ಗೌರಿಬಿದನೂರು: ಡಿಯೋ ಬೈಕ್ ಮೂಲಕ ವ್ಹೀಲಿಂಗ್ (wheeling) ಮಾಡ್ತಾ ಸಾರ್ವಜನಿಕರಿಗೆ ರಸ್ತೆಯಲ್ಲಿ ಕಿರಿಕಿರಿ ಮಾಡ್ತಿದ್ದ ಪುಂಡಪೋಕರಿಗಳನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಗೌರಿಬಿದನೂರು ನಗರದ ಅಬ್ದುಲ್ ರೆಹಮಾನ್, ಮುಭಾರಕ್ ಹಾಗೂ ಕಾರ್ತಿಕ್ ಬಂಧಿತರು.
ಗೌರಿಬಿದನೂರು ನಗರದ ಇಡಗೂರು ರಸ್ತೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಇತರೆ ಸವಾರರಿಗೆ ತೊಂದರೆ ಉಂಟು ಮಾಡುತ್ತಿದ್ರು.
ಮೂವರನ್ನ ವಶಕ್ಕೆ ಪಡೆದಿರುವ ಪೊಲೀಸರು ವ್ಹೀಲಿಂಗ್ ಮಾಡಲು ಬಳಸಿದ್ದ ಬೈಕ್ ಗಳನ್ನ ಸೀಝ್ ಮಾಡಿದ್ದಾರೆ.
ಇನ್ನೂ ಈ ಗಾಡಿಗಳಿಗೆ ಯಾವುದೇ ದಾಖಲೆಗಳು ಸಹ ಇಲ್ಲ ಅನ್ನೋದು ಪೊಲೀಸರ ಪರಿಶೀಲನೆ ವೇಳೆ ಗೊತ್ತಾಗಿದೆ.