಡಬೇಕು ಆಗ ಮಾತ್ರ ನಮಗೆ ಜಯ ಸಿಗುತ್ತೆ.
ಕೆಪಿಎಸ್ ಸಿ ಅಧಿಕಾರಿಗಳು ಮನುಷ್ಯತ್ವದಿಂದ ಎಲ್ಲಿಯವರೆಗು ತಮ್ಮ ತಪ್ಪನ್ನು ತಿದ್ದಿಕೊಳ್ಳುವುದಿಲ್ಲವೋ ಅಲ್ಲಿವರೆಗು ನಿಮ್ಮ ಹೋರಾಟ ನಿಲ್ಲಿಸಬೇಡಿ ಅಂತ ಕರೆ ನೀಡಿದರು
ಬಿಜೆಪಿ ಪಕ್ಷ ನಿಮ್ಮ ಪರವಾಗಿ
ಅನೇಕ ವಿದ್ಯಾರ್ಥಿಗಳು ವಯಸ್ಸಿನ ಮಿತಿಯಿಂದ ಅರ್ಹತೆ ಕಳೆದುಕೊಳ್ಳುತ್ತಿದ್ದಾರೆ. ನಾನು ಮತ್ರು ನಮ್ಮ ಪಕ್ಷ ನಿಮಗೆ ನ್ಯಾಯ ಸಿಗೋವರೆಗು ನಿಮ್ಮ ಜೊತೆ ಇರುತ್ತೆ ಎದಗೊಂದದೆ ಹೋರಾಟ ಮಾಡಿ ಅಂತ ಹೇಳಿದರು