ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ದಶಮಿ ಜ.01.2024 ಗುರುವಾರ: ವಿಶೇಷವಾಗಿ ಶ್ರೀ ಶಂಕರ ಭಗವದ್ಪಾದರ ಆರಾಧನೆಯಿಂದ ಈ ದಿನ ಶುಭವಾಗುತ್ತದೆ. ಎಲ್ಲಾ ಕಾರ್ಯಕ್ಕೂ ಗುರುಗಳ ಅನುಗ್ರಹ ಆಶೀರ್ವದವಿದ್ದರೆ ಜಯಗಳಿಸಬಹುದು. Astrology
ಮೇಷ ರಾಶಿ: ಅತ್ಯಂತ ಶ್ರೇಷ್ಠವಾದ ಶುಭದಿನ. ಧನಾಗಮ ಅನುಕೂಲವಾಗಿದೆ. ವಿದ್ಯಾಭ್ಯಾಸವು ಸಹ ಅನುಕೂಲ. ಆತ್ಮೀಯರೊಂದಿಗೆ ಸ್ವಲ್ಪಮಟ್ಟಿನ ಕಲಹ, ದ್ವೇಷ ಭಾವನೆಗೆ ಎಡೆ ಕೊಡಬೇಡಿ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)
ವೃಷಭ ರಾಶಿ: ಸ್ವಲ್ಪ ರೋಗ ಬಾದೆ, ಅನಾವಶ್ಯಕ ಚಿಂತೆ, ಭಾದೆಗಳ ನಿವಾರಣೆ ಗಾಗಿ ಪ್ರಾರ್ಥನೆ, ಆರಂಭಿಕವಾಗಿ ಚಿಂತೆ, ಯತ್ನಾನುಕೂಲ ಎಲ್ಲಾ ಕಾರ್ಯದಲ್ಲೂ ಯಶಸ್ಸು. (ಪರಿಹಾರಕ್ಕಾಗಿ ದುರ್ಗಾ ಮಂತ್ರವನ್ನು ಜಪಿಸಿ)
ಮಿಥುನ ರಾಶಿ: ಸ್ವಲ್ಪ ಅನಾವಶ್ಯಕ ಪೀಡೆಗಳು, ರೋಗಭಾದೆ, ಭಯ, ಆತಂಕ, ದುಃಖ.. ಆದರು ಸಹ ಕಾರ್ಯಗಳನ್ನು ಮಾಡಬೇಕೆಂಬ ಆಸಕ್ತಿ, ದೃಢವಾದ ನಿರ್ಧಾರ, ಎತ್ತರದ ಚಿಂತೆ, ಶುಭವಾಗುತ್ತದೆ. (ಪರಿಹಾರಕ್ಕಾಗಿ ಲಕ್ಷ್ಮಿನಾರಾಯಣರ ದೇವಾಲಯದಲ್ಲಿ ಪೂಜೆ ಮಾಡಿ)
ಕಟಕ ರಾಶಿ: ಚಿಂತೆಯಲ್ಲಿ ಆಸಕ್ತಿ. ಓದಿನ ಬಗ್ಗೆ ನಿರಾಸಕ್ತಿ ಚಿಂತೆ.. ಆಗುವ ಕಾಲಕ್ಕೆ ಎಲ್ಲವೂ ಪೂರ್ಣಗೊಳ್ಳುತ್ತದೆ, ನಿಶ್ಚಯವಾಗಿ. ಆಲೋಚನೆ ಮಾಡಿ, ಕಾರ್ಯವನ್ನು ಶುರು ಮಾಡಿ. (ಪರಿಹಾರಕ್ಕಾಗಿ ಸಂಜೀವಿನಿ ಮಂತ್ರವನ್ನು ಜಪಿಸಿ)
ಸಿಂಹ ರಾಶಿ: ಯಾವಾಗಲೂ ವಿಶ್ರಾಂತಿಯಲ್ಲಿದ್ದರೆ ಕಾರ್ಯಗಳು ತುಂಬಾ ಕಷ್ಟ. ಎದ್ದು ಕಾರ್ಯದಲ್ಲಿ ಮುನ್ನುಗ್ಗಿ, ಅನುಕೂಲವಾಗುತ್ತದೆ. ವಿದ್ಯಾಭ್ಯಾಸ ಅನುಕೂಲವಾಗಿದೆ. (ಪರಿಹಾರಕ್ಕಾಗಿ ಮಹಾ ಸರಸ್ವತಿಯ ಬೀಜ ಮಂತ್ರವನ್ನು ಜಪ ಮಾಡಿ)
ಕನ್ಯಾ ರಾಶಿ: ದುಡ್ಡಿನ ಹಿಂದೆ ಹೋಗುವುದು ಬೇಡ. ಕಳೆದು ಹೋದಕ್ಕಾಗಿ ಚಿಂತಿಸುವುದು ಸರಿಯಲ್ಲ. ಹಾಗಾಗಿ ಇರುವುದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ, ಎತ್ತರಕ್ಕೆ ಏರುತ್ತಿರಿ. ಯಾವುದೇ ಸಂದೇಹವಿಲ್ಲ. (ಪರಿಹಾರಕ್ಕಾಗಿ ಆಂಜನೇಯ ಮಂತ್ರವನ್ನು ಜಪಿಸಿ)
ತುಲಾ ರಾಶಿ: ಸ್ವಲ್ಪ ರಚನೆ. ಎಲ್ಲ ಕಾರ್ಯದಲ್ಲೂ ವಿರೋಧ, ಅತಿಯಾದ ಅಹಂಭಾವ, ಇದರಿಂದ ಸ್ವಲ್ಪ ಆರೋಗ್ಯ ತೊಂದರೆ. ಆಹಾರದಲ್ಲಿ ಸ್ವಲ್ಪ ಮಿತಿ ಇರಲಿ. (ಪರಿಹಾರಕ್ಕಾಗಿ ಧನ್ವಂತ್ರಿ ಮಂತ್ರ ಜಪ ಮಾಡಿ)
ವೃಶ್ಚಿಕ ರಾಶಿ: ಅನಾವಶ್ಯಕವಾಗಿ ಜನರನ್ನು ಅತಿಯಾಗಿ ಹಚ್ಚಿಕೊಳ್ಳಬೇಡಿ. ಸ್ವಲ್ಪ ದುಃಖದ ಜೊತೆ ಕಷ್ಟದ ವಾತಾವರಣ ಇರುತ್ತದೆ. ಭಾನುವಾರದಿಂದ ಶುಭವಾಗುತ್ತದೆ, ಧನಾಗಮನ ಸ್ವಲ್ಪ ಕಷ್ಟ. (ಪರಿಹಾರಕ್ಕಾಗಿ ನಾರಾಯಣನ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ )
ಧನಸ್ಸು ರಾಶಿ: ಅನಾವಶ್ಯಕ ಚಿಂತೆ ಬೇಡ. ಒಳ್ಳೆಯದಾಗಿದೆ, ಮುಂದು ಒಳ್ಳೆಯದಾಗುತ್ತದೆ. ಎಚ್ಚರಿಕೆ ಬಹಳ ಅಗತ್ಯ, ಯೋಚಿಸಿ ಕಾರ್ಯಗಳನ್ನು ಮಾಡಿ, ಶುಭವಾಗುತ್ತದೆ. (ಪರಿಹಾರಕ್ಕಾಗಿ ಔದುಂಬರ ವೃಕ್ಷಕ್ಕೆ ಪೂಜೆ ಮಾಡಿ)
ಮಕರ ರಾಶಿ: ಒಳ್ಳೆಯ ಶುಭ ಕ್ಷಣಗಳು ಆದರೆ ಸ್ವಲ್ಪ ಕೊರತೆ. ಧನಾಗಮ ಉತ್ತಮವಾಗಿದೆ. ಆದರೆ ಅಹಂಕಾರದತ್ತ ಮನಸ್ಸುಲುತ್ತದೆ ಎಚ್ಚರಿಕೆ. (ಪರಿಹಾರಕ್ಕಾಗಿ ಮಹಾ ಸುದರ್ಶನ ಹೋಮವನ್ನು ಮಾಡಿಸಿಕೊಳ್ಳಿ)
ಕುಂಭ ರಾಶಿ: ಜೀವನ ಬಹಳ ಚಿಕ್ಕದು ಎಂಬ ಧ್ವನಿ ಗೊತ್ತಾಗುತ್ತದೆ. ನಿಮಗೆ ಹತ್ತಿರದವರು ಸ್ವಲ್ಪ ದೂರವಾಗುತ್ತಾರೆ. ಸ್ವಲ್ಪ ಮನಸ್ಸನ್ನು ಕೊಟ್ಟು ಕೆಲಸ ಮಾಡಿ. (ಪರಿಹಾರಕ್ಕಾಗಿ ಭೂದೇವಿಯನ್ನು ಸ್ತುತಿ ಮಾಡಿ)
ಮೀನ ರಾಶಿ: ಅನುಕೂಲವಾದ ಸಮಯ, ಭಗವಂತನ ದರ್ಶನ ಭಾಗ್ಯ, ಎಲ್ಲಾ ಕಾರ್ಯದಲ್ಲೂ ಧರ್ಮದಿಂದ ಆಚರಣೆ ಮತ್ತು ಸತ್ ಕೀರ್ತಿ ಉಂಟಾಗುತ್ತದೆ. ಯಶಸ್ಸು, ಕೀರ್ತಿ, ವಿದ್ಯೆ ಎಲ್ಲವೂ ಪ್ರಾಪ್ತಿಯಾಗುತ್ತದೆ. (ಪರಿಹಾರಕ್ಕಾಗಿ ಕುಲದೇವತೆಯ ಸ್ತುತಿ ಮಾಡಿ)
ರಾಹುಕಾಲ: 1-30PM ರಿಂದ 3-00PM
ಗುಳಿಕಕಾಲ: 9-00AM ರಿಂದ 10-30 AM
ಯಮಗಂಡಕಾಲ: 6-00AMರಿಂದ 7-30AM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572