ಚಾಮರಾಜನಗರ (Viral news): ಚಿರತೆಗಾಗಿ ಇಟ್ಟಿದ್ದ ಬೋನಿಗೆ ವ್ಯಕ್ತಿ ಸೆರೆಯಾದ ವಿಚಿತ್ರ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ.
ಪಡಗೂರು ಗ್ರಾಮದ ಹನುಮಯ್ಯ ಎಂಬಾತ ಬೋನಿನಲ್ಲಿ ಸೆರೆಯಾಗಿದ್ದ ವ್ಯಕ್ತಿ.
ಜಾನುವಾರುಗಳ ಮೇಲೆ ಚಿರತೆಯೊಂದು ನಿರಂತರ ದಾಳಿ ಮಾಡುತ್ತಿದ್ದ ಹಿನ್ನೆಲೆ ಅರಣ್ಯ ಇಲಾಖೆಯು ಮಹಾದೇವಸ್ವಾಮಿ ಎಂಬವವರ ಜಮೀನಿನಲ್ಲಿ ಬೋನನ್ನು ಆಳವಡಿಸಿ ಕರು ಕಟ್ಟಿದ್ದರು.
ಹನುಮಯ್ಯ ಚಿರತೆಗಾಗಿ ಇಟ್ಟಿದ್ದ ಬೋನಿನ ಒಳಕ್ಕೆ ಕುತೂಹಲದಿಂದ ನೋಡಲು ಹೋಗಿದ್ದಾಗ ಬಾಗಿಲು ಬಂದ್ ಆಗಿ 5 – 6 ತಾಸು ಬೋನೊಳಗೆ ಸಮಯ ಕಳೆದಿದ್ದಾರೆ.
ಸ್ಥಳೀಯ ರೈತರೊಬ್ಬರು ಬೋನಿನೊಳಗೆ ವ್ಯಕ್ತಿ ಸೆರೆಯಾಗಿದ್ದನ್ನ ಕಂಡು ಹೌಹಾರಿ, ಸ್ಥಳೀಯರಿಗೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ.
ನಂತರ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹನುಮಯ್ಯನನ್ನು ಬಂಧ ಮುಕ್ತ ಮಾಡಿದ್ದಾರೆ.