Site icon Harithalekhani

ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ಬಸ್‌ಗೆ ಬೆಂಕಿ.. ಓರ್ವ ಪ್ರಯಾಣಿಕ ಸಜೀವ ದಹನ..! | Video

Bus going to Mahakumbha Mela caught fire

Bus going to Mahakumbha Mela caught fire

ಬೃಂದಾವನ: ಪವಿತ್ರ ಮಹಾಕುಂಭ ಮೇಳದ (mahakumbh mela) ಸಂಭ್ರಮದ ಮಧ್ಯೆ ಮಹಾ ದುರಂತ ಸಂಭವಿಸಿದೆ. ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿ ಪ್ಯಾಸೆಂಜರ್ ಬಸ್‌ಗೆ ಬೆಂಕಿಗೆ ಆಹುತಿಯಾಗಿದೆ.

ಉತ್ತರ ಪ್ರದೇಶದ ಬೃಂದಾವನದಲ್ಲಿ ಈ ಅವಘಡ ಸಂಭವಿಸಿದ್ದು, ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಸಜೀವ ದಹನವಾಗಿದ್ದಾರೆ. ಬಸ್ ಸುಟ್ಟು ಕರಕಲಾಗಿದೆ.

ಆ ಸಮಯದಲ್ಲಿ 50 ಯಾತ್ರಿಕರು ಬಸ್ಸಿನಲ್ಲಿ ಇದ್ದರು ಎಂದು ಹೇಳಲಾಗುತ್ತಿದೆ. ಕುಂಭಮೇಳಕ್ಕೆ ತೆರಳುವ ಮಾರ್ಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಅದೃಷ್ಟವಶಾತ್ ಬಸ್ ನಲ್ಲಿ 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತದಲ್ಲಿ ಕುಭಿರ್ ಮಂಡಲದ ಪಾಲ್ಸಿ ಗ್ರಾಮದ ವೃದ್ಧರೊಬ್ಬರು ಸಜೀವ ದಹನವಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

Exit mobile version