Astrology ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಪೂರ್ಣಿಮೆ ಅತ್ಯಂತ ಶ್ರೇಷ್ಠವಾದ; ಬೆಳಗ್ಗೆ ಬನಶಂಕರಿ ದೇವಿಯನ್ನು ಆರಾಧನೆ ಮಾಡಿ ಸಂಜೆ ಲಕ್ಷಣವಾಗಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಆಚರಿಸಿದರೇ ಸಕಲ ಸೌಭಾಗ್ಯಗಳು ಉಂಟಾಗುತ್ತವೆ.
ಮೇಷ ರಾಶಿ: ಒಳ್ಳೆಯ ದಿನ, ಬಂದು ಮಿತ್ರರೊಂದಿಗೆ ಕಲಹ ಮಾಡಿಕೊಳ್ಳಬೇಡಿ, ಅತ್ಯಂತ ಆಯಾಸವನ್ನು ಮಾಡಿಕೊಂಡರೆ ಕಾರ್ಯ ಸಾಧನೆ ಆಗುವುದಿಲ್ಲ.. ಬುದ್ಧಿವಂತಿಕೆಯಿಂದ ಯೋಚಿಸಿ, ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿ)
ವೃಷಭ ರಾಶಿ: ಮನಸ್ಸಿನಲ್ಲಿ ಧರ್ಮ ಕಾರ್ಯವನ್ನು ಮಾಡಬೇಕೆಂಬ ಆಸೆ, ಮನೆಯಲ್ಲಿ ಚಿಕ್ಕದಾದ ಪೂಜೆಯನ್ನು ಮಾಡಲು ಬಯಕೆ. ಆದರೆ ಸಮಸ್ಯೆಗಳು ಬಿಡುತ್ತಿಲ್ಲ, ಧನಾರ್ಜನೆ ಸ್ವಲ್ಪ ಕಮ್ಮಿ, ವಿದ್ಯಾರ್ಜನೆ ತುಂಬಾ ಚೆನ್ನಾಗಿದೆ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)
ಮಿಥುನ ರಾಶಿ: ವಿದ್ಯಾರ್ಥಿಗಳಿಗೆ ಸ್ವಲ್ಪ ಭಯ, ನೆನಪಿನ ಶಕ್ತಿಯ ಕೊರತೆ, ಮುಂದಿನ ಜೀವನದ ಬಗ್ಗೆ ಆತಂಕ, ಧನಾರ್ಜನೆ ಕೊರತೆ, ಅತಿಯಾದ ಆಸೆ, ಆಸೆಯಿಂದ ನಾನಾ ವಿಧವಾದ ದುಃಖಗಳು ವಿರಕ್ತಿಯ ಬಗ್ಗೆ ಚಿಂತನೆ. (ಪರಿಹಾರಕ್ಕಾಗಿ ಆಂಜನೇಯನ ಆರಾಧನೆ ಮಾಡಿ)
ಕಟಕ ರಾಶಿ; ಬಹಳ ವಿಜೃಂಭಣೆಯಿಂದ ಮಾಡಬೇಕಾದ ಕಾರ್ಯವನ್ನು ಮಾಡಿದ್ದೀರಿ, ಚಿಂತೆ ಬೇಡ ಒಳ್ಳೆಯದಾಗುತ್ತದೆ. ಹಣದ ವ್ಯಯವಾಯಿತು ಆದರೆ ಸಂಪಾದನೆ ಅನುಕೂಲವಾಗುತ್ತದೆ ಶುಭವಾಗುತ್ತದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಆರಾಧನೆ ಮಾಡಿ)
