ಕೋಲಾರ: ಇಂದು ವೈಕುಂಠ ಏಕಾದಶಿ (Vaikuntha Ekadashi) ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಅಂತೆಯೇ ಮಾಲೂರಿನ ಚಿಕ್ಕತಿರುಪತಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.
ವೈಕುಂಠ ಏಕಾದಶಿಯ ಜೊತೆಗೆ ಶುಕ್ರವಾರ ಆದ ಕಾರಣ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇದೆ. ಪ್ರಸನ್ನ ವೆಂಕಟೇಶ್ವರನ ದರ್ಶನ ಪಡೆದು ಭಕ್ತರು, ವೈಕುಂಠ ದ್ವಾರದ ಮೂಲಕ ಹೊರ ಬರುತ್ತಿದ್ದಾರೆ.
ವಿವಿಧ ಹೂಗಳಿಂದ ತಿಮ್ಮಪ್ಪನ ಸಿಂಗಾರಗೊಳಿಸಲಾಗಿದ್ದು, ಬೆಳಿಗ್ಗೆ 4 ಗಂಟೆಯಿಂದಲೂ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ದೇವರನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಬಂದಿದ್ದಾರೆ.
ವೈಕುಂಠ ಧ್ವಾರದ ಮೂಲಕ ಪ್ರವೇಶ ಮಾಡಿದರೆ ಸ್ವರ್ಗ ಪ್ರಾಪ್ತಿ ನಂಬಿಕೆ ಹಿನ್ನೆಲೆಯಲ್ಲಿ, ಗೋವಿಂದಾ ಗೋವಿಂದಾ ಅಂತ ವೈಕುಂಠ ಧ್ವಾರಾದ ಮೂಲಕ ಪ್ರವೇಶ ಮಾಡ್ತಿರುವ ಭಕ್ತಗಣ.
ಸ್ಥಳೀಯರು, ಬೆಂಗಳೂರು, ತಮಿಳುನಾಡು ಭಾಗದಿಂದ ಹೆಚ್ಚಿನ ಭಕ್ತರ ಆಗಮಿಸುತ್ತಿದ್ದಾರೆ. ರಾತ್ರಿ 9.30 ಗಂಟೆವರೆಗೂ ದೇವರ ದರ್ಶನಕ್ಕೆ ವ್ಯವಸ್ಥೆ ಇದೆ. ಇಂದು 1 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆ ಇದೆಯಂತೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಮುಜರಾಯಿ ಇಲಾಖೆಗೆ ಸೇರಿರುವ ದೇವಸ್ಥಾನ ಇದಾಗಿದೆ.