ದೊಡ್ಡಬಳ್ಳಾಪುರ (Doddaballapura); ನಗರದ ಹೆಸರಾಂತ ಗಾಂಧಿನಗರದ ಟೆಕ್ಸ್ಟೈಲ್ ಮ್ಯಾನುಫ್ಯಾಕ್ಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಲಿ.,(ಟಿಎಂಸಿ) ನ 2025ರಿಂದ 30 ರವರೆಗೆ 5 ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಲಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಚುನಾವಣಾಧಿಕಾರಿ ಹರೀಶ್ ಕುಮಾರ್.ಬಿ.ವಿ ಸಮ್ಮುಖದಲ್ಲಿ ಇಂದು ನಡೆದ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಈ ವೇಳೆ ಅಧ್ಯಕ್ಷರಾಗಿ ಕೆಪಿ ವಾಸುದೇವ, ಉಪಾಧ್ಯಕ್ಷರಾಗಿ ಡಿ ಪ್ರಶಾಂತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಇದಕ್ಕೂ ಮುನ್ನೇ ಇದೇ ತಿಂಗಳ 6 ತಾರೀಖಿನಂದು ಬ್ಯಾಂಕಿನ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು.
ನಿರ್ದೇಶಕರು: ಜಿ.ಮಂಜುನಾಥ್, ಎ.ಆರ್.ಶಿವಕುಮಾರ್, ಪಿ.ಸಿ.ವೆಂಕಟೇಶ್, ಡಿ.ಪ್ರಶಾಂತ್ ಕುಮಾರ್,ಕೆ.ಜಿ.ಗೋಪಾಲ್, ಬಿ.ಆರ್.ಉಮಾಕಾಂತ್, ನಾರಾಯಣ್.ಎನ್.ನಾಯ್ಡು, (ಸಾಮಾನ್ಯ ಸ್ಥಾನ), ಡಾ.ಆರ್.ಇಂದಿರಾ, ಎ.ಗಿರಿಜಾ (ಮಹಿಳಾ ಮೀಸಲು), ಕೆ.ಪಿ. ವಾಸುದೇವ (ಹಿಂದುಳಿದ ವರ್ಗ ಎ), ಎಸ್.ಅನಿಲ್ (ಹಿಂದುಳಿದ ವರ್ಗ ಬಿ) ಅವರುಗಳು ಆಯ್ಕೆಯಾಗಿದ್ದರು.
ತಂಡ 4ನೇ ಬಾರಿಗೆ ಆಯ್ಕೆ: ಪ್ರಸ್ತುತ ಆಯ್ಕೆಯಾಗಿರುವ ನಿರ್ದೇಶಕರ ತಂಡ 4ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ನಿರ್ದೇಶಕರಾಗಿದ್ದ ಎ.ಎಸ್.ಕೇಶವ ಅವರು ಸ್ಪರ್ಧಿಸದ ಕಾರಣ ಈ ಬಾರಿ ಎಸ್.ಅನಿಲ್ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಅಭಿವೃದ್ದಿಗೆ ಶ್ರಮಿಸುವೆ
ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು, ಬ್ಯಾಂಕಿನ ಅಭಿವೃದ್ದಿಗೆ ಶ್ರಮಿಸಲು ನಮ್ಮ ತಂಡ ಸದಾ ಸಿದ್ದವಿದೆ ಎಂದು ಟಿ.ಎಂ.ಸಿ ಬ್ಯಾಂಕ್ನ ನೂತನ ಅಧ್ಯಕ್ಷ ಕೆ.ಪಿ.ವಾಸುದೇವ್ ತಿಳಿಸಿದ್ದಾರೆ.