ಚಿಕ್ಕಬಳ್ಳಾಪುರ: ಮಕರ ಸಂಕ್ರಾಂತಿ (Sankranti 2025) ಅಂಗವಾಗಿ ಇಂದು ಚಿಕ್ಕಬಳ್ಳಾಪುರದ ಅದಿಯೋಗಿ ಈಶಾ ಕೇಂದ್ರದಲ್ಲಿ 54 ಅಡಿ ಎತ್ತರದ ಮಹಾಶೂಲ ಶಿವನ ತ್ರಿಶೂಲವನ್ನು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿವಾಸುದೇವ್ ಅನಾವರಣಗೊಳಿಸಿದರು..
ಸೃಷ್ಟಿ, ಸ್ಥಿತಿ ಮತ್ತು ಲಯ ಈ ಮೂರು ಪ್ರತ್ಯೇಕವೆನಿಸುವ ಅಂಶಗಳ ಏಕತ್ವವನ್ನು ಮಹಾಶೂಲವು ಪ್ರತಿನಿಧಿಸುತ್ತಿದೆ ಎಂದು ಸದ್ಗುರುಗಳು ತಿಳಿಸಿದರು.
ಪಂಚಭೂತಗಳನ್ನು ಶುದ್ಧೀಕರಿಸುವ ಪ್ರಕ್ರಿಯೆಯಾದ ಪಂಚಭೂತ ಕ್ರಿಯೆಯನ್ನು ಸದ್ಗುರು ಸಾನಿಧ್ಯದಲ್ಲಿ ನೆರವೇರಿಸಲಾಯಿತು.
ಸುಗ್ಗಿ ಮಕರ ಸಂಕ್ರಾಂತಿಯಾದ ನಿನ್ನೆ ರಾತ್ರಿ ಸಾವಿರಾರು ಜನರು ಸದ್ಗುರು ಸನ್ನಿಧಿಗೆ ಭೇಟಿ ನೀಡಿ ತ್ರಿಶೂಲ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದರು.
ಮಕರ ಸಂಕ್ರಾಂತಿ ಅಂಗವಾಗಿ ಜಾತ್ರೆಯ ವಾತಾವರಣ ಸೃಷ್ಟಿ ಮಾಡಲಾಗಿದ್ದು ಭಕ್ತರ ಗಮನ ಸೆಳೆಯಿತು.