ಹಾವೇರಿ: ಸ್ಕೂಟರ್ ಚಲಾಯಿಸುತ್ತಿದ್ದ ಮಗನ ನಿರ್ಲಕ್ಷ್ಯಕ್ಕೆ ಆತನ ತಾಯಿ ಬಲಿಯಾಗಿರುವ ಘಟನೆ (Accident) ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ ನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಹಾವೇರಿ ನಿವಾಸಿ 45 ವರ್ಷದ ಗಿರಿಜಮ್ಮ ಎಂದು ಗುರುತಿಸಲಾಗಿದೆ.
ತಾಯಿಯೊಂದಿಗೆ ಬರುವಾಗ ಟೋಲ್ ಗೇಟ್ ಹಾಕಿದ್ದರೂ ಸೈಡಿಗೆ ಹೋಗದೆ ನಿರ್ಲಕ್ಷ್ಯದಿಂದ ಸ್ಕೂಟರ್ ಚಾಲನೆ ಮಾಡಿದ್ದರಿಂದ ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ ಟೋಲ್ ಗೇಟ್ ನ ಕಟ್ಟಿಗೆ ಬಡಿದು ಬೈಕ್‌ನಲ್ಲಿ ಹಿಂದೆ ಕುಳಿತಿದ್ದ ಬೈಕ್ ಸವಾರನ ತಾಯಿ ಸ್ಥಳದಲ್ಲೇ ಸಾವನಪ್ಪಿದ್ದಾರೆ
ಈ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