ಬೆಳಗಾವಿ: ಸುಮಾರು ಎರಡು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ (ZP, TP) ಚುನಾವಣೆ ಪ್ರಕ್ರಿಯೆ ಕುರಿತು ರಾಜ್ಯ ಚುನಾವಣೆ ಅಯುಕ್ತ ರಾಜ್ಯ ಚುನಾವಣೆ ಅಯುಕ್ತ ಜಿ.ಎಸ್ ಸಂಗ್ರೇಶಿ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಂಬರುವ ಎಪ್ರಿಲ್, ಮೇ ನಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಮಾಡಬೇಕಿದೆ. ಮೀಸಲಾತಿ ಕಾರ್ಯಸೂಚಿ ಸಂಬಂಧಪಟ್ಟ ಪಂಚಾಯತ್ ಇಲಾಖೆ ಕೊಡುವುದು ಬಾಕಿ ಇದೆ.
ಈ ಮಾಹಿತಿ ಬಂದ ತಕ್ಷಣವೇ ದಿನಾಂಕ ನಿಗದಿ ಮಾಡುತ್ತೇವೆ. ಎಪ್ರಿಲ್, ಮೇ ನಲ್ಲಿ ZP, TP ಚುನಾವಣೆ ಮಾಡೋದಕ್ಕೆ ಸರ್ಕಾರ ಕೂಡಾ ಸ್ಪಂದನೆ ನೀಡಿದೆ. ಎಪ್ರಿಲ್, ಮೇ ನಲ್ಲಿ ಮಾಡಲು ಸಲಹೆ ಸೂಚನೆ ನೀಡಿದೆ ಎಂದರು.
ಜಿಪಂ, ತಾಪಂ ಚುನಾವಣೆ ಸಿದ್ದತೆ ಬಗ್ಗೆ ಸಭೆ ಮಾಡಿದ್ದೇವೆ. ಮತದಾರ ಪಟ್ಟಿ ಸಿದ್ದಪಡಿಸಬೇಕು. 18 ವರ್ಷ ತುಂಬಿದ ಎಲ್ಲಾ ಯುವಕ, ಯುವತಿರನ್ನು ಈ ಪಟ್ಟಿಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಾಗಿದೆ ಎಂದಿದ್ದಾರೆ.