ಚಾಮರಾಜನಗರ: ಬಂಡೀಪುರದಲ್ಲಿ ಒಂಟಿ ಸಲಗವೊಂದು (Elephant) ರಸ್ತೆಗೆ ಇಳಿದ ಪರಿಣಾಮ ಸುಮಾರು 3-4 ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು
ವೀಕೆಂಡ್ ಹಿನ್ನೆಲೆ ಊಟಿ, ಬಂಡೀಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಗೂ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುತ್ತಿದ್ದ ಸಾವಿರಾರು ಪ್ರಯಾಣಿಕರು ಗಜರಾಜನ ಕಾಟಕ್ಕೆ ಹೈರಣಾದರು.
ರಾತ್ರಿ 9 ಗಂಟೆಗೆ ಸಂಚಾರ ಬಂದ್ ಹಿನ್ನಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಇನ್ನೂ ಹೆಚ್ಚಾಗಿತ್ತು.
ಇತ್ತೀಚೆಗೆ ತರಕಾರಿ ವಾಹನಗಳಿಗಾಗಿ ಗಜರಾಜ (Elephant) ಆಗಾಗ ರಸ್ತೆಗಿಳಿಯುತ್ತಿದ್ದ. ಅದನ್ನೇ ಅಭ್ಯಾಸ ಮಾಡಿಕೊಂಡು ಈಗ ರಸ್ತೆಯಲ್ಲೇ ನಿಂತು ವಾಹನ ಸವಾರರಿಗೆ ಆತಂಕ ಮೂಡಿಸಿದ್ದ.
ಇದನ್ನೂ ಓದಿ: Darshan: ಗನ್ ಪರವಾನಗಿ ರದ್ದು..! ನಟ ದರ್ಶನ್‌ಗೆ ತೊಂದರೆಯಾದ್ರೆ ಹೊಣೆ ಯಾರು..?
ಅರಣ್ಯ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿ. ಕಾಡಾನೆಯನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಲು ಹರಸಾಹಸಪಟ್ಟರು.
ಹರಿತಲೇಖನಿ ವಾಟ್ಸಪ್ ಚಾನೆಲ್ ಸೇರಲು ಈ ಲಿಂಕ್ ಬಳಸಿ: https://whatsapp.com/channel/0029Va5azA9GufIxBBdKdG0A
ಭೀಕರ ರಸ್ತೆ ಅಪಘಾತ: ಯುವ ಪತ್ರಕರ್ತ ಭರತ್ ಧಾರುಣ ಸಾವು..!
ಚಿಕ್ಕಬಳ್ಳಾಪುರ: ಕೆರೆ ಕಟ್ಟೆಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಯುವ ಪತ್ರಕರ್ತ ಭರತ್ ಸಾವನಪ್ಪಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.
ಗುಡಿಬಂಡೆ ಪಟ್ಟಣದಿಂದ ಬಾಗೇಪಲ್ಲಿ ಗೆ ತೆರಳುತ್ತಿದ್ದ ವೇಳೆ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಕೆರೆ ಏರಿ ಮೇಲೆ ಭೀಕರ ಅಪಘಾತ ಸಂಭವಿಸಿದೆ.
ಬೆಂಗಳೂರಿನಲ್ಲಿ ವಾಸವಿದ್ದ ಗುಡಿಬಂಡೆ ಪಟ್ಟಣ ಜಿ ಎಸ್ ಭರತ್. ಬೆಂಗಳೂರಿನ ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಕಾರ್ಯನಿರ್ವಹಿಸುತ್ತಿದ್ದರು.
ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.