Naxals: ನಕ್ಸಲರ ಶರಣಾಗತಿ: ಬಿಜೆಪಿ ನಾಯಕರ ಅನುಮಾನ

ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ನಕ್ಸಲರ (Naxals) ಶರಣಾಗತಿ ಕುರಿತು ಬಿಜೆಪಿ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಣ್ಣಾಮಲೈ ಆರೋಪ

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ಶರಣಾಗತಿ, ಎನ್‌ಕೌಂಟರ್ ಬಗ್ಗೆ ಅನುಮಾನ ಮೂಡುತ್ತಿದೆ. ಇಲ್ಲಿ ರಾಜಕೀಯ ಲಾಭ ಪಡೆಯಲು ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ನಕಲ್ ಶರಣಾಗತಿ ನಿಯಮ ಬಹಳ ದೊಡ್ಡಮಟ್ಟದ ಪ್ರಕ್ರಿಯೆ. ಶರಣಾಗತಿ ಸಂದರ್ಭದಲ್ಲಿ ಕೆಲ ನಿಯಮಗಳಿರುತ್ತವೆ. ಆದರೆ, ಕರ್ನಾಟಕದಲ್ಲಿ ನಡೆದ ನಕ್ಸಲ್ ಶರಣಾಗತಿ ಪ್ರಕ್ರಿಯೆ ಅನುಮಾನ ಮೂಡಿಸುತ್ತಿದೆ.

ನಕ್ಸಲ್ ಮುಖಂಡ ವಿಕ್ರಮ್ ಗೌಡನ ಎನ್‌ಕೌಂಟರ್‌ನಲ್ಲೂ ಸಂಶಯವಿದೆ. ಎನ್‌ಕೌಂಟರ್ ಆದ ತಕ್ಷಣ ನಕ್ಸಲ್‌ ಶರಣಾದರು ಎಂದು ಸರಕಾರ ಹೇಳುತ್ತಿದೆ. ನಕ್ಸಲರು ಶರಣಾಗುವಂತೆ ಯಾರು ಮಾತುಕತೆ ನಡೆಸಿದರು ಎಂಬುದು ಗೊತ್ತಿಲ್ಲ. ನಕ್ಸಲ್ ತಂಡದೊಳಗಡೆ ಇರುವ ಆಂತರಿಕ ರಾಜಕೀಯವನ್ನು ಕಾಂಗ್ರೆಸ್ ದುರ್ಬಳಕೆ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದಿದ್ದಾರೆ.

ಸುನಿಲ್ ಕುಮಾರ್ ಅನುಮಾನ

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುನೀಲ್ ಕುಮಾರ್, ಮುಖ್ಯಮಂತ್ರಿ ಕಚೇರಿಯನ್ನು ಸಂಪೂರ್ಣವಾಗಿ ನಗರ ನಕ್ಸಲರು ಆವರಿಸಿ ಕೊಂಡಿರುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಮುಖ್ಯಮಂತ್ರಿ ಕಚೇರಿ ಮುಖ್ಯಮಂತ್ರಿಯವರ ಕಚೇರಿಯಾಗಿರಬೇಕೇ ಹೊರತು ನಗರ ನಕಲರ ಕಚೇರಿಯಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಸರಕಾರವು ನಗರ ನಕ್ಸಲರ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ನಗರ ನಕ್ಸಲರ ಬಗ್ಗೆ ಮೃದು ಧೋರಣೆ ಬಿಟ್ಟು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಗಾಂಧಿವಾದಿ ಎನ್ನುತ್ತಿದ್ದ ಸಿದ್ದರಾಮಯ್ಯ ತಮ್ಮ ರಾಜಕೀಯದ ಕೊನೆಯ ದಿನಗಳಲ್ಲಿ ಮಾವೋವಾದದತ್ತ ಹೊರಳುತ್ತಿರುವುದು ಅವರ ಧೋರಣೆಗಳಿಂದ ಭಾಸವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯನವರ ವಿವೇಚನೆ, ಆಲೋಚನೆ ಅವರದ್ದೇ ಆಗಬೇಕು ವಿನಾ ನಗರ ನಕ್ಸಲರದ್ದಾಗಬಾರದು ಎಂದು ಮಾರ್ಮಿಕವಾಗಿ ನುಡಿದರು.

