ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿನ ದೇಗುಲವೊಂದರಲ್ಲಿ ಧಾರ್ಮಿಕ ಉತ್ಸವ ವೇಳೆ ಸಾಕಾನೆಗೆ (Elephant) ಮದವೇರಿದ್ದರಿಂದ ದಿಢೀರ್ ದಾಳಿ ನಡೆಸಿದೆ. ಪರಿಣಾಮ ಭಕ್ತರೂ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ.
ಮಲಪ್ಪುರಂನ ತಿರೂರಿನ ಬಿ.ಪಿ.ಅಂಗಡಿಯ ಜಾರಮ್ ಮೈದಾನದಲ್ಲಿ ಬುಧವಾರ ಬೆಳಗ್ಗೆ ಘಟನೆ ನಡೆದಿದೆ.
ತಿರೂರಿನ ಬಿ.ಪಿ.ಅಂಗಡಿಯ ಯಾಹೂ ತಂಗಳ್ ದೇಗುಲದಲ್ಲಿ 4 ದಿನಗಳ ವಾರ್ಷಿಕ ಉತ್ಸವ (ನೇಚಾರ್ ಕಾರ್ಯಕ್ರಮ) ಆಯೋ ಜನೆಯಾಗಿತ್ತು. ವಿಶೇಷ ಉತ್ಸವಕ್ಕಾಗಿಯೇ ತರಬೇತಿ ಪಡೆದ 5 ಆನೆಗಳನ್ನು ಕರೆಸಲಾಗಿತ್ತು.
ಪಕ್ಕೋತ್ ಶ್ರೀಕುಟ್ಟನ್ ಹೆಸರಿನ ದೊಡ್ಡ ಗಾತ್ರದ ಆನೆಯನ್ನು ಮೆರವಣಿಗಾಗಿ ಸಿಂಗರಿಸಿ ಮಾವುತನ ನಿಯಂತ್ರಣದಲ್ಲಿ ಒಂದೆಡೆ ನಿಲ್ಲಿಸಲಾಗಿತ್ತು. ಆದರೆ, ದಿಢೀರ್ ಮದ ವೇರಿದ್ದರಿಂದ ಮಾವುತನ ಹತೋಟಿ ಮೀರಿದ ಆನೆ, ಮುಂದೆಯೇ ನಿಂತಿದ್ದ ವ್ಯಕ್ತಿಯನ್ನು ಸೊಂಡಿಲಲ್ಲಿ ಮೇಲೆತ್ತಿ ಬಟ್ಟೆ ಒಗೆಯುವಂತೆ ನೆಲಕ್ಕೆ ಅಪ್ಪಳಿಸಿತು.
ಇದರಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕೊಟ್ಟಕಲ್ ಆಸ್ಪತ್ರೆಗೆ
ದಾಖಲಿಸಲಾಗಿದೆ.
ಬಳಿಕ ಶ್ರೀಕುಟ್ಟನ್ ಆನೆ ಅಲ್ಲಿ ನೆರೆದಿದ್ದ ಜನರ ಗುಂಪಿನತ್ತ ನುಗ್ಗಿ ಸಿಕ್ಕವರ ಮೇಲೆಲ್ಲಾ ದಾಳಿ ನಡೆಸಿತು. ಗಾಬರಿಗೊಂಡ ಜನರು ಓಡಲಾರಂಭಿಸಿದರು. ಇದರಿಂದ ಕಾಲ್ತುಳಿ ತವಾಗಿ 17 ಮಂದಿ ಗಾಯಗೊಂಡರು.
ಮಾವುತರು ಹರಸಾಹ ಸಪಟ್ಟು ಶ್ರೀಕುಟ್ಟನ್ ಆನೆಯನ್ನು ನಿಯಂತ್ರಣಕ್ಕೆ ತಂದರು.
ಒಟ್ಟಾರೆ ಘಟನೆಯಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡರು. ಇಬ್ಬರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಗಾಯಾಳುಗಳು ತಿರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.