ಮಂಗಳೂರು: ಹಿಂದಿ (Hindi) ಭಾಷೆ ರಾಷ್ಟ್ರೀಯ ಭಾಷೆ ಅಲ್ಲ ಅದೊಂದು ಭಾಷೆಯಷ್ಟೆ ಎಂದಿರುವ ಮಾಜಿ ಕ್ರಿಕೆಟಿಗ ಅಶ್ವಿನ್ ಹೇಳಿಕೆಯನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬೆಂಬಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ರಾಷ್ಟ್ರೀಯ ಭಾಷೆಯಲ್ಲ.. ಅಣ್ಣಾಮಲೈ ಕೂಡ ಅದನ್ನೆ ಹೇಳ್ತಾನೆ. ನನ್ನ ಗೆಳೆಯ ಅಶ್ವಿನ್ ಹೇಳಿಕೆ ಮಾತ್ರವಲ್ಲ, ಎಲ್ಲರೂ ಅದನ್ನೆ ಹೇಳ್ತಾರೆ..
ಹಿಂದಿ ಒಂದು ಅಫಿಶಿಯಲ್ ಲ್ಯಾಂಗ್ವೇಜ್, ಲಿಂಕ್ ಲಾಂಗ್ವೇಜ್ ಹೊರತು, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ. ಅಶ್ವಿನ್ ಹೇಳಿರುವುದು ಕರೆಕ್ಟ್ ಎಂದಿದ್ದಾರೆ.
ಅಶ್ವಿನ್ ಹೇಳಿದ್ದೇನು..?
ಚೆನ್ನೈನ ಖಾಸಗಿ ಕಾಲೇಜೊಂದರ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಸಭಿಕರನ್ನು ಪ್ರಶ್ನಿಸಿ ನಿಮ್ಮಲ್ಲಿ ಎಷ್ಟು ಮಂದಿ ಇಂಗ್ಲಿಷ್ ಮಾತನಾಡುತ್ತಾರೆ ಮತ್ತು ಎಷ್ಟು ಮಂದಿ ತಮಿಳು ಮಾತನಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ ನಿಮ್ಮಲ್ಲಿ ಎಷ್ಟು ಮಂದಿ ಹಿಂದಿ ಮಾತನಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತಿಕ್ರಿಯೆ ಕಡಿಮೆಯಾಗಿತ್ತು. ಅಶ್ವಿನ್ ಅವರು ಯಾವ ಭಾಷೆಯಲ್ಲಿ ತಾನು ಮಾತನಾಡಬೇಕು ಎಂಬ ಬಗ್ಗೆ ನಿರ್ಧರಿಸಲು ಈ ಪ್ರಶ್ನೆಯನ್ನು ಕೇಳಿದ್ದರು.
ಆ ಬಳಿಕ ಅವರು ತಮಿಳಿನಲ್ಲಿ ತನ್ನ ಮಾತನ್ನು ಮುಂದುವರಿಸಿದ್ದರು. ‘ಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಅದು ಅಧಿಕೃತ ಭಾಷೆ’ ಇದನ್ನು ನಾನು ಹೇಳಬೇಕೆಂದು ಭಾವಿಸಿದೆ ಎಂದು ಹೇಳಿದ್ದರು.