ನಕ್ಸಲರ ಶರಣಾಗತಿ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆದಿಲ್ಲ. ಅದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೊದಲಿಗೆ ವಿಕ್ರಂ ಗೌಡನ ಎನ್‌ಕೌಂಟ‌ರ್ ನಡೆಯುತ್ತದೆ. ಬಳಿಕ ಮುಖ್ಯಮಂತ್ರಿ ಟ್ವಿಟ್ ಮಾಡುತ್ತಾರೆ, ಅನಂತರ ಶರಣಾಗತಿ ನಡೆಯುತ್ತದೆ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದು ಸುನಿಲ್ ಕುಮಾ‌ರ್ ವಿಶ್ಲೇಷಿಸಿದ್ದಾರೆ.

ಸಿಟಿ ರವಿ ಎಚ್ಚರಿಕೆ

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ನಕ್ಸಲರು ತಂತ್ರಗಾರಿಕೆ ಕಾರಣಕ್ಕೆ ಶರಣಾಗಿದ್ದಾರೋ ಅಥವಾ ನಕ್ಸಲ್ ಸಿದ್ಧಾಂತದಿಂದ ಹೊರಬಂದು ಶರಣಾಗಿ ದ್ದಾರೋ ಎಂಬುದನ್ನು ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು. ಇಲ್ಲದಿದ್ದರೇ ಪ್ಯಾಕೇಜ್ ನೀಡುವು ದರಲ್ಲಿ ಅರ್ಥವಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಶರಣಾಗತಿ ಹೆಸರಿನಲ್ಲಿ ನಕ್ಸಲ್ ಚಟುವಟಿಕೆ ಬಲಗೊಳಿಸಲು ಅವಕಾಶ ನೀಡಿ ದಂತಾಗಬಾರದು. ನಕಲರ ಚಲನವಲನಗಳ ಮೇಲೆ ನಿಗಾ ಇಡುವ ಜತೆಗೆ ಅವರು ತನಿಖೆಗೆ ಸಹಕರಿಸಬೇಕು ಎಂದು ತಾಕೀತು ಮಾಡಿದ್ದಾರೆ.

ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರ ಪತ್ತೆ ಕುರಿತು ಪ್ರತಿಕ್ರಿಯಿಸಿ, ನಕ್ಸಲರು ಎಲ್ಲಿ ಕಾರ್ಯಾಚರಣೆ ಮಾಡಿದರು, ಹಣ, ಶಸ್ತ್ರಾಸ್ತ್ರ ಎಲ್ಲಿಂದ ಬಂತು. ಯಾವ ವ್ಯಕ್ತಿ, ಸಂಘಟನೆ ಸಹಾಯ ಮಾಡಿದ್ದಾರೆ. ಎಲ್ಲ ಮಾಹಿತಿ ಹಂಚಿಕೊಂಡರೆ ಶರಣಾಗತಿಗೆ ಅರ್ಥ ಬರುತ್ತದೆ ಎಂದು ಸಿ.ಟಿ.ರವಿ ಹೇಳಿದರು.

ನಕ್ಸಲ್‌ವಾದ ಸಂವಿಧಾನಕ್ಕೆ ವಿರುದ್ಧವಾದ, ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಲ್ಲದ ಸಿದ್ದಾಂತ. ಅವರಿಗೆ ಬ್ಯಾಲೆಟ್ ಮೇಲೆ ನಂಬಿಕೆ ಇಲ್ಲ, ಬುಲೆಟ್ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

ಚಿತ್ರದುರ್ಗದಲ್ಲಿ ಮಾತನಾಡಿರುವ ವಿಧಾನಪರಿಷತ್ ಪ್ರತಿ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಕ್ಸಲರು ಸರಕಾರಕ್ಕೆ ಶರಣಾಗಿಲ್ಲ, ಸರಕಾರವೇ ನಕ್ಸಲರಿಗೆ ಶರಣಾಗಿದೆ. ಇಷ್ಟು ವರ್ಷ ಸಿಗದವರು ಈಗ ಹೇಗೆ ಸಿಕ್ಕರು ಎಂದು ಪ್ರಶ್ನಿಸಿದ್ದಾರೆ.

ನಕ್ಸಲರು ಬರಿಗೈನಲ್ಲಿ ಶರಣಾಗಿದ್ದಾರೆ. ಅವರ ಶಸ್ತ್ರಾಸ್ತ್ರ ಎಲ್ಲೋದವು? ಇವರ ಹಿಂದೆ ಇನ್ನೂ ನಕ್ಸಲಿರಿದ್ದಾರಾ? ಶಸ್ತ್ರಾಸ್ತ್ರ ಅವರಿಗೆ ಕೊಟ್ಟು ಬಂದಿದ್ದಾರೆಂಬ ಪ್ರಶ್ನೆ ಮೂಡಲಿವೆ. ನಕ್ಸಲರನ್ನು ಕೋರ್ಟ್, ಪೊಲೀಸರ ಮುಂದೆ ಶರಣಾಗತಿ ಮಾಡಬೇಕು. ಸಿಎಂ ಮುಂದೆ ನಕ್ಸಲರ ಶರಣಾಗತಿ ಸರಿಯಲ್ಲ ಎಂದು ಕಿಡಿಕಾರಿದರು.

ನಕ್ಸಲಿಂ ನ್ನು ಸಂಪೂರ್ಣ ತೊಡೆದುಹಾಕವುದು ಸರ್ಕಾರದ ಉದ್ದೇಶ- ಸಿಎ.

ನಕ್ಸಲಿಂ ನ್ನು ಸಂಪೂರ್ಣ ತೊಡೆದುಹಾಕವುದು ಕಾಂಗ್ರೆಸ್ ಸರ್ಕಾರದ ಉದ್ದೇಶ.ಯಾವುದೇ ಹೋರಾಟಗಳಾಗಲಿ ಶಾಂತಿಯುತವಾಗಿರಬೇಕೇ ಹೊರತು ಹಿಂಸಾತ್ಮಕ ದಾರಿ ಹಿಡಿಯಬಾರದೆಂಬುದು ಸರ್ಕಾರದ ನಿಲುವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶರಣಾಗತರಾದ ನಕ್ಸಲರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಹಾಗೂ ನಕ್ಸಲರ ಶರಣಾಗತಿಯ ಬಗ್ಗೆ ಪರವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಕ್ಸಲರು ಶರಣಾಗಿದ್ದು, ಅವರ ಶಸ್ತ್ರಾಸ್ತ್ರಗಳನ್ನೂ ಮೊಹಜರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಹೋರಾಟುಗಳು ಸಂವಿಧಾನತ್ಮಕ ರೀತಿಯಲ್ಲಿ ನಡೆಯಬೇಕೆಂದು ಡಾ.ಅಂಬೇಡ್ಕರ್ ರವರೂ ಹೇಳಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿಎತ್ತಲು ಸಂವಿಧಾನದಲ್ಲಿ ಅವಕಾಶವಿದ್ದರೂ, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅವಕಾಶ ಯಾರಿಗೂ ನೀಡಲಾಗಿಲ್ಲ. ಶೃಂಗೇರಿಯಲ್ಲಿ ಮತ್ತೊಬ್ಬ ನಕ್ಸಲ್ ಇರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೂ ಅವರೂ ಕೂಡ ಕಾನೂನಿಗೆ ಶರಣಾಗಿ ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಕೋರುವುದಾಗಿ ತಿಳಿಸಿದರು.

ರಾಜಕೀಯ

Basavaraj Bommai| ಹಸುಗಳ ಕೆಚ್ಚಲು ಕತ್ತರಿಸಿರುವ ಅಮಾನೀಯ ಕೃತ್ಯ ಖಂಡನೀಯ: ಬಸವರಾಜ ಬೊಮ್ಮಾಯಿ

Basavaraj Bommai| ಹಸುಗಳ ಕೆಚ್ಚಲು ಕತ್ತರಿಸಿರುವ ಅಮಾನೀಯ ಕೃತ್ಯ ಖಂಡನೀಯ: ಬಸವರಾಜ ಬೊಮ್ಮಾಯಿ

ಹಸುಗಳ ಕೆಚ್ಚಲು ಕತ್ತರಿಸಿರುವ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ.Basavaraj Bommai

[ccc_my_favorite_select_button post_id="100741"]
Death news ಸಕ್ರಿಯ ಪತ್ರಕರ್ತ ಶಶಿಧರ್ ನಿಧನ..!

Death news ಸಕ್ರಿಯ ಪತ್ರಕರ್ತ ಶಶಿಧರ್ ನಿಧನ..!

ಮನೆಯಲ್ಲಿ ಯಾರು ಇಲ್ಲದ ಹೊತ್ತಿನಲ್ಲಿಯೇ ಈ ಘಟನೆ ನಡೆದಿದ್ದರಿಂದ Death news

[ccc_my_favorite_select_button post_id="100703"]
Hindi ರಾಷ್ಟ್ರ ಭಾಷೆ ಅಲ್ಲ.. ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಬೆಂಬಲ

Hindi ರಾಷ್ಟ್ರ ಭಾಷೆ ಅಲ್ಲ.. ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಬೆಂಬಲ

ಅಣ್ಣಾಮಲೈ ಕೂಡ ಅದನ್ನೆ ಹೇಳ್ತಾನೆ. ನನ್ನ ಗೆಳೆಯ ಅಶ್ವಿನ್ ಹೇಳಿಕೆ ಮಾತ್ರವಲ್ಲ, ಎಲ್ಲರೂ ಅದನ್ನೆ ಹೇಳ್ತಾರೆ.. Hindi

[ccc_my_favorite_select_button post_id="100687"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

ಜನವರಿ 17 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ. Khel ratna

[ccc_my_favorite_select_button post_id="99992"]
Suicide: ಲವರ್ ಕಿರುಕುಳ.. ಬೇಸತ್ತ ಯುವಕ ಆತ್ಮಹತ್ಯೆ..!

Suicide: ಲವರ್ ಕಿರುಕುಳ.. ಬೇಸತ್ತ ಯುವಕ ಆತ್ಮಹತ್ಯೆ..!

ಹುಡುಗಿಯರು ಏನೇ ಮಾಡಿದರು ಲೆಕ್ಕಕ್ಕೆ ಬರುವುದಿಲ್ಲ ಎಂದು ಯುವತಿಯ ವಿರುದ್ಧ ಆರೋಪಿಸಿ Suicide

[ccc_my_favorite_select_button post_id="100739"]

Police firing: ಡ್ರಗ್ಸ್ ಸ್ಮಗ್ಲರ್ ಮೇಲೆ ಪೊಲೀಸರ

[ccc_my_favorite_select_button post_id="100680"]

MLC ಸಿಟಿ ರವಿಗೆ ಕೊಲೆ ಬೆದರಿಕೆ! ಕಾಲಿಗೆ

[ccc_my_favorite_select_button post_id="100678"]

Chemical ಸೋರಿಕೆ.. ಕಾರ್ಮಿಕ ದುರ್ಮರಣ..!

[ccc_my_favorite_select_button post_id="100669"]

Hunting| ಜಿಂಕೆ, ಕಾಡು ಹಂದಿ ಬೇಟೆ.. ಥಾರ್

[ccc_my_favorite_select_button post_id="100626"]
MLC ಸಿಟಿ ರವಿಗೆ ಕೊಲೆ ಬೆದರಿಕೆ! ಕಾಲಿಗೆ ಬಿದ್ದು Sorry ಕೇಳುವಂತೆ ವಾರ್ನಿಂಗ್

MLC ಸಿಟಿ ರವಿಗೆ ಕೊಲೆ ಬೆದರಿಕೆ! ಕಾಲಿಗೆ ಬಿದ್ದು Sorry ಕೇಳುವಂತೆ ವಾರ್ನಿಂಗ್

ನಿನ್ನ ಗತಿ ಏನಾಗುತ್ತೆ. ನಿನ್ನ ಮನೆಗೆ ನುಗ್ಗಿ, ನಿನ್ನ ಕೈ ಮತ್ತು ಪಾದ ಮುರಿಯೋದು ಖಂಡಿತ, ಹುಷಾರ್! MLC

[ccc_my_favorite_select_button post_id="100678"]

ಆರೋಗ್ಯ

ಸಿನಿಮಾ

Darshan| ಸ್ಮೈಲು ರೇ ಸ್ಮೈಲು ಸ್ಮೈಲು ಬಾಸು.. ದರ್ಶನ್ ಸ್ಮೈಲ್ಗೆ ಅಭಿಮಾನಿ ಫಿದಾ..!| Video ನೋಡಿ

Darshan| ಸ್ಮೈಲು ರೇ ಸ್ಮೈಲು ಸ್ಮೈಲು ಬಾಸು.. ದರ್ಶನ್ ಸ್ಮೈಲ್ಗೆ ಅಭಿಮಾನಿ ಫಿದಾ..!|

ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿ ಆದೇಶಿಸಿದ್ದಾರೆ. Darshan

[ccc_my_favorite_select_button post_id="100613"]

Doctorate: ಖ್ಯಾತ ನಟಿ ತಾರಾ ಸೇರಿ 3

[ccc_my_favorite_select_button post_id="100512"]

Darshan Sudeep| ದಚ್ಚು-ಕಿಚ್ಚ ಅಭಿಮಾನಿಗಳ ನಡುವೆ ತಂದಿಟ್ಟ

[ccc_my_favorite_select_button post_id="99843"]

Pavan kalyan| ದಟ್ ಈಸ್ ರೇವಂತ್ ರೆಡ್ಡಿಗಾರು:

[ccc_my_favorite_select_button post_id="99803"]
error: Content is protected !!