Know the history of Rayanna and develop patriotism

Rayanna: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ -2025

ಬೆಳಗಾವಿ: ರಾಣಿ ಕಿತ್ತೂರು ಚೆನ್ನಮ್ಮರನ್ನು ನೆನೆದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (Rayanna) ಸ್ಮರಿಸಲೇಬೇಕು. ಬ್ರಿಟಿಷ್ ವಿರುದ್ಧ ಹೋರಾಟದ ಕಿಚ್ಚು ಹಚ್ಚಿ ತಮ್ಮ ಬಲಿದಾನಗಳ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ.

ಇಂದಿನ ಯುವ ಸಮೂಹ ರಾಯಣ್ಣನ ಇತಿಹಾಸ ಅರಿತು ರಾಷ್ಟ್ರಪ್ರೇಮ ಬೆಳಸಿಕೊಳ್ಳಬೇಕು ಎಂದು ಬೈಲಹೊಂಗಲ ಶಾಸಕರು ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ಕರೆ ನೀಡಿದರು.

ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ (ಜ.12) ಸಂಗೊಳ್ಳಿ ಶಾಲಾ ಆವರಣದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ -2025 ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳ ಆಶ್ವಾಸನೆಯಂತೆ ಸಂಗೊಳ್ಳಿಯಲ್ಲಿ ರಾಕ್ ಗಾರ್ಡನ್ ಹಾಗೂ ಸೈನಿಕ ಶಾಲೆ ನಿರ್ಮಾಣ ಮಾಡಿ ಈಗಾಗಲೇ ಲೋಕಾರ್ಪಣೆಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಭಾಗದ ಅಭಿವೃದ್ಧಿಗೆ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಅದೇ ರೀತಿಯಲ್ಲಿ ಬೇವೀನಕೊಪ್ಪ ಸೇತುವೆ ನಿರ್ಮಾಣವಾಗಿದೆ. ಏತನೀರಾವರಿ, ಕೃಷಿ, ಶೈಕ್ಷಣಿಕ ಅಭಿವೃದ್ಧಿ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.

ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಸೇರಿದಂತೆ ಬಹುಪಾಲು ಸ್ವಾತಂತ್ರ್ಯ ಹೋರಾಟಗಾರರು ಈ ಭಾಗದವರೇ ಆಗಿದ್ದಾರೆ ಎಂಬುದು ಹೆಮ್ಮಯ ವಿಚಾರ ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು.

ತಾಯಿ ನಿಷ್ಠೆ ಮೆರೆದ ರಾಯಣ್ಣ

ಕಿತ್ತೂರು ಕಲ್ಮಠ ಸಂಸ್ಥಾನದ ರಾಜಗುರು ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಮಾತನಾಡಿ ತಾಯಿಗೆ ನೀಡಿದ ಮಾತಿನಂತೆ ಸಂಗೊಳ್ಳಿ ರಾಯಣ್ಣ ತಾಯಿ ನಿಷ್ಠೆ ಮೇರಿದಿದ್ದಾರೆ.

ರಾಯಣ್ಣ ಪ್ರಾಮಾಣಿಕತೆ, ಪ್ರಬುದ್ಧತೆಯ ಮಹಾ ಶೂರನಾಗಿದ್ದರು. ಕಿತ್ತೂರು ಚಿಕ್ಕ ಸಂಸ್ಥಾನವಾದರೂ ಇಡೀ ಬ್ರಿಟಿಷ್ ಆಡಳಿತದ ನಿದ್ದೆಗೆಡಿಸಿ ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿಸಿದರು. ಚನ್ನಮ್ಮ, ರಾಯಣ್ಣನ ದಿಟ್ಟತನ ಯುವ ಪೀಳಿಗೆಗೆ ಮೈಗೂಡಿಸಿಕೊಳ್ಳಬೇಕು ಎಂದರು.

ಸರ್ಕಾರದಿಂದ ಶಾಲಾ ಪಠ್ಯಕ್ರಮದಲ್ಲಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಈ ನಾಡಿನ ವೀರರ ಪರಿಚಯ ಆಗಬೇಕಿದೆ. ದೆಹಲಿ ಪಾರ್ಲಿಮೆಂಟ್ ನಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ಆಗಬೇಕಿದೆ.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಆಗಬೇಕು ಎಂಬುದು ಜನರ ಬೇಡಿಕೆಯಾಗಿದೆ. ಅವರ ದೇಶಪ್ರೇಮವನ್ನು ನಾವೆಲ್ಲರೂ ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಒಡನಾಟದಲ್ಲಿದ್ದ ಬಿಚ್ಚುಗತ್ತಿ ಚನ್ನಪಸಪ್ಪನವರ ಮೂರ್ತಿ ಸಂಗೊಳ್ಳಿಯಲ್ಲಿ ನಿರ್ಮಾಣವಾಗಬೇಕಿದೆ.

ರಾಯಣ್ಣನ ಇತಿಹಾಸ ಪರಿಚಯಿಸುವ ರಾಕ್ ಗಾರ್ಡನ್ ಈಗಾಗಲೇ ನಿರ್ಮಾಣವಾಗಿದೆ ಸಾಕಷ್ಟು ಪ್ರೇಕ್ಷಕರನ್ನು ಆಕರ್ಷಿಸಿದೆ
ಸಂಗೊಳ್ಳಿಯ ಶ್ರೀ ಗುರು ಸಿದ್ಧಲಿಂಗೇಶ್ವರ ಹಿರೇಮಠ ಸಂಸ್ಥಾನದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ರಾಕ್ ಗಾರ್ಡನ್ ವೀಕ್ಷಣೆಗೆ ಬಹಳಷ್ಟು ದೂರದಿಂದ ಸಾರ್ವಜನಿಕರು, ಶಾಲಾ ಕಾಲೇಜು ಮಕ್ಕಳು ಬರುತ್ತಿದ್ದಾರೆ. ಹಾಗಾಗಿ ಮುಂಬರುವ ದಿನಗಳಲ್ಲಿ ಬರುವ ವೀಕ್ಷಕರಿಗೆ ರಾಕ್ ಗಾರ್ಡನ್ ಪ್ರವೇಶ ದರ 50% ಇಳಿಕೆ ಮಾಡಬೇಕು ಇದರಿಂದ ಸಾರ್ವಜನಿಕರಿಗೆ ಅನುಕಲಾಗಲಿದೆ ಎಂದು ಹೇಳಿದರು.

ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಬೈಲಹೊಂಗಲ ತಹಶೀಲ್ದಾರ್ ಹಣಮಂತ ಶಿರಹಟ್ಟಿ, ಬೈಲಹೊಂಗಲ ಉಪ ಅಧೀಕ್ಷಕ ರವಿ ನಾಯಕ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸವದತ್ತಿ ಸಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನವರ, ಕಿತ್ತೂರು ತಹಶೀಲ್ದಾರ್ ರವೀಂದ್ರ ಹಾದಿಮನಿ, ಸಂಗೊಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕೋರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಜಕೀಯ

ಚುನಾವಣೆ ಮೂಲಕ JDS ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ; ಹೆಚ್.ಡಿ.ಕುಮಾರಸ್ವಾಮಿ

ಚುನಾವಣೆ ಮೂಲಕ JDS ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ; ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರಿನಲ್ಲಿ ಜೆಡಿಎಸ್ (JDS) ಮಹತ್ವದ ಸಭೆ; ಹೆಚ್.ಡಿ.ದೇವೇಗೌಡರು ಭಾಗಿ

[ccc_my_favorite_select_button post_id="100770"]
Sankranti 2025  ಗಗನಕ್ಕೇರಿದ ಬೆಲೆಗಳ ನಡುವೆ ಸಂಕ್ರಾಂತಿ ಸ್ವಾಗತಿಸಲು ಸಿದ್ಧತೆ

Sankranti 2025 ಗಗನಕ್ಕೇರಿದ ಬೆಲೆಗಳ ನಡುವೆ ಸಂಕ್ರಾಂತಿ ಸ್ವಾಗತಿಸಲು ಸಿದ್ಧತೆ

ದಿನೇ ದಿನೇ ಕೃಷಿಯಿಂದ ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ Sankranti 2025

[ccc_my_favorite_select_button post_id="100799"]
Hindi ರಾಷ್ಟ್ರ ಭಾಷೆ ಅಲ್ಲ.. ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಬೆಂಬಲ

Hindi ರಾಷ್ಟ್ರ ಭಾಷೆ ಅಲ್ಲ.. ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಬೆಂಬಲ

ಅಣ್ಣಾಮಲೈ ಕೂಡ ಅದನ್ನೆ ಹೇಳ್ತಾನೆ. ನನ್ನ ಗೆಳೆಯ ಅಶ್ವಿನ್ ಹೇಳಿಕೆ ಮಾತ್ರವಲ್ಲ, ಎಲ್ಲರೂ ಅದನ್ನೆ ಹೇಳ್ತಾರೆ.. Hindi

[ccc_my_favorite_select_button post_id="100687"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

ಜನವರಿ 17 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ. Khel ratna

[ccc_my_favorite_select_button post_id="99992"]
ಬೈಕ್ wheeling ಮಾಡ್ತಿದ್ದ ಪುಂಡಪೋಕರಿಗಳ ಬಂಧನ

ಬೈಕ್ wheeling ಮಾಡ್ತಿದ್ದ ಪುಂಡಪೋಕರಿಗಳ ಬಂಧನ

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಇತರೆ ಸವಾರರಿಗೆ ತೊಂದರೆ ಉಂಟು ಮಾಡುತ್ತಿದ್ರು. wheeling

[ccc_my_favorite_select_button post_id="100777"]
Accident ಭೀಕರ ರಸ್ತೆ ಅಪಘಾತ: ಯುವ ಪತ್ರಕರ್ತ ಭರತ್ ಧಾರುಣ ಸಾವು..!

Accident ಭೀಕರ ರಸ್ತೆ ಅಪಘಾತ: ಯುವ ಪತ್ರಕರ್ತ ಭರತ್ ಧಾರುಣ ಸಾವು..!

ಘಟನೆಯ ವೇಳೆ ಕಾರಿನಲ್ಲಿನ ಏರ್ ಬ್ಯಾಗ್ ಓಪನ್ ಆದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. Accident

[ccc_my_favorite_select_button post_id="100789"]

ಆರೋಗ್ಯ

ಸಿನಿಮಾ

Victory venkatesh: ಖ್ಯಾತ ನಟ ವೆಂಕಟೇಶ್‌ಗೆ ಸಂಕಷ್ಟ.. ಕ್ರಿಮಿನಲ್ ಕೇಸ್ ದಾಖಲು..!

Victory venkatesh: ಖ್ಯಾತ ನಟ ವೆಂಕಟೇಶ್‌ಗೆ ಸಂಕಷ್ಟ.. ಕ್ರಿಮಿನಲ್ ಕೇಸ್ ದಾಖಲು..!

ಅದರಲ್ಲೂ ವೆಂಕಟೇಶ್ ಅಭಿನಯದ 'ಸಂಕ್ರಾಂತಿಕಿ ವಸ್ತುನ್ನಂ' ಶೀಘ್ರದಲ್ಲೇ ಬಿಡುಗಡೆಯಾಗುತ್ತಿರುವ ಈ ಬೆಳವಣಿಗೆಗಳು victory Venkatesh

[ccc_my_favorite_select_button post_id="100751"]

Darshan| ಸ್ಮೈಲು ರೇ ಸ್ಮೈಲು ಸ್ಮೈಲು ಬಾಸು..

[ccc_my_favorite_select_button post_id="100613"]

Doctorate: ಖ್ಯಾತ ನಟಿ ತಾರಾ ಸೇರಿ 3

[ccc_my_favorite_select_button post_id="100512"]

Darshan Sudeep| ದಚ್ಚು-ಕಿಚ್ಚ ಅಭಿಮಾನಿಗಳ ನಡುವೆ ತಂದಿಟ್ಟ

[ccc_my_favorite_select_button post_id="99843"]

Pavan kalyan| ದಟ್ ಈಸ್ ರೇವಂತ್ ರೆಡ್ಡಿಗಾರು:

[ccc_my_favorite_select_button post_id="99803"]

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ

[ccc_my_favorite_select_button post_id="99541"]

HD Kumaraswamy ಸಮಾಜದ ಶಾಂತಿ ಕಾಪಾಡುವ ಸಿನಿಮಾಗಳು

[ccc_my_favorite_select_button post_id="99321"]
error: Content is protected !!