Site icon Harithalekhani

Chakravarti Sulibele: ಹಿಂದೂ‌-ಮುಸ್ಲಿಂ ನಡುವೆ ದಂಗೆ ಹುಟ್ಟುಹಾಕಲು ಕೆಲವರಿಂದ ಪ್ರಯತ್ನ: ಚಕ್ರವರ್ತಿ ಸೂಲಿಬೆಲೆ

An attempt by some to create a Hindu-Muslim riot Chakravarti Sulibele

An attempt by some to create a Hindu-Muslim riot

ಬೆಂಗಳೂರು: ಚಾಮರಾಜಪೇಟೆಯಲ್ಲಿ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕೊಯ್ದ ಅಟ್ಟಹಾಸ ಕುರಿತು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಈ ಪೈಶಾಚಿಕ ಕೃತ್ಯದ ಕುರಿತು ಮಾತನಾಡಿರುವ ಅವರು, ಈ ಘಟನೆ ಬಹಳ ದುರಂತ ಅನ್ನಿಸುತ್ತೆ. ಇದನ್ನು ಕೇಳಿ ನನಗೆ ಬಹಳ ದುಃಖ ಅನಿಸುತ್ತೆ. ಯಾರಿಗೂ ತೊಂದರೆ ಮಾಡದ ಒಂದು ಪ್ರಾಣಿಯನ್ನ ಇಷ್ಟು ಹೀನವಾಗಿ, ಇಷ್ಟು ಕೆಟ್ಟದಾಗಿ ಕೆಚ್ಚಲನ್ನು ಕತ್ತರಿಸಿದ್ದಾರೆ ಎಂದರ ಬಹಳ ಸಂಕಟವಾಗುತ್ತೆ.

ಹಿಂದೂಗಳು ಗೋವನ್ನ ಪೂಜ್ಯ ಭಾವದಿಂದ ನೋಡ್ತಾರೆ. ಕೇವಲ ಹಿಂದೂಗಳಿಗೆ ಮಾತ್ರವಲ್ಲ ಎಲ್ಲರಿಗೂ ಹಾಲು ಎಂದ ತಕ್ಷಣ ತಾಯಿ ಹಾಲಿನ ನಂತರ ನೆನಪಾಗುವುದು ಗೋವು. ಆದರೆ ನನಗನ್ನಿಸುತ್ತೆ ಎಲ್ಲೋ ಒಂದು ಕಡೆ ಈ ನಾಡಿನಲ್ಲಿ ಹಿಂದೂ‌ಮುಸ್ಲಿಂ ದಂಗೆಯನ್ನು ಹುಟ್ಟುಹಾಕುವಂತ ಪ್ರಯತ್ನವನ್ನು ಕೆಲವರು ಮಾಡ್ತಾ ಇದ್ದಾರೆ ಅನಿಸುತ್ತೆ.

ಅದು ಕಳೆದ ಅನೇಕ ದಿನಗಳಿಂದ ನಮಗೆ ನೋಡಲು ಸಿಗ್ತಾ ಇದೆ‌. ಬಾಂಗ್ಲಾದೇಶದಿಂದ ಶುರು ಮಾಡಿ ಇಲ್ಲಿಯವರೆಗೂ.. ಸರ್ ತಬ್ ಸೇ ಜುಧಾ ಅಂತ ಅಲ್ಲಿ ಗಲಾಟೆ ಏನು ಶುರುಮಾಡಿದರೋ. ಇಡೀ ದೇಶದಲ್ಲಿ ಹಿಂದು ಮುಸಲ್ಮಾನರ ನಡುವೆ ಗಲಾಟೆ ಆರಂಭಿಸಬೇಕು, ಭಾರತವನ್ನು ಅಶಾಂತಿಗೆ ದೂಡಬೇಕು ಎಂಬ ಪ್ರಯತ್ನ ಮಾಡ್ತಾ ಇದ್ದಾರೆ. ಬೆಂಗಳೂರಲ್ಲಿ ಈ ರೀತಿ ಯಾವತ್ತೂ ಇರಲಿಲ್ಲ. ಬೆಂಗಳೂರು ತುಂಬಾ ಶಾಂತವಾಗಿದ್ದ ಜಾಗ, ಕರ್ನಾಟಕದಲ್ಲಿ ಯಾವತ್ತೂ ಕೂಡ ದಂಗೆಯ ಸ್ವರೂಪಕ್ಕೆ ತಿರುಗಿದ್ದು ಬಹಳ ಕಡಿಮೆ.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಮುಸ್ಲಿಮರು ಈ ರೀತಿಯ ಘಟನೆಯಲ್ಲಿ ನಿರತರಾಗುವುದು ಕಂಡುಬರುತ್ತದೆ. ಈ ಘಟನೆ ಯಾರೇ ಮಾಡಿರಲಿ ಹಿಂದೂ ಮುಸ್ಲಿಂ ಯಾರೇ ಇರಲಿ ಅವರ ಮೇಲೆ ಕ್ರಮ ಆಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಒತ್ತಾಯಿಸಿದ್ದಾರೆ‌.

Exit mobile version