Site icon Harithalekhani

ರೂಪಾಯಿ ಮೌಲ್ಯ ಮಹಾಪತನ..!

The value of the Indian rupee continues to fall against the dollar..!

The value of the Indian rupee continues to fall against the dollar..!

ಮುಂಬೈ: ಭಾರತದ ಕರೆನ್ಸಿಯಾದ ರೂಪಾಯಿ (Rupee) ಮೌಲ್ಯದಲ್ಲಿ ಸೋಮವಾರ 66 ಪೈಸೆಗಳಷ್ಟು ಕುಸಿಯುವ ಮೂಲಕ ಕಳೆದೆರಡು ವರ್ಷಗಳಲ್ಲೇ ಅತ್ಯಂತ ಗರಿಷ್ಠಮೌಲ್ಯ ಸವಕಳಿ ದಾಖಲಿಸಿದೆ.

ರೂಪಾಯಿ (Rupee) ಮೌಲ್ಯದಲ್ಲಿ 66 ಪೈಸೆ ನಷ್ಟವಾಗುವ ಮೂಲಕ 86.62 ರೂ.ಗೆ ಇಳಿದಿದೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮೂಲಕ 86.12 ರೂ.ನೊಂದಿಗೆ ಆರಂಭವಾದರೂ ಮಧ್ಯಂತರದಲ್ಲಿ ರೂಪಾಯಿ ಮೌಲ್ಯದಲ್ಲಿ 1 ಪೈಸೆ ಇಳಿಯಿತು. ಆದರೆ ದಿನಾಂತ್ಯಕ್ಕೆ ರೂಪಾಯಿ ಮೌಲ್ಯ 86.62ರಲ್ಲಿ ಸ್ಥಿರಗೊಂಡಿದೆ.

2023ರ ಫೆ. 6ರಂದು ರೂಪಾಯಿ ಮೌಲ್ಯದಲ್ಲಿ 68 ಪೈಸೆ ನಷ್ಟವಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಅತಿದೊಡ್ಡ ಕುಸಿತವಾಗಿತ್ತು.

ಕಳೆದ ಮಂಗಳವಾರ ಹಾಗೂ ಬುಧವಾರ ರೂಪಾಯಿ ಮೌಲ್ಯದಲ್ಲಿ ಅನುಕ್ರಮವಾಗಿ 6 ಹಾಗೂ 17 ಪೈಸೆಯಷ್ಟು ಕುಸಿದಿದ್ದರೆ, ಶುಕ್ರವಾರ 18 ಪೈಸೆಯಷ್ಟು ಕುಸಿದಿತ್ತು. ಆದರೆ ಅದೇ ದಿನ 5 ಪೈಸೆಯಷ್ಟು ಏರಿಕೆಯಾಗಿತ್ತು. ಕಾರಣವೇನು?

ಷೇರುಮಾರುಕಟ್ಟೆಯ ಹೂಡಿಕೆದಾರರು ನಿರಂತರವಾಗಿ ಡಾಲರ್ ಮೌಲ್ಯದ ಹಿಂದೆ ಬಿದ್ದಿರುವುದು ರೂಪಾಯಿ ಮೌಲ್ಯದ ಆಭೂತಪೂರ್ವ ಕುಸಿತಕ್ಕೆ ಕಾರಣವಾಗಿದೆ. ಇದಲ್ಲದೆ. ವಿದೇಶಿ ಬಂಡವಾಳದಾರರು ಭಾರತೀಯ ಷೇರುಮಾರುಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ತಮ್ಮ ಬಂಡವಾಳ ವಾಪಸ್ ಪಡೆಯುತ್ತಿರುವುದೂ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2.254.68 ರೂ ಮೌಲ್ಯದ ಷೇರು ವಾಪಸ್ ಪಡೆದಿದ್ದರು. ಇದುವರೆಗೆ 22,194 ಕೋಟಿ ರೂ.ಗಳಷ್ಟು ಮೌಲ್ಯದ ಷೇರುಗಳನ್ನು ಹಿಂಪಡೆಯಲಾಗಿದೆ.

ವಿದೇಶಿ ವಿನಿಮಯ ಮೀಸಲು ಪ್ರಮಾಣ ಕುಸಿತ ಹಾಗೂ ಹೊರಹೊಮ್ಮುತ್ತಿರುವ ಮಾರುಕಟ್ಟೆಗಳ ಕರೆನ್ಸಿಗಳ ಕುಸಿತದ ನಡುವೆ ಅಮೆರಿಕ ಡಾಲರ್ ವಿರುದ್ಧ ಭಾರತೀಯ ಕರೆನ್ಸಿಗಳ ವಿನಿಮಯ ದರ ಕುಸಿಯಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ನೀಡಿದೆ ಎಂದು ವೀಕ್ಷಕರು ಅಭಿಪ್ರಾಯಪಡುತ್ತಾರೆ.

ಭಾರಿ ಪ್ರಮಾಣದ ಹೂಡಿಕೆ ಹಿಂತೆಗೆತ ನಡೆದಿದ್ದು, ಸೆನ್ಸೆಕ್ಸ್ 1048 ಪಾಯಿಂಟ್‌ಗಳಷ್ಟು ಕುಸಿದಿದೆ. ನಿಫ್ಟಿ 300 ಅಂಕಗಳು ಇಳಿದು 23,100ಕ್ಕೆ ತಲುಪಿದೆ.

ಇನ್ನೊಂದೆಡೆ, ಡಾಲರ್ ಎದುರು ರೂಪಾಯಿ ಮೌಲ್ಯ ಒಂದೇ ದಿನ 66 ಪೈಸೆಯಷ್ಟು ಕುಸಿದಿದೆ. ಒಂದು ಡಾಲರ್‌ಗೆ 86.70 ರೂ.ನಷ್ಟಾಗಿದೆ. ಒಂದೇ ದಿನ ಇಷ್ಟು ಕಡಿಮೆಯಾಗಿರುವುದು ಮೊದಲು.

Exit mobile version