Site icon Harithalekhani

California; ಭೀಕರ ಕಾಡ್ಗಿಚ್ಚು: ಮನೆ, ವಾಹನ ಭಸ್ಮ..!| Video ನೋಡಿ

ಲಾಸ್‌ ಏಂಜಲೀಸ್: ಕ್ಯಾಲಿಪೋರ್ನಿಯಾದ (California) ಲಾಸ್ ಏಜಂಲೀಸ್‌ನ ಕಾಡಿನಲ್ಲಿ ಭೀಕರ ಕಾಡ್ಗಿಚ್ಚು ಹಬ್ಬಿದ್ದು, ಸಾವಿರಾರು ಮನೆಗಳು, ವಾಹನಗಳು ಸುಟ್ಟು ಕರಕಲಾಗಿವೆ.

ಈ ಸ್ಥಳದಿಂದ ಸುಮಾರು 30 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಾಂಟಾ ಮೋನಿಕಾ ಬಳಿಯ ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶವನ್ನು ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿದೆ. ಮಂಗಳವಾರ ರಾತ್ರಿಯಿಂದ ಗಾಳಿ ತೀವ್ರವಾಗಿ ಬೀಸುತ್ತಿರುವ ಕಾರಣ ಬೆಂಕಿ ಎಲ್ಲೆಡೆ ಹರಡುತ್ತಿದೆ.

ಜನವರಿ ತಿಂಗಳು ಕಾಡ್ಗಿಚ್ಚು ಹರಡುವ ಕಾಲವಲ್ಲವೆಂದಿರುವ ಸ್ಥಳೀಯರು, ಭೂ ಪ್ರದೇಶವನ್ನು ವಶಪಡಿಸಿಕೊಳ್ಳಲು ಮಾನವ ನಿರ್ಮಿತವೇ ಎಂಬ ಅನುಮಾನ ವ್ಯಕ್ತಪಡಿಸುತ್ತುದ್ದಾರೆ.

Exit mobile version