Site icon ಹರಿತಲೇಖನಿ

ಕರ್ನಾಟಕ – ಆಂಧ್ರ ಬಸ್ ಓವರ್ ಟೇಕ್ ಪೈಪೋಟಿ.. 8 ವರ್ಷದ ಬಾಲಕಿ ಸಮೇತ ಸೋದರ ಮಾವನ ದಾರುಣ ಸಾವು…!| Accident

8-year-old girl along with her brother-in-law died tragically

8-year-old girl along with her brother-in-law died tragically

ದೊಡ್ಡಬಳ್ಳಾಪುರ Accident: ಕರ್ನಾಟಕ ಹಾಗೂ ಆಂಧ್ರ ಸಾರಿಗೆ ಬಸ್ ಗಳು ನಾನಾ ನೀನಾ ಅಂತ ಪೈಪೋಟಿಗೆ ಬಿದ್ದ ಕಾರಣ, ಎರಡು ಅಮಾಯಕ ಜೀವಗಳು ಬಲಿಯಾಗಿರುವ ಘಟನೆ ತಾಲೂಕಿನ ಗೊಲ್ಲಹಳ್ಳಿ – ತಪಸೀಹಳ್ಳಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಎರಡು ಬಸ್ ಗಳ ನಡುವೆ ಸಿಲುಕಿದ ಬೈಕ್ ಸವಾರ ಅಪಘಾತಕ್ಕೀಡಾಗಿ ತನ್ನ ತಂಗಿಯ ಮಗಳ ಜೊತೆಗೆ ತಾನು ದಾರುಣವಾಗಿ ಸಾವನ್ನಪ್ಪಿದ್ದಾನೆ.

ಕೆಳಗಿನ ಜೂಗಾನಹಳ್ಳಿ ನಿವಾಸಿ ವೆಂಕಟೇಶ್ ಮೂರ್ತಿ (31 ವರ್ಷ) ತನ್ನ ಬೈಕ್ ನಲ್ಲಿ 8 ವರ್ಷದ ತಂಗಿಯ ಮಗಳಾದ ಮೋಕ್ಷಳೊಂದಿಗೆ ದೊಡ್ಡಬಳ್ಳಾಪುರಕ್ಕೆ ಬರುವ ವೇಳೆ ದಾರಿಯಲ್ಲಿ ಮತ್ತೊರ್ವ ಮಹಿಳೆ ಹಾಗೂ ಮಗು ಡ್ರಾಪ್ ಕೇಳಿದ್ದಾರೆ.

ಇದನ್ನೂ ಓದಿ: Doddaballapura: ಕೊಲೆ, ಡಕಾಯಿತಿ ನಡೆಸಿದ್ದ ಎಂಟು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ‌‌..!

ಅವರನ್ನು ಬೈಕ್ ಗೆ ಹತ್ತಿಸಿಕೊಂಡು ಹಿಂದೂಪುರ – ಬೆಂಗಳೂರು ನಡುವಿನ ರಾಜ್ಯ ಹೆದ್ದಾರಿಯಲ್ಲಿ ಬರುವ ವೇಳೆ ಹಿಂದೂಪುರದಿಂದ ಬೆಂಗಳೂರಿಗೆ ಬರ್ತಿದ್ದ ಕೆಎಸ್ ಆರ್ ಟಿ ಸಿ ಬಸ್ ಹಾಗೂ ಎಪಿಎಸ್‍ಆರ್‍ಟಿಸಿ ಬಸ್ ಗಳ ಮಧ್ಯೆ ಬೈಕ್ ಸವಾರ ಸಿಲುಕಿದ್ದಾನೆ.

ಮೊದಲು ಎಪಿಎಸ್‍ಆರ್‍ಟಿಸಿ (APRTC) ಬಸ್ ಗೆ ಬೈಕ್ ತಗುಲಿ ನೆಲಕ್ಕುರುಳಿದ್ದು ನಂತರ ಹಿಂಬದಿ ಓವರ್ ಟೇಕ್ ಮಾಡುತ್ತಿದ್ದ ಕೆಎಸ್ಆರ್ಟಿ ಸಿ (KSRTC) ಬಸ್ ಬೈಕ್ ಮೇಲೆ ಹರಿದಿದೆ. ಪರಿಣಾಮ ಬೈಕ್ ಸವಾರ ವೆಂಕಟೇಶ್ ತಲೆಯ ಮೇಲೆ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇನ್ನೂ ಹಿಂಬದಿ ಕೂತಿದ್ದ 8 ವರ್ಷದ ಮೋಕ್ಷ ತಲೆಗೆ ಗಂಭೀರವಾದ ಗಾಯವಾಗಿ ನರಳಾಡುತ್ತಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ.

ಉಳಿದಂತೆ ಡ್ರಾಪ್ ಕೇಳಿದ ಓಂ ಶಕ್ತಿ ಮಾಲಾಧಾರಿ ನರಸಮ್ಮ ಹಾಗೂ ಲಾವಣ್ಯ ಎನ್ನುವ ಮಗುವಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಕುಮಾರ್, ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Doddaballapura Accident.. ಯುವ ಛಾಯಾಗ್ರಾಹಕ ಸಾವು, ಖಾಸಗಿ ಆಸ್ಪತ್ರೆ ವಿರುದ್ಧ ಆಕ್ರೋಶ

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಎರಡು ಬಸ್ ಗಳನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version