ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಏಕಾದಶಿ ಜ.10 ಶುಕ್ರವಾರ ವಿಶೇಷವಾಗಿ ಈ ದಿನ ವಿಶೇಷವಾಗಿ ವೆಂಕಟೇಶನ ದರ್ಶನವನ್ನು ಮಾಡಿದರೆ ಶ್ರೇಷ್ಠವಾದಂತ ಫಲವನ್ನು ಹೊಂದಬಹುದು.. Astrology

ಮೇಷ ರಾಶಿ: ಉತ್ತಮ ಮನೋಭಾವನೆಯಿಂದ ಎಲ್ಲ ಕಾರ್ಯದಲ್ಲೂ ಜಯ, ಅನಾವಶ್ಯಕ ವಿಷಯಗಳಿಗೆ ತಲೆ ಕೊಡಬೇಡಿ. ನಿಮ್ಮದಲ್ಲದ ತೀರ್ಮಾನಕ್ಕೆ ಚಿಂತಿಸುವುದು ಒಳ್ಳೆಯದಲ್ಲ, ಉತ್ತಮ ಧನಾರ್ಜನೆ, ಮನಸ್ಸಿನ ಖೇದ, ಚಿಂತೆ. (ಪರಿಹಾರಕ್ಕಾಗಿ ಆಂಜನೇಯ ಭುಜಂಗ ಸ್ತೋತ್ರದ ಪಾರಾಯಣ ಮಾಡಿ)
ವೃಷಭ ರಾಶಿ: ಒಳ್ಳೆಯ ವಿದ್ಯಾರ್ಜನೆ, ಅನಾರೋಗ್ಯ, ಸರಸ ಸಲ್ಲಾಪಗಳಿಂದ ಮಾತುಕತೆ, ಜೀವನದ ಸಂತೃಪ್ತಿ, ಮನಸ್ಸಿಗೆ ಆರೋಗ್ಯದ ಚಿಂತೆ, ತಂದೆಯ ಮಾತಿನಲ್ಲಿ ಕೊಂಕು. (ಪರಿಹಾರಕ್ಕಾಗಿ ದುರ್ಗಾ ಸ್ತೋತ್ರದ ಪಾರಾಯಣ ಮಾಡಿ)
ಮಿಥುನ ರಾಶಿ: ಮುನ್ನುಗ್ಗುವ ಸ್ವಭಾವ, ಧೈರ್ಯ ಚಂಚಲವಾದ ಮನಸ್ಸು, ಶತ್ರುಗಳಿಂದ ತೊಂದರೆ. ತಾಯಿಯ ಜೊತೆ ವಾಗ್ವಾದ, ಯತ್ನ ಕಾರ್ಯಗಳಲ್ಲಿ ವಿಳಂಬ, ಸುಮ್ಮನೆ ಓಡಾಟ, ಪ್ರಯೋಜನವಿಲ್ಲದ ಮಾತುಕತೆ. (ಪರಿಹಾರಕ್ಕಾಗಿ ರಾಮ ಮಂತ್ರವನ್ನು ಜಪಿಸಿ)
ಕಟಕ ರಾಶಿ: ಆಧಾರವಿಲ್ಲದ ಮಾತುಗಳು, ಹಿತ ಶತ್ರುಗಳಿಂದ ಭಯ, ಸಹೋದರರು ಸಹೋದರರಿಂದ ಸ್ವಲ್ಪ ಮಾನಸಿಕ ಖೇದ, ಶೀತ, ನೆಗಡಿ, ಜ್ವರದ ಸಂಭವ, ಆರೋಗ್ಯದ ಬಗ್ಗೆ ಗಮನವಿರಲಿ. ಮನಸ್ಸಿನ ಬಗ್ಗೆ ಹಿಡಿತವಿರಲಿ ಸಂತೋಷವಾಗಿರಿ. (ಪರಿಹಾರಕ್ಕಾಗಿ ದತ್ತ ಸ್ತೋತ್ರವನ್ನು ಪಾರಾಯಣ ಮಾಡಿ)
ಸಿಂಹ ರಾಶಿ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೂರದಿಂದ ಶುಭ ಸುದ್ದಿ, ಆಹಾರ, ಆರೋಗ್ಯ, ಎಲ್ಲವೂ ಸಹ ಪುಷ್ಕಳವಾಗಿದೆ, ದನಾಗಮ ಸ್ವಲ್ಪ ವಿಳಂಬ. (ಪರಿಹಾರಕ್ಕಾಗಿ ಅಮ್ಮನವರಿಗೆ ನಿಂಬೆಹಣ್ಣಿನ ಹಾರವನ್ನು ಅರ್ಪಿಸಿ)
ಕನ್ಯಾ ರಾಶಿ: ಎಲ್ಲರ ಮೇಲೂ ಕೋಪ, ಅನಾವಶ್ಯಕ ಆತಂಕ ಅಧಿಕ ರೇಗಾಟ, ತಿರುಗಾಟ, ಯಾರೋ ಮಾಟ ಮಾಡಿಸಿದ್ದಾರೆ ಎಂಬ ಭಯ, ಮನೆಯಲ್ಲಿ ಭಯದ ವಾತಾವರಣ, ಗಂಡ ಹೆಂಡಿರ ಜಗಳ, ಕುಟುಂಬ ಸಾಮರಸ್ಯ ಹದಗೆಡುವ ಪರಿಸ್ಥಿತಿ. (ಪರಿಹಾರಕ್ಕಾಗಿ ಅರ್ಧನಾರೀಶ್ವರ ಸ್ತೋತ್ರ ಪಾರಾಯಣ)
ತುಲಾ ರಾಶಿ: ಧನಾಗಮದಲ್ಲಿ ಸ್ವಲ್ಪ ವಿಳಂಬ, ಒಬ್ಬರೊಬ್ಬರು ಕೆಸರೆ ಚಾಟ, ವಿದ್ಯಾರ್ಜನೆ ಕುಂಠಿತ, ಭಯದ ವಾತಾವರಣ, ಸರ್ಪ ಭಯ, ಮುಖದಲ್ಲಿ ಪ್ರಸನ್ನತೆಯ ಕೊರತೆ. (ಪರಿಹಾರಕ್ಕಾಗಿ ಗಣಪತಿ ದೇವಾಲಯಕ್ಕೆ ಹೋಗಿ ನಮಸ್ಕರಿಸಿ ಬನ್ನಿ)
ವೃಶ್ಚಿಕ ರಾಶಿ: ಜ್ಞಾನವಿಕಾಸ, ಚಂಚಲವಾದ ಬುದ್ದಿ, ಮುನ್ನುಗ್ಗ ಬೇಕೆಂಬ ಕಾತುರ, ಸ್ವಲ್ಪಮಟ್ಟಿನ ಧನಾರ್ಜನೆ, ತಾಯಿಯ ಕಡೆಯಿಂದ ಅನಾರೋಗ್ಯ ವಾರ್ತೆ, ಪೂರ್ವ ಪುಣ್ಯ ಲಾಭದಾಯಕವಾಗಿಲ್ಲ. (ಪರಿಹಾರಕ್ಕಾಗಿ ನವ ನಾಗ ಸ್ತೋತ್ರವನ್ನು ಜಪ ಮಾಡಿ ಅಥವಾ ನಾಗಪೂಜೆ)
ಧನಸ್ಸು ರಾಶಿ: ಎಲ್ಲ ಕಾರ್ಯಗಳಲ್ಲು ವಿಶ್ವಾಸ, ಸ್ವಲ್ಪ ಮನಸ್ಸಿನ ಸ್ಥಿರತೆ ಇಲ್ಲದಿರುವುದೇ ಎಲ್ಲದಕ್ಕೂ ತೊಡಕು, ಸಂಬಂಧಗಳ ಜೊತೆ ಜಗಳಕ್ಕಿಂತ ಸಂಧಾನ ಒಳ್ಳೆಯದು. ವಿದ್ಯೆಯು ಕುಂಟಿತವಾಗಿರುತ್ತದೆ, ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎಚ್ಚರ. (ಪರಿಹಾರಕ್ಕಾಗಿ ನರಸಿಂಹ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಸಿ)
ಮಕರ ರಾಶಿ: ವಿನಾಕಾರಣ ಆರೋಪ, ತೊಂದರೆ, ದುಃಖ, ಧನಾರ್ಜನೆ ಸ್ವಲ್ಪ ವಿಳಂಬ, ಎಲ್ಲಾ ಕಾರ್ಯಕ್ಕೂ ಯತ್ನಾನುಕೂಲ, ಪ್ರಯತ್ನ ಅಧಿಕವಾಗಬೇಕು, ವಿಶ್ವಾಸದಿಂದ ಕೆಲಸ ಮಾಡಿ, ಎಲ್ಲದಕ್ಕೂ ವಿಶ್ವಾಸವೇ ಮೂಲ ಬುದ್ಧಿಗೆ ಕೆಲಸ ಕೊಡಿ, ಶಕ್ತಿಗಲ್ಲ. (ಪರಿಹಾರಕ್ಕಾಗಿ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಕುಂಕುಮದ ಅರ್ಚನೆ ಮಾಡಿಸಿ)
ಕುಂಭ ರಾಶಿ: ವೃತ ತಿರುಗಾಟ, ಧನಸಂಪಾದನೆ ವಿಳಂಬ, ಮನಸ್ಸು ಸಮಸ್ಯೆಗಳ ಗೂಡು, ಏನೇ ಪ್ರಯತ್ನ ಪಟ್ಟರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎನ್ನುವವರು ಶೀಘ್ರವಾಗಿ ಅನುಗ್ರಹವಾಗಲು ಈಶ್ವರನ ದೇವಾಲಯದಲ್ಲಿ ಅಭಿಷೇಕ ಮಾಡಿಸಿ. (ಪರಿಹಾರಕ್ಕಾಗಿ ಶಿವ ಪಂಚಾಕ್ಷರ ಮಂತ್ರವನ್ನು ಜಪ ಮಾಡಿ)
ಮೀನ ರಾಶಿ: ಮನೆಯಲ್ಲಿ ನಾನಾ ವಿಧವಾದ ಚಿಂತೆ, ಮನಸ್ಸಿಗೆ ದುಗುಡ, ಸಣ್ಣಪುಟ್ಟ ವಿಷಯಗಳಲ್ಲಿ ಕೋಪ, ಆತಂಕ, ಹಿರಿಯರ ಭಯ (ಪರಿಹಾರಕ್ಕಾಗಿ ಮನೆಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ)
ರಾಹುಕಾಲ: 10-30AM ರಿಂದ 12-00PM
ಗುಳಿಕಕಾಲ: 7-30AM ರಿಂದ 9-00 AM
ಯಮಗಂಡಕಾಲ: 3-00PMರಿಂದ 4-30PM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572