Site icon ಹರಿತಲೇಖನಿ

Darshan: ಗನ್ ಪರವಾನಗಿ ರದ್ದು..! ನಟ ದರ್ಶನ್‌ಗೆ ತೊಂದರೆಯಾದ್ರೆ ಹೊಣೆ ಯಾರು..?

Actor Darshan's gun license temporarily cancelled

Actor Darshan's gun license temporarily cancelled

ಬೆಂಗಳೂರು: ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಿಂದ ಹೊರಬಂದಿರುವ ನಟ ದರ್ಶನ್ (Darshan) ಅವರ ಬಳಿಯಿರುವ ಗನ್ ಪರವಾನಗಿ ರದ್ದುಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ ಎಂಬ ಕಳವಳಕಾರಿ ಮಾಹಿತಿ ವರದಿಯಾಗಿದೆ.

ಈ ವರದಿ ಅನ್ವಯ ದರ್ಶನ್ ಸ್ವಯಂ ರಕ್ಷಣೆಗೆ ಪಡೆದಿರುವ ಗನ್ ಪರವಾನಗಿ ಬಗ್ಗೆ ಒಂದು ವಾರದಲ್ಲಿ ಸ್ಪಷ್ಟನೆ ನೀಡುವಂತೆ ದರ್ಶನ್ ಅವರಿಗೆ ಬೆಂಗಳೂರು ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

ಹತ್ಯೆ ಪ್ರಕರಣದ ಆರೋಪಿಯಾಗಿರುವ ನೀವು ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ನಿಮ್ಮ ಬಳಿಯಿರುವ ಪರವಾನಗಿ ಹೊಂದಿರುವ ಗನ್ ಬಳಸಿ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನಗಳಿವೆ.

ನಿಮ್ಮ ಗನ್ ಪರವಾನಗಿ ರದ್ದು ಮಾಡಬೇಕಿದೆ. ಆದ್ದರಿಂದ ಈ ಬಗ್ಗೆ ಒಂದು ವಾರದೊಳಗೆ ಉತ್ತರ ನೀಡಿ ಎಂದು ನೋಟಿಸ್‌ ನೀಡಲಾಗಿದೆ ಎಂದು ವರದಿಯಾಗಿದೆ.

ನೋಟಿಸ್‌ಗೆ ಉತ್ತರ ನೀಡಿದ ಬಳಿಕ ಗನ್ ಪರವಾನಗಿ ರದ್ದತಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾದ ನಟ ದರ್ಶನ್ ಅವರ ಸ್ವಯಂ ರಕ್ಷಣೆಗೆ ಗನ್ ಅಗತ್ಯವಾಗಿದೆ.

ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪವೇ ಹೊರತು ಅಪರಾಧಿಯಲ್ಲ ಎಂಬುದನ್ನು ಪೊಲೀಸರು, ರಾಜ್ಯ ಸರ್ಕಾರ ಅರಿತು ವರ್ತಿಸಬೇಕಿದೆಯೇ ಹೊರತು ದರ್ಶನ್ ವಿರುದ್ಧ ದ್ವೇಷ ಸಾಧಿಸುತ್ತಿರುವ ಕೆಲ ಖಾಸಗಿ ಸುದ್ದಿ ವಾಹಿನಿಗಳ ಒತ್ತಡಕ್ಕೆ ಮಣಿಯಬಾರದು ಎಂದು ಅಭಿಮಾನಿಗಳ ಒತ್ತಾಯವಾಗಿದೆ.

ಇದನ್ನೂ ಓದಿ: Darshan| ಸ್ಮೈಲು ರೇ ಸ್ಮೈಲು ಸ್ಮೈಲು ಬಾಸು.. ದರ್ಶನ್ ಸ್ಮೈಲ್ಗೆ ಅಭಿಮಾನಿ ಫಿದಾ..!| Video ನೋಡಿ

ಒಂದು ವೇಳೆ ಗನ್ ವಾಪಸ್ ಪಡೆದ ಬಳಿಕ ದರ್ಶನ್ ಅವರಿಗೆ ಏನಾದ್ರೂ ತೊಂದರೆಯಾದಲ್ಲಿ ಪೊಲೀಸ್ ಇಲಾಖೆ, ರಾಜ್ಯ ಸರ್ಕಾರ ಹೊಣೆ ಹೊರತ್ತದೆಯೇ ಎಂಬ ಪ್ರಶ್ನೆ ಅಭಿಮಾನಿಗಳದ್ದಾಗಿದೆ.

Exit mobile version