ಸಿಂಹ ರಾಶಿ: ಅತಿಯಾದ ದೈರ್ಯ, ಕೆಲವು ಬಾರಿ ಹಿಂಸೆಯನ್ನು ಕೊಡುತ್ತದೆ. ಹಣ ವಾಪಸ್ಸಾಗುವ ಚಿಂತೆ, ವಿಪರೀತ ಯೋಚಿಸಬೇಡಿ ಅನುಕೂಲವಾಗುತ್ತದೆ. ವಿದ್ಯಾರ್ಜನೆ ಸ್ವಲ್ಪ ಕಮ್ಮಿ, ಧನಾರ್ಜನೆ ಪರವಾಗಿಲ್ಲ ಮಧ್ಯಮ ವಾಗಿರುತ್ತದೆ, ಕೆಲಸ ಕಾರ್ಯಗಳಲ್ಲಿ ಅಲ್ಪ ಜಯ. (ಪರಿಹಾರಕ್ಕಾಗಿ ದುರ್ಗಾದೇವಿಯನ್ನು ಪೂಜೆ ಮಾಡಿ)
ಕನ್ಯಾ ರಾಶಿ: ಅನುಕೂಲವಾಗುತ್ತದೆ, ಈಗಲೂ ಅನುಕೂಲವಾಗಿ ಇದೆ. ಆದರೆ ಅನಾವಶ್ಯಕ ಯೋಚನೆಯಿಂದ ಮನಸ್ಸು ಸ್ವಲ್ಪ ಕೆಟ್ಟಿದೆ, ಚಿಂತಿಸಬೇಡಿ ಅನುಕೂಲವಾಗುತ್ತದೆ. ಯೋಚನೆ ಮಾಡುವುದನ್ನು ಕಮ್ಮಿ ಮಾಡಿ, ಬಂದು ಮಿತ್ರರಲ್ಲಿ ದ್ವೇಷ ಬೇಡ. (ಪರಿಹಾರಕ್ಕಾಗಿ ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ)
ತುಲಾ ರಾಶಿ: ಸಣ್ಣ ಸಣ್ಣ ವಿಷಯಕ್ಕೆ ಕೋಪ ಮಾಡಿಕೊಂಡರೆ ತುಂಬಾ ಕಠಿಣವಾಗುತದೆ, ಜೀವನ ಇರುವುದು ಸ್ವಲ್ಪ ಭಾಗ ಅದನ್ನು ನೆಮ್ಮದಿಯಾಗಿ ಖುಷಿಯಿಂದ ಅನುಭವಿಸಿ. (ಪರಿಹಾರಕ್ಕಾಗಿ ವೆಂಕಟೇಶನ ಸ್ಮರಣೆಯನ್ನು ಮಾಡಿ)
ವೃಶ್ಚಿಕ ರಾಶಿ: ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ನಿಧಾನವಾಗಿ ಚೇತರಿಸಿಕೊಳ್ಳಬೇಕು. ಧನದ ವ್ಯಯ, ವಿದ್ಯಾರ್ಜನೆ ಸ್ವಲ್ಪ ಕಠಿಣ, ಆದರೂ ಒಳ್ಳೆಯದಾಗುತ್ತದೆ ಚಿಂತಿಸಬೇಡಿ. (ಪರಿಹಾರಕ್ಕಾಗಿ ಪವಮಾನ ಪಾರಾಯಣವನ್ನು ಮಾಡಿಸಿ)
ಧನಸ್ಸು ರಾಶಿ: ಶ್ರೇಷ್ಠವಾದ ದಿನ, ಶುಭ ಫಲಗಳನ್ನು ಅನುಭವಿಸುತ್ತೀರಿ, ಆನಂದವಾಗಿ ಮಕ್ಕಳೊಂದಿಗೆ ಕಳೆಯುವ ದಿನ, ಬಂದು ಮಿತ್ರರ ಸೌಖ್ಯ, ಮನೆಯಲ್ಲಿ ಒಳ್ಳೆಯ ವಾತಾವರಣ. (ಪರಿಹಾರಕ್ಕಾಗಿ ಸೂರ್ಯ ಪೂಜೆಯನ್ನು ಮಾಡಿ)
ಮಕರ ರಾಶಿ: ಸ್ವಲ್ಪ ಕಷ್ಟದ ಪರಿಸ್ಥಿತಿಯನ್ನು ಹೆದರಿಸಬೇಕು, ಜೀವನ ಬಹಳ ಮುಖ್ಯ ಯೋಚಿಸಬೇಡಿ ಒಳ್ಳೆಯದಾಗುತ್ತದೆ. ಮನಸ್ಸಿಗೆ ತೊಂದರೆ ತಂದುಕೊಳ್ಳಬೇಡಿ, ಮಾತನ್ನು ಹಿಡಿತವಾಗಿರಲಿ. (ಪರಿಹಾರಕ್ಕಾಗಿ ಸರಸ್ವತಿಯ ಧ್ಯಾನವನ್ನು ಮಾಡಿ)
ಕುಂಭ ರಾಶಿ: ಅತಿಯಾದ ಆಲೋಚನೆ ಮಾಡುವುದು, ಮನಸ್ಸಿಗೆ ಬಹಳ ಕಷ್ಟ, ಸಣ್ಣ ಪುಟ್ಟ ವಿಷಯಗಳನ್ನು ಸಣ್ಣ ಪುಟ್ಟದಾಗಿ ಬಿಡಿ, ತಲೆಗೆ ತುಂಬಿಕೊಳ್ಳಬೇಡಿ, ಮಕ್ಕಳು ಓದುತ್ತಾರೆ. ಚಿಂತೆ ಬೇಡ, ಎಲ್ಲರಿಗೂ ಶುಭವಾಗುತ್ತದೆ. (ಪರಿಹಾರಕ್ಕಾಗಿ ಗಣಪತಿಯ ಪೂಜೆ ಮಾಡಿ)
ಮೀನ ರಾಶಿ: ಅತ್ಯಂತ ತೃಪ್ತಿದಾಯಕ ದಿನ, ಎಲ್ಲಾ ರೀತಿಯ ಮಾತುಕತೆ, ಎಲ್ಲರೊಂದಿಗೆ ಸೌಖ್ಯ, ಧಾರ್ಮಿಕ ಕಾರ್ಯದಲ್ಲಿ ಯಶಸ್ಸು, ಶುಭವಾಗುತ್ತದೆ, ಚಿಂತೆ ಬೇಡ. (ಪರಿಹಾರಕ್ಕಾಗಿ ಅಮ್ಮನವರ ಆರಾಧನೆ ಮಾಡಿ)
ರಾಹುಕಾಲ: 7-30AM ರಿಂದ 9-00AM
ಗುಳಿಕಕಾಲ: 6-00AM ರಿಂದ 7-30 AM
ಯಮಗಂಡಕಾಲ: 1-30PMರಿಂದ 3-00PM
ವಿಶೇಷವಾಗಿ ದುರ್ಗೆಯ ಅಂಶ ದಿಂದ ಉದ್ಭವವಾದ ದಿವ್ಯ ಶಕ್ತಿ.. ಜ್ಞಾನ ಸ್ವರೂಪವಾದ ವೇದಗಳನ್ನು ತನ್ನ ಸ್ವಾರ್ಥಕ್ಕಾಗಿ ಕಪಿಮುಷ್ಟಿಯಲ್ಲಿ ಬಂಧನದಲ್ಲಿರಿಸಿ, ದುರಾಸೆಯಿಂದ ಇದ್ದ ರಾಕ್ಷಸನನ್ನು ಸಂಹರಿಸಿದ ದಿನ. ಹಾಗಾಗಿ ಈ ದಿನ ಬನಶಂಕರಿ ಜಯಂತಿ ಪ್ರಸಿದ್ಧವಾಯಿತು.
ಈ ದಿನ ವಿಶೇಷವಾಗಿ ಬನಶಂಕರಿ ದೇವಿಯನ್ನು ವನದುರ್ಗಾ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಎಲ್ಲರೂ ಸಹ ಅಮ್ಮನವರ ಆರಾಧನೆಯನ್ನು ಮಾಡಿ ಅತ್ಯಂತ ಶುಭವಾಗುತ್ತದೆ
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572