ಬೆಳಗಾವಿ (Crime news); ಮೂಡಲಗಿಯ ಬಾರ್ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಲಕ್ಷ್ಮಣ ಮರನೂರ(45 ವರ್ಷ) ಸಾವನಪ್ಪಿದ್ದಾರೆ.
ರಂಗಪ್ಪ ಪಾಟೀಲ್, ಈರಪ್ಪ ತುಂಗಳ ಕೊಲೆ ಮಾಡಿದ ಆರೋಪಿಗಳು ಎಂದು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಬಾರಿಗೆ ಬಂದು ಮದ್ಯಪಾನ ಮಾಡ್ತಿದ್ದ ಲಕ್ಷ್ಮಣ ಕುಳಿತಿದ್ದ ಟೇಬಲ್ ಪಕ್ಕದಲ್ಲಿಯೇ ಕುಳಿತಿದ್ದ ಇಬ್ಬರು ಆರೋಪಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಮೂವರ ಮಧ್ಯೆ ಜಗಳ ನಡೆದಿದೆ.
ಈ ವೇಳೆ ಮಾತಿಗೆ ಮಾತು ಬೆಳೆದು ಲಕ್ಷ್ಮಣ್ ಮೇಲೆ ಹಲ್ಲೆ ಮಾಡಿದ್ದ ರಂಗಪ್ಪ, ಈರಪ್ಪ.
ಇಬ್ಬರ ಹಲ್ಲೆಯಿಂದ ಸ್ಥಳದಲ್ಲಿಯೇ ಲಕ್ಷ್ಮಣ್ ಪ್ರಾಣಬಿಟ್ಟಿದ್ದಾರೆ.
ಕೂಡಲೇ ಬಾರ್ ನಿಂದ ಶವ ಹೊರ ತಂದು ಬಿಸಾಡಿದ್ದ ಇಬ್ಬರೂ ಕಿರಾತಕರು. ಸಹಜ ಸಾವೆಂದು ಬಿಂಬಿಸಲು ಮುಂದಾಗಿದ್ದರು ಎನ್ನಲಾಗಿದೆ.
ಲಕ್ಷ್ಮಣ್ ಮೇಲೆ ಹಲ್ಲೆ ಮಾಡುವ ವಿಡಿಯೋ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸರ ವಿಚಾರಣೆಯಲ್ಲಿ ಗಲಾಟೆಯಾದ ಕುರಿತು ಮಾಹಿತಿ ದೊರೆತಿದ್ದು, ಕೂಡಲೆ ಇಬ್ಬರನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.
Crime news ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.