ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಬಿದಿಗೆ ಜ.15 2025 ಬುಧವಾರ: ವಿಶೇಷವಾಗಿ ಮಹಾ ವಿಷ್ಣು ವಿನ ದೇವಸ್ಥಾನದಲ್ಲಿ ಅರ್ಚನೆ ಪೂಜೆ ಮಾಡಿಸುವುದರಿಂದ ದಿನವೂ ಶುಭವಾಗುತ್ತದೆ.. Astrology
ಮೇಷ ರಾಶಿ: ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿ ಮುಂದೆ ಬಂದಿದ್ದೀರಾ. ಆದರೆ ಈಗ ಸುಖ ಸಂತೋಷ ನೆಮ್ಮದಿ ಸಿಗಲು ಪ್ರಾರಂಭವಾಗುತ್ತಿದೆ. ಎಲ್ಲವೂ ಸಹ ಅನುಕೂಲವಾಗುತ್ತದೆ ಚಿಂತ ಬೇಡ. (ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)
ವೃಷಭ ರಾಶಿ: ವಂಚನೆ ಮತ್ತು ಸಣ್ಣಪುಟ್ಟ ಮೋಸ ಮಾಡುವವರಿಂದ ದೂರವಿರಿ, ಇದರಿಂದ ತೊಂದರೆ ಸಾಕಷ್ಟಾಗುತ್ತದೆ.. ಎಚ್ಚರಿಕೆ ಬಹಳ ಮುಖ್ಯ, ಅನುಮಾನದಲ್ಲಿ ವ್ಯವಹರಿಸಬೇಡಿ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣರ ಆರಾಧನೆ ಮಾಡಿ )
ಮಿಥುನ ರಾಶಿ: ಭಯ ಬೀಳು ಅಗತ್ಯವಿಲ್ಲ. ನಿಮ್ಮ ಕೆಲಸಗಳನ್ನು ಬಲಿಷ್ಠವಾಗಿ ಮಾಡಿದ್ದೀರಿ ಅದರ ಪ್ರತಿಫಲ ನಿಮಗೆ ಸಿಗುತ್ತದೆ. ಹೆಚ್ಚು ಚಿಂತೆ ಬೇಡ ಸುಖವಾಗುತ್ತದೆ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)
ಕಟಕ ರಾಶಿ: ಅಧಿಕವಾದ ತಿರುಗಾಟ, ಮನಸ್ಸಿಗೆ ನೆಮ್ಮದಿ ಇಲ್ಲ.. ಆದರೂ ಕಾರ್ಯವನ್ನು ಮಾಡಬೇಕು, ಎಚ್ಚರಿಕೆವಹಿಸುವುದು ಬಹಳ ಮುಖ್ಯ. ಸ್ವಲ್ಪ ನಿಧಾನವಾದರೂ ಶುಭವಾಗುತ್ತದೆ. (ಪರಿಹಾರಕ್ಕಾಗಿ ದಕ್ಷಿಣ ಮೂರ್ತಿ ಸ್ತೋತ್ರವನ್ನು ಪಾರಾಯಣ ಮಾಡಿಕೊಳ್ಳಿ)
ಸಿಂಹ ರಾಶಿ: ಅತಿಯಾದ ಆಯಾಸ. ಯಾಕೋ ನೆಮ್ಮದಿ ಇಲ್ಲ, ಈ ಜೀವನದಲ್ಲಿ ಎಂಬ ನಿಟ್ಟುಸಿರು. ಆದರೆ ಒಂದೇ ಬಾರಿ ಶುಭವಾಗುವುದು ಸ್ವಲ್ಪ ಕಠಿಣವಾಗಿದೆ. ಧನಾಗಮದಲ್ಲಿ ಸ್ವಲ್ಪ ಕೊರತೆ ಏರುಪೇರು, ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕುಂಟಿತ. (ಪರಿಹಾರಕ್ಕಾಗಿ ಶ್ರೀ ಕೃಷ್ಣನ ಸ್ಮರಣೆಯನ್ನು ಮಾಡಿ)
ಕನ್ಯಾ ರಾಶಿ: ಮಾಟ ಮಂತ್ರ ಪ್ರಯೋಗದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಇವುಗಳಿಂದ ನಿಮಗೆ ಏನು ಮಾಡಲು ಸಾಧ್ಯವಾಗುವುದಿಲ್ಲ. ಎಚ್ಚರಿಕೆ ಇರಬೇಕು, ಧೈರ್ಯವನ್ನು ಮಾಡಿ ಇಟ್ಟ ಗುರಿಯನ್ನು ಸಾಧಿಸಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ಸಿದ್ದಲಕ್ಷ್ಮಿ ಸ್ತೋತ್ರವನ್ನು ಪಠಿಸಿ)
ತುಲಾ ರಾಶಿ: ಅವಶ್ಯಕತೆಗೆ ತಕ್ಕಂತೆ ಬದಲಾಗಬಾರದು. ಜೀವನದಲ್ಲಿ ವಿಶೇಷವಾದ ಧ್ಯೇಯ ಉದ್ದೇಶ ಇರಬೇಕು.. ಮಾತಿನಲ್ಲಿ ಹಿಡಿತವಿರಲಿ, ಸಂಕಲ್ಪದಲ್ಲಿ ಮುಂದಿನ ಜೀವನವು ಕಾಣುವಂತೆ ವ್ಯವಸ್ಥೆ ಮಾಡಿ.(ಪರಿಹಾರಕ್ಕಾಗಿ ನರಸಿಂಹ ಗಾಯತ್ರಿಯನ್ನು ಜಪಿಸಿ)
ವೃಶ್ಚಿಕ ರಾಶಿ: ಆರೋಗ್ಯದ ವಿಚಾರದಲ್ಲಿ ಸ್ವಲ್ಪ ತೊಂದರೆ. ಸ್ವಲ್ಪ ಧನದ ಭಾದೆಗಳು, ಮನಸ್ಸಿನಲ್ಲಿ ನೆಮ್ಮದಿ ಇರುವುದಿಲ್ಲ. ದೃಢವಾದ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಕಠಿಣ, ಅತಿಯಾದ ಆಸೆಯನ್ನು ಸ್ವಲ್ಪ ಕಮ್ಮಿ ಮಾಡಿಕೊಳ್ಳಿ. (ಪರಿಹಾರಕ್ಕಾಗಿ ದುರ್ಗಾದೇವಿಗೆ ಕುಂಕುಮರ್ಚನೆ ಮಾಡಿಸಿ)
ಧನಸ್ಸು ರಾಶಿ: ಅತಿಯಾದ ಆಲೋಚನೆ.. ದೀರ್ಘವಾದ ಚಿಂತನೆ. ಆದರೆ ಪ್ರಯತ್ನದಲ್ಲಿ ಇರುತ್ತೀರಿ, ಪರ ತೀರ ಕಮ್ಮಿ. ಪ್ರಯತ್ನವೆಲ್ಲವೂ ಬೇರೆ ಬೇರೆ ರೀತಿಯಲ್ಲಿ ಪೋಲಾಗುತ್ತಿರುತ್ತದೆ.. ಗಮನಿಸಿ ಒಂದೇ ನೇರವಾದ ರೀತಿಯಲ್ಲಿ ಗುರಿಯಾಗಿರಿಸಿ ಕಾರ್ಯವನ್ನು ಮಾಡಿ, ಶುಭವಾಗುತ್ತದೆ. ( ಪರಿಹಾರಕ್ಕಾಗಿ ಸೂರ್ಯನಾರಾಯಣನ ಸ್ಮರಣೆ ಪೂಜೆ ಮಾಡಿ)
ಮಕರ ರಾಶಿ: ಸುಮ್ಮನೆ ತಿರುಗಾಟ, ಕೆಲಸ ಕಾರ್ಯಗಳಲ್ಲಿ ತೊಂದರೆ. ಜೀವನದಲ್ಲಿ ಇರುವುದಕ್ಕಿಂತ ಇಲ್ಲದೇ ಇರುವುದರ ಮೇಲೆ ವಿಪರೀತವಾದ ಆಸೆ, ಅತಿಯಾದ ನಂಬಿಕೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು.. ನಿಧಾನವಾಗಿ ಕಾಯಿರಿ ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ದತ್ತಾತ್ರೇಯರ ಆರಾಧನೆ ಮಾಡಿ)
ಕುಂಭ ರಾಶಿ: ಏನು ಲಾಭವಿಲ್ಲ ಎಂದು ಚಿಂತಿಸಬೇಡಿ ನೀವು ಮಾಡುತ್ತಿರುವ ಕೆಲಸದಲ್ಲಿ ಲಾಭವಿದೆ. ಆದರೆ ಸಮಯ ತೆಗೆದುಕೊಳ್ಳುತ್ತದೆ. ನಿಧಾನವಾಗಿ ಆಲೋಚಿಸಿ ಕಾರ್ಯಗಳನ್ನು ಮಾಡಿ, ಯಶಸ್ವಿ ಆಗುತ್ತೀರಾ.. ವಿದ್ಯೆಯಲ್ಲೂ ಅನುಕೂಲ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. (ಪರಿಹಾರಕ್ಕಾಗಿ ಮಹೇಶ್ವರನನ್ನು ಆರಾಧನೆ ಮಾಡಿ)
ಮೀನ ರಾಶಿ: ಅನಾವಶ್ಯಕ ಯೋಚನೆ, ನನ್ನ ಹಣೆಯ ಬರಹ ಈಗಾಯಿತಲ್ಲ ಎಂಬ ಚಿಂತೆ, ಮಾನಸಿಕ ತಾಳಮಳ, ವಾಪಸ್ ಆಗುವುದಿಲ್ಲ ಎಂಬ ಚಿಂತೆ, ಧನಾರ್ಜನಿಗೆ ಸ್ವಲ್ಪ ತೊಂದರೆ, ವಿದ್ಯಾವಂತರಿಗೆ ಅನುಕೂಲ, ಸ್ವಲ್ಪ ಅನಾರೋಗ್ಯ. (ಪರಿಹಾರಕ್ಕಾಗಿ ಧನ್ವಂತರಿ ಮೂಲ ಮಂತ್ರ ಜಪ ಮಾಡಿ)
ರಾಹುಕಾಲ: 12-೦೦PM ರಿಂದ 1-3೦PM
ಗುಳಿಕಕಾಲ: 10-30AM ರಿಂದ 12-00PM
ಯಮಗಂಡಕಾಲ: 7-30AMರಿಂದ 9-00AM
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572.