Site icon ಹರಿತಲೇಖನಿ

Remainder: ಇಂದು ದೊಡ್ಡಬಳ್ಳಾಪುರದ ಈ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ..!

Power cut off in these villages..!

Power cut off in these villages..!

Channel Gowda
Hukukudi trust

ದೊಡ್ಡಬಳ್ಳಾಪುರ; ಬೆಸ್ಕಾಂ ದೊಡ್ಡಬಳ್ಳಾಪುರ ಗ್ರಾಮಾಂತರ ವಿಭಾಗದ ದೊಡ್ಡಬೆಳವಂಗಲ, ಸಾಸಲು ಹಾಗೂ ಗುಂಡಮಗೆರೆ ವಿದ್ಯುತ್ ಉಪ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಹಿನ್ನೆಲೆಯಲ್ಲಿ ಇಂದು (ಜ.16) ರಂದು ಬೆಳಗ್ಗೆಯಿಂದ ಸಂಜೆಯವರೆಗೂ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.

Aravind, BLN Swamy, Lingapura

ಈ ಕುರಿತು ಪ್ರಕಟಣೆ ನೀಡಿರುವ ಬೆಸ್ಕಾಂ ಗ್ರಾಮಾಂತರ ವಿಭಾಗದ ಎಇಇ ಮಂಜುನಾಥ್, ದೊಡ್ಡಬೆಳವಂಗಲ, ಸಾಸಲು, ಗುಂಡಮಗೆರೆ 66/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ಈ ಕೇಂದ್ರದಿಂದ ಸರಬರಾಜಾಗುತ್ತಿರುವ ಮಾರ್ಗಗಳಲ್ಲಿ ಜ.16 ರಂದು ಬೆಳಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ಆದ್ದರಿಂದ ವಿದ್ಯುತ್ ಅಡಚಣೆ ಬಗ್ಗೆ ಎಚ್.ಟಿ ಮತ್ತು ಎಲ್,ಟಿ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

Aravind, BLN Swamy, Lingapura

ವಿದ್ಯುತ್‌ ಅಡಚಣೆಯುಂಟಾಗುವ ಪ್ರದೇಶಗಳು

ದೊಡ್ಡಬೆಳವಂಗಲ ಉಪಕೇಂದ್ರ ವಾಪ್ತಿಯ ಹಾದ್ರಿಪುರ, ಅಜ್ಜನಕಟ್ಟೆ, ಮಧುರನಹೊಸಹಳ್ಳಿ, ನಾರನಹಳ್ಳಿ, ರಾಮೇಶ್ವರ, ಚಿಕ್ಕಹೆಜ್ಜಾಜಿ, ಕತ್ತಾಳೆಪಾಳ್ಯ, ದೊಡ್ಡಬೆಳವಂಗಲ, ದೊಡ್ಡಹೆಜ್ಜಾಜ್ಜಿ, ಪುಟ್ಟಯ್ಯನ ಅಗ್ರಹಾರ, ಶಾಕಲದೇವನಪುರ, ರಾಂಪುರ, ಭಕ್ತರಹಳ್ಳಿ, ಮಲ್ಲನಾಯಕನಹಳ್ಳಿ, ವಡೆರಹಳ್ಳಿ, ಜೋಡಿ ಕಾರೆಪುರ, ಹುಲಿಕುಂಟೆ, ತರಬನಹಳ್ಳಿ.

ಜೋಡಿ ಕಾರೆಪುರ, ಮುತ್ತುಗದಹಳ್ಳಿ, ತೂಬುಕುಂಟೆ, ಅಪ್ಪಕಾರನಹಳ್ಳಿ, ಹುಣಸೆಪಾಳ್ಯ, ಮರಿಹೆಗ್ಗಯ್ಯನಪಾಳ್ಯ, ಮುಗೇನಹಳ್ಳಿ, ಐಯ್ಯನಹಳ್ಳಿ, ಕೊಗೆನಹಳ್ಳಿ, ಚುಂಚೇಗೌಡನ ಹೊಸಹಳ್ಳಿ, ಹುಸ್ಕೂರು, ಮೆಣಸಿ, ಕುಂಟನಹಳ್ಳಿ, ಅಣಗಲಪುರ, ಬೋಕಿಪುರ, ಕಲ್ಲುದೇವನಹಳ್ಳಿ.

ನರಸಯ್ಯನ ಅಗ್ರಹಾರ, ಸಾಸಲು, ಗುಮ್ಮನಹಳ್ಳಿ, ಶ್ರೀರಾಮನಹಳ್ಳಿ, ಅಕ್ಕತಮ್ಮನಹಳ್ಳಿ, ಲಿಂಗಪುರ, ಬೂಚನಹಳ್ಳಿ, ಸಂಕರಸನಹಳ್ಳಿ, ಹಳೇಕೋಟೆ, ಸಕ್ಕರೆ ಗೊಲ್ಲಹಳ್ಳಿ, ಕಾಳಿಪಾಳ್ಯ, ಮೂಡಲಕಾಲೇನಹಳ್ಳಿ, ತನ್ನಿರನಹಳ್ಳಿ, ಕಾಡಲಪನಹಳ್ಳಿ, ಕೊಲಿಗೆರೆ, ಕರಡಿಪಾಳ್ಯ, ಕಾಮನ ಅಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಇದನ್ನೂ ಓದಿ: Doddaballapura: ಕೊಲೆ, ಡಕಾಯಿತಿ ನಡೆಸಿದ್ದ ಎಂಟು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ‌‌..!

ಸಾಸಲು ಮತ್ತು ಗುಂಡಮಗೆರೆ: ವ್ಯಾಪ್ತಿಯ ಗುಂಡಮಗೆರೆ, ಹೊಸಕೋಟೆ, ಸೊನ್ನೆನಹಳ್ಳಿ, ಬಂಕೆನಹಳ್ಳಿ, ಮಾಕಳಿ, ವಾಬಸಂದ್ರ, ಕಾಮೇನಹಳ್ಳಿ, ಪಚ್ಚಾರ್ಲಹಳ್ಳಿ, ಗುಟ್ಟೆಪಾಳ್ಯ, ಹಾರೋಹಳ್ಳಿ, ಚಿಲೇನಹಳ್ಳಿ, ಚೊಕ್ಕಹಳ್ಳಿ, ನೆಲ್ಲುಕುಂಟೆ, ಪಾಳ್ಯ, ಕಮಲೂರು, ದಿಣ್ಣೆತಾಂಡ, ಹೊಸಹಳ್ಳಿ, ನಾಗಶೆಟ್ಟಿಹಳ್ಳಿ, ಕರೇನಹಳ್ಳಿ, ಹೊಸಹಳ್ಳಿ ತಾಂಡ.

ಸೂಲುಕುಂಟೆ, ಚನ್ನವೀರನಹಳ್ಳಿ, ನಾಗಲಪುರ, ಕೋಟಿಗೆಮಾಚೇನಹಳ್ಳಿ, ಕುಕ್ಕಲಹಳ್ಳಿ, ಯಕಾರಲಹಳ್ಳಿ, ಜಕ್ಕೆನಹಳ್ಳಿ, ಕಲ್ಲುಕುಂಟೆ, ಮಲ್ಲಸಂದ್ರ, ಕಟ್ಟೆಯಿಂದಲಹಳ್ಳಿ, ಬಂಡಮ್ಮನಹಳ್ಳಿ, ಉಜ್ಜನಿ, ಓಜೇನಹಳ್ಳಿ, ಹೊಸಹಳ್ಳಿ ಕಾಲೋನಿ.

ಬನವತಿ, ಆರೂಢಿ, ದೊಡ್ಡಗುಂಡಪ್ಪನಾಯಕನಹಳ್ಳಿ, ಚಿಕ್ಕಗುಂಡಪ್ಪನಾಯಕನಹಳ್ಳಿ, ಲಿಂಗದೀರನಹಳ್ಳಿ, ಮೇಗಲಹಳ್ಳಿ, ವಡ್ಡನಹಳ್ಳಿ, ಗರಿಕೇನಹಳ್ಳಿ, ಪಾಲನಹಳ್ಳಿ, ಅಮಲಗುಂಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Exit mobile version