ದೊಡ್ಡಬಳ್ಳಾಪುರ (Doddaballapura); ದ್ವಿಚಕ್ರ ವಾಹನ ಸವಾರರ ಮೇಲೆ KSRTC ಬಸ್ ಹರಿದ ಪರಿಣಾಮ 8 ವರ್ಷದ ಮಗು ಸೇರಿ ಇಬ್ಬರು ಸಾವನಪ್ಪಿರುವ ಘಟನೆ ತಪಸೀಹಳ್ಳಿ ನಡುವೆ ಗೊಲ್ಲಹಳ್ಳಿ ಬಳಿ ಸಂಭವಿಸಿದೆ.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ಮೃತ ದುರ್ದೈವಿಗಳನ್ನು ಕೆಳಗಿನಜೋಗನಹಳ್ಳಿ ನಿವಾಸಿ ವೆಂಕಟೇಶ ಮೂರ್ತಿ ( 31 ವರ್ಷ) ಹಾಗೂ ಆತನ ತಂಗಿ ಮಗಳಾದ ಮೋಕ್ಷ (08 ವರ್ಷ) ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಅನ್ವಯ ದ್ವಿಚಕ್ರ ವಾಹನದಲ್ಲಿ ವೆಂಕಟೇಶ ಮೂರ್ತಿ ಇಬ್ಬರು ಮಕ್ಕಳು ಹಾಗೂ ಓರ್ವ ಮಹಿಳೆಯೊಂದಿಗೆ ದೊಡ್ಡಬಳ್ಳಾಪುರಕ್ಕೆ ತೆರಳುತ್ತಿದ್ದು, ಈ ವೇಳೆ ಆಂದ್ರ ಸಾರಿಗೆ ಬಸ್ ಓವರ್ಟೇಕ್ ಮಾಡುವ ವೇಳೆ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದಿದೆ. ಇದರಿಂದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ವೆಂಕಟೇಶ್ ಮೂರ್ತಿ ಹಾಗೂ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವರು ರಸ್ತೆಗೆ ಬಿದ್ದಿದ್ದಾರೆ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ವಿಪರ್ಯಾಸಕ್ಕೆ ಇದೇ ವೇಳೆ ಹಿಂದಿನಿಂದ ಬರುತ್ತಿದ್ದ KSRTC ಬಸ್ ವೆಂಕಟೇಶ್ ಮೂರ್ತಿ ಹಾಗೂ ಮಗು ಮೋಕ್ಷಿತ ಮೇಲೆ ಹರಿದಿದ್ದು, ವೆಂಕಟೇಶ್ ಮೂರ್ತಿ ಸ್ಥಳದಲ್ಲಿಯೇ ಸಾವನಪ್ಪಿದರೆ, ಮೋಕ್ಷ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನಪ್ಪಿದೆ.
ಘಟನೆಯಲ್ಲಿ ಮಹಿಳೆ ಹಾಗೂ ಮತ್ತೊಂದು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದೆ ಎನ್ನಲಾಗಿದೆ.
ಅಪಘಾತದಿಂದ ಕೆರಳಿದ ಸ್ಥಳೀಯರು ಎರಡು ಬಸ್ಸುಗಳನ್ನು ತಡೆದು, ಚಾಲಕರನ್ನು ಹಿಗ್ಗಾಮುಗ್ಗಾ ತಳಿಸಿದ್ದಾರೆಂದು ತಿಳಿದುಬಂದಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.