Site icon Harithalekhani

Doddaballapura: ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಕನ್ನಡಪರ ಹೋರಾಟಗಾರನ ಮಗಳು.. ಕರವೇ ಕುಟುಂಬದಿಂದ ಸನ್ಮಾನ

ದೊಡ್ಡಬಳ್ಳಾಪುರ (Doddaballapura): ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ಬಣದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಮೇಶ್ ವಿರಾಜ್ ಅವರ ಮಗಳಾದ ಆರ್ ಅನುಶ್ರೀ ಅವರು ಎಂಸಿಎ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು, 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಬೆಂಗಳೂರಿನ ದಯಾನಂದ ಸಾಗರ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅನುಶ್ರೀ ಅವರು ಈ ಸಾಧನೆ ಮಾಡಿದ್ದಾರೆ.

ಈ ಹಿನ್ನಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣದ) ದೊಡ್ಡಬಳ್ಳಾಪುರ ತಾಲೂಕು ಘಟಕದ ಪದಾಧಿಕಾರಿಗಳು ಅನುಶ್ರಿ ಅವರನ್ನು ಸನ್ಮಾನಿಸಿ, ಗೌರವಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷರು
ಹಮಾಮ್ ವೆಂಕಟೇಶ್, ಉಪಾಧ್ಯಕ್ಷರಾದ ಜೋಗಹಳ್ಳಿ ಅಮ್ಮು, ಮಂಜು, ಕಾರ್ಯದರ್ಶಿ ಮುಕ್ಕೆನಹಳ್ಳಿ ರವಿ, ಆನಂದ, ನಗರ ಅಧ್ಯಕ್ಷರು ಶ್ರೀನಗರ ಬಷೀರ್, ಪ್ರಧಾನ ಕಾರ್ಯದರ್ಶಿ ರಘುನಂದನ್, ಮುನಿಕೃಷ್ಣ, ರಾಜಣ್ಣ ಮತ್ತಿತರರಿದ್ದರು.

Exit mobile version