ದೊಡ್ಡಬಳ್ಳಾಪುರ: ಜೆಡಿಎಸ್ ಹಿರಿಯ ಮುಖಂಡ ಅಪ್ಪಯ್ಯಣ್ಣ ಅವರ ನಿಧನದಿಂದ ತೆರವಾಗಿದ್ದ ಹಾಡೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ (MPCS) ಅಧ್ಯಕ್ಷ ಸ್ಥಾನದ ಚುನಾವಣೆ ಇಂದು ಅವಿರೋಧ ಆಯ್ಕೆ ಮಾಡಲಾಗಿದೆ.
ಇಂದು ಚುನಾವಣೆ ಅಧಿಕಾರಿ ನಾಗಮಣಿ ಸಮ್ಮುಖದಲ್ಲಿ ನಡೆದ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಅಪ್ಪಯ್ಯಣ್ಣ ಅವರ ಸಹೋದರ ಹೆಚ್.ನಾರಾಯಣಪ್ಪ ಅವರನ್ನು ಎಲ್ಲಾ ನಿರ್ದೇಶಕರು ಒಮ್ಮತದಿಂದ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್ ಎ ನಾಗರಾಜು , ಹಾಡೋನಹಳ್ಳಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಮನೆಗೌಡ, ಎಂಪಿಸಿಎಸ್ ಮಾಜಿ ಅಧ್ಯಕ್ಷ ವೆಂಕಟೇಶ್, ಮುನಿರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೌಡಪ್ಪ.
ನಿರ್ದೇಶಕರಾದ ನಾಗರತ್ನಮ್ಮ, ಅಂಜಿನಮ್ಮ, ರಾಜು, ಮುನಿವೀರಪ್ಪ, ಕೃಷ್ಣಮೂರ್ತಿ, ರಾಮಕೃಷ್ಣಪ್ಪ, ಮುನಿಮಾರಪ್ಪ, ವೀರಭದ್ರಪ್ಪ, ರಾಮಪ್ಪ, ನಾಗರಾಜು.
ಮುಖಂಡರಾದ ಚನ್ನಕೇಶವಮೂರ್ತಿ, ಚಂದ್ರಹಾಸ್, ಕಾಂತ್ ಕುಮಾರ್, ರಾಜಣ್ಣ, ನರಸಿಂಹಮೂರ್ತಿ, ಗಿರೀಶ್, ಮಧುಸೂದನ್, ಮಧು ಇತರರಿದ್ದರು